ದಿಸ್ಪುರ್: ಟೋಕಿಯೊ ಒಲಿಂಪಿಕ್ಸ್-2021ರಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟ ಬಾಕ್ಸರ್ ಲವ್ಲಿನಾ ಬೋರ್ಗೊಹೈನ್ ಈಗ ಅಸ್ಸಾಂ ಡೆಪ್ಯೂಟಿ ಸೂಪರಿಂಟೆಂಡೆಂಟ್ ಪೊಲೀಸ್ (ಡಿಎಸ್‌ಪಿ) ಆಗಿ ಆಯ್ಕೆಯಾಗಿದ್ದಾರೆ.
ಗುವಾಹಟಿಯ ಜನತಾ ಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಬಾಕ್ಸರ್ ಲವ್ಲಿನಾಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನೇಮಕಾತಿ ಪತ್ರ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ
Advertisement
Advertisement
ಅಸ್ಸಾಂ ಮತ್ತು ದೇಶಕ್ಕಾಗಿ ಹೆಚ್ಚಿನ ಪದಕಗಳನ್ನು ಗೆಲ್ಲುವುದು ನನ್ನ ಕರ್ತವ್ಯ. ನಾನು ನನ್ನ ತರಬೇತಿಯತ್ತ ಹೆಚ್ಚು ಗಮನ ಹರಿಸುತ್ತೇನೆ. ಬಾಕ್ಸಿಂಗ್‌ನಿಂದ ನಿವೃತ್ತಿಯಾದ ಮೇಲೆ ಪೊಲೀಸ್ ಕರ್ತವ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದೇನೆ. ಇಂದಿನಿಂದ ನನ್ನ ಜೀವನದಲ್ಲಿ ಹೊಸ ಜವಾಬ್ದಾರಿ ಬಂದಿದೆ. ಇನಷ್ಟು ಪ್ರತಿಭಾವಂತರನ್ನು ಹುಡುಕಲು ಪ್ರಯತ್ನಿಸುತ್ತೇನೆ. ನನಗೆ ಈ ಕೆಲಸವನ್ನು ನೀಡಿದೆ. ಗುರುತರ ಜವಾಬ್ದಾರಿಯನ್ನು ನೀಡಿದ ಅಸ್ಸಾಂ ಸರ್ಕಾರ ನಾನು ಕೃತಜ್ಞಳಾಗಿದ್ದೇನೆ ಎಂದು ಬಾಕ್ಸರ್ ಲವ್ಲಿನಾ ಖುಷಿ ಹಂಚಿಕೊಂಡಿದ್ದಾರೆ.
Advertisement
ಕಳೆದ ವರ್ಷ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 69 ಕೆ.ಜಿ. ವಿಭಾಗದಲ್ಲಿ 24 ವರ್ಷದ ಲವ್ಲಿನಾ ಬೋರ್ಗೊಹೈನ್ ಕಂಚಿನ ಪದಕ ಗೆದ್ದಿದ್ದರು. ಪದಕ ಜಯಿಸಿದ ಮೂರನೇ ಬಾಕ್ಸರ್ ಎನಿಸಿದ್ದರು. ಇದನ್ನೂ ಓದಿ: ಕಳೆದ 24 ಗಂಟೆಯ ಅವಧಿಯಲ್ಲಿ ಯೋಗಿ ಸರ್ಕಾರದ ಎರಡು ಮಂತ್ರಿಗಳು ರಾಜೀನಾಮೆ
Advertisement
ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಸಂದರ್ಭದಲ್ಲಿ ಲವ್ಲಿನಾಗೆ ಅಸ್ಸಾಂ ಸರ್ಕಾರ 1 ಕೋಟಿ ರೂ. ಚೆಕ್ ನೀಡಿತ್ತು. ಜೊತೆಗೆ ಡಿಎಸ್‌ಪಿ ಹುದ್ದೆಯನ್ನು ನೀಡುವ ಭರವಸೆಯನ್ನೂ ನೀಡಿತ್ತು.