ಬೆಳಗಾವಿ: ರಾಖಿ ಕಟ್ಟಿದ ಸಹೋದರಿಯರಿಗೆ ಸಹೋದರರು ಶೌಚಾಲಯವನ್ನು ಗಿಫ್ಟ್ ನೀಡುವ ಮೂಲಕ ವಿಶಿಷ್ಟವಾಗಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ.
ಬೆಳಗಾವಿ ತಾಲೂಕಿನ ಹುಲ್ಯಾನೂರು ಗ್ರಾಮಸ್ಥರು ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಸಹೋದರಿಯರಿಗೆ ಸ್ವಾಭಿಮಾನ-ರಕ್ಷಣೆಯ ಸಂಕೇತವಾಗಿ ಶೌಚಾಲಯವನ್ನು ಗಿಫ್ಟ್ ನೀಡಿದ್ದಾರೆ.
ಈ ಹುಲ್ಯಾನೂರು ಗ್ರಾಮದಲ್ಲಿ 35 ಶೌಚಾಲಯ ಏಕಕಾಲಕ್ಕೆ ಉಡುಗರೆ ರೂಪದಲ್ಲಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ರಾಮಚಂದ್ರನ್ ಸೇರಿ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು.
ಇತ್ತೀಚಿಗೆ ಬೆಳಗಾವಿ ಜಿಲ್ಲಾ ಪಂಚಾಯತ್ ಶೌಚಾಲಯ ನಿರ್ಮಿಸಿದ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡುವ ಮೂಲಕ ಗಮನ ಸೆಳೆದಿತ್ತು. ಈಗ ರಕ್ಷ ಬಂಧನಕ್ಕೆ ಶೌಚಾಲಯವನ್ನು ಗಿಫ್ಟ್ ಕೊಡುವ ಮೂಲಕ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.