ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯ ಟೋಲ್ ಸಿಬ್ಬಂದಿ ರೌಡಿಗಳಂತೆ ವರ್ತಿಸುತ್ತಿದ್ದು, ಇದರಿಂದ ವಾಹನ ಚಾಲಕರು ತೊಂದರೆಗೊಳಗಾಗುತ್ತಿದ್ದಾರೆ. ಎರಡು ಬಾರಿ ಬಿಲ್ ನೀಡಿದ್ದನ್ನು ಪ್ರಶ್ನಿಸಿ ಸರಿಯಾಗಿ ವ್ಯವಹರಿಸಿ ಎಂದ ಕಾರಣಕ್ಕೆ ಟೋಲ್ ಸಿಬ್ಬಂದಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು ಹೊರವಲಯ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 4ರ ಜಾಸ್ ಟೋಲ್ ನಲ್ಲಿ ರಾತ್ರಿ ಈ ಘಟನೆ ನಡೆದಿದೆ. ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಬಂದ ಲಾರಿ, ಜಾಸ್ ಟೋಲ್ ನಲ್ಲಿ ಬಿಲ್‍ಗೆ ಹಣ ನೀಡಿದ್ದಾರೆ.
ಮೊದಲು ಟಿಕೆಟ್ ನೀಡಿದ ಸಿಬ್ಬಂದಿ ನಂತರ ಮತ್ತೊಂದು ಟಿಕೆಟ್ ನೀಡಿದ್ದಾನೆ. ಈ ವೇಳೆ ಲಾರಿ ಚಾಲಕ ಎರಡು ಹಣ ಪಡೆದಿರುವುದನ್ನು ಪ್ರಶ್ನಿಸಿ ನ್ಯಾಯವಾಗಿ ವ್ಯವಹರಿಸಿ ಎಂದಿದ್ದಾರೆ. ಇದರಿಂದ ಸಿಟ್ಟುಗೊಂಡ ಟೋಲ್ ಸಿಬ್ಬಂದಿ, ಚಾಲಕನ ಮೊಬೈಲ್ ಕಿತ್ತುಕೊಂಡು ಲಾರಿಯಿಂದ ಹೊರಗೆಳೆದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಚಾಲಕ ನ್ಯಾಯ ನೀಡಿ ನ್ಯಾಯ ನೀಡಿ ಎಂದು ಕೇಳಿಕೊಂಡರು ಟೋಲ್ ಸಿಬ್ಬಂದಿ ಮಾನವೀಯತೆ ಇಲ್ಲದೆ ಥಳಿಸಿದ್ದಾರೆ.
ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸದ್ಯ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv