– ಬ್ಯಾಡ್ಮಿಂಟನ್ ಫೈನಲ್ ಪ್ರವೇಶಿಸಿದ ಸುಹಾಸ್, ಭಗತ್
ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್ 11ನೇ ದಿನ ಭಾರತ ಶುಭಾರಂಭ ಮಾಡಿದ್ದು, ಎರಡು ಪದಕ ಗೆದ್ದುಕೊಂಡಿದೆ. ಶೂಟಿಂಗ್ ಎಸ್‍ಎಚ್-1 ವಿಭಾಗದ 50 ಮೀಟರ್ ಏರ್ ಪಿಸ್ತೂಲ್ ನಲ್ಲಿ ಮನೀಷ್ ನರ್ವಾಲ್ ಚಿನ್ನಕ್ಕೆ ಮುತ್ತಿಟ್ಟರೆ, ಸಿಂಗ್‍ರಾಜ್ ಅಧಾನಾ ಬೆಳ್ಳಿಗೆ ಕೊರಳೊಡ್ಡಿದ್ದಾರೆ.
Advertisement
ಬ್ಯಾಡ್ಮಿಂಟನ್ ಎಸ್‍ಎಲ್-4ರಲ್ಲಿ ನೋಯ್ಡಾದ ಡಿ.ಎಂ. ಸುಹಾಸ್ ಯತಿರಾಜ್ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಮತ್ತೊಂದು ಪದಕ ಅನ್ನೋದನ್ನು ಖಚಿತಪಡಿಸಿದರು. ಇದಕ್ಕೂ ಮೊದಲು ಪ್ರಮೋದ್ ಭಗತ್ ಎಸ್‍ಎಲ್-3ರಲ್ಲಿ ಬೆಳ್ಳಿ ಪದಕ ಖಾತ್ರಿ ಮಾಡಿಕೊಂಡಿದ್ದು, ಚಿನ್ನಕ್ಕಾಗಿ ಆಟ ಆಡಲಿದ್ದಾರೆ.
Advertisement
Relive Singhraj's #silver medal moment! ♥️ #IND
The veteran collects his second medal of the #Tokyo2020 #Paralympics, bettering his #Bronze in the 10m Air Rifle???? pic.twitter.com/aaHE8B9IMD
— Olympic Khel (@OlympicKhel) September 4, 2021
Advertisement
ಮನೀಷ್ ಫೈನಲ್ ನಲ್ಲಿ 209 ಸ್ಕೋರ್ ಮಾಡಿ ಚಿನ್ನ ಗೆದ್ರೆ, ಸಿಂಗ್ ರಾಜ್ 207 ಸ್ಕೋರ್ ಪೇರಿಸಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಅರ್ಹತಾ ಸುತ್ತಿನಲ್ಲಿ ಸಿಂಹರಾಜ್ 536 ಅಂಕಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದರು. ಇದಕ್ಕೂ ಮೊದಲು ಸಿಂಹರಾಜ್ 10 ಮೀಟರ್ ಏರ್ ಪಿಸ್ತೂಲ್ ನಲ್ಲಿ ಕಂಚು ಗೆದ್ದುಕೊಂಡಿದ್ದಾರೆ.
Advertisement
#IND's national anthem echoes across the Asaka shooting range ????
And the nation has a teenager at the ???? of the podium – #Gold for Manish Narwal ♥️#Tokyo2020 #Paralympics #ShootingParaSport pic.twitter.com/sD5X7mneOm
— Olympic Khel (@OlympicKhel) September 4, 2021
ಸೆಮಿಫೈನಲ್ ನಲ್ಲಿ ಪ್ರಮೋದ್ ಭಗತ್, ಜಪಾನಿನ ಫುಜಿಹಾರಾ ಡಾಯಿಸುಕೆ ಅವರನ್ನು 21-11, 21-16 ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ. ಇಂಡೋನೇಷಿಯಾದ ಫ್ರೆಡೀ ಸೇತಿಯಾವಾನ್ ಅವರನ್ನ 21-9, 21-15ರಲ್ಲಿ ಸೋಲಿಸಿದ್ದಾರೆ. ಭಾರತ ಇದುವರೆಗೂ 17 ಪದಕಗಳಿಗೆ ಮುತ್ತಿಕ್ಕಿದೆ. ಇದನ್ನೂ ಓದಿ: ಆರ್ಚರಿ ಕಂಚಿನ ಪದಕ ಗೆದ್ದ ಹರ್ವಿಂದರ್ ಸಿಂಗ್