ಬಾಗಲಕೋಟೆ| ರಸ್ತೆಗಳಲ್ಲಿ ಶೌಚಗುಂಡಿ, ಒಳಚರಂಡಿ ತುಂಬಿ ಮನೆಗೆ ನುಗ್ಗುತ್ತಿವೆ ಕೊಳಚೆ ನೀರು

Public TV
2 Min Read
Toilets and sewers are overflowing on the roads and sewage water is entering the house 1

ಬಾಗಲಕೋಟೆ: ವಿದ್ಯಾಗಿರಿಯಲ್ಲಿ ಒಳಚರಂಡಿ ನಿರ್ವಹಣೆಯನ್ನು ಬಾಗಲಕೋಟೆ (Bagalkote) ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (BTDA) ಬಿಟಿಡಿಎ ಕೈ ಬಿಟ್ಟಿದೆ. ಪರಿಣಾಮ ರಸ್ತೆಗಳಲ್ಲಿ ಶೌಚಗುಂಡಿಗಳು, ಒಳಚರಂಡಿ ತುಂಬಿ ಹರಿಯುತ್ತಿದ್ದು ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ.

ದಿಢೀರ್‌ ನಿರ್ಮಾಣವಾಗಿರುವ ಈ ಸ್ಥಿತಿಯಿಂದ ನಗರಸಭೆ ಸಿಬ್ಬಂದಿಯೂ ಅಸಹಾಯಕರಾಗಿದ್ದಾರೆ. ವಿದ್ಯಾಗಿರಿ ನಗರಸಭೆ ನಿರ್ವಹಣೆಗೆ ಒಳಪಟ್ಟರೂ ಈವರೆಗೆ ಇಲ್ಲಿನ ಒಳಚರಂಡಿಯನ್ನು (Drainage) ಬಿಟಿಡಿಎಯಿಂದ ನಿರ್ವಹಿಸಲಾಗುತ್ತಿತ್ತು. ಆದರೆ ಲೆಕ್ಕಪರಿಶೋಧಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ನಿರ್ವಹಣೆ ಸಾಧ್ಯವಿಲ್ಲ ಎಂದು ಬಿಟಿಡಿಎ ಕೈ ತೊಳೆದುಕೊಂಡಿದೆ.

Toilets and sewers are overflowing on the roads and sewage water is entering the house 3

ವಿದ್ಯಾಗಿರಿಯ ತೆಗ್ಗಿಲೇಔಟ್, ರೂಪ್‌ಲ್ಯಾಂಡ್, ಕುದರಿಕನ್ನೂರ ಲೇಔಟ್, ರೋಣ ಲೇಔಟ್, ಫುಡ್‌ಸ್ಟೇಶನ್ ಮುಂಭಾಗ ರಸ್ತೆಗಳಲ್ಲೇ ನೀರು ಉಕ್ಕಿ ಹರಿಯುತ್ತಿದೆ. ತೆಗ್ಗಿ ಲೇಔಟ್‌ನಲ್ಲಿ ನೀರು ಮನೆಗೆ ನುಗ್ಗಿದ್ದು, ನಮ್ಮ ಕಷ್ಟ ಕೇಳುವವರು ಯಾರು ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಜನ ಗೋಳಾಡುತ್ತಿದ್ದಾರೆ. ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್‌ನನ್ನು ಎನ್‌ಕೌಂಟರ್‌ ಮಾಡಿದ್ರೆ 1,11,11,111 ರೂ. ಬಹುಮಾನ – ಕರ್ಣಿ ಸೇನೆಯಿಂದ ಘೋಷಣೆ

ಈ ಕುರಿತು ಮಾತನಾಡಿದ ನಗರಸಭೆ ಸದಸ್ಯ ವೀರಪ್ಪ ಶಿರಗಣ್ಣವರ ಪ್ರತಿಕ್ರಿಯಿಸಿ, ನಗರಸಭೆ ಬಳಿ ಇರುವ ಒಂದು ವಾಹನದಿಂದಲೇ ಎಲ್ಲವನ್ನು ಸ್ವಚ್ಛಗೊಳಿಸುವ ಪ್ರಯತ್ನ ನಡೆದಿದೆ. ಸಿಬ್ಬಂದಿ ಸಹಕಾರಿಯಾಗಿದ್ದಾರೆ ಎಂಬ ಕಾರಣಕ್ಕೆ ಎಷ್ಟೇ ಕೆಲಸ ಬಂದರೂ ಅವರು ಗೊಣಗದೇ ಕೆಲಸ ಮಾಡುತ್ತಿದ್ದಾರೆ. ಬಾಗಲಕೋಟೆಯ ಶಾಸಕರು ಬಿಟಿಡಿಎಗೆ ಸಭಾಪತಿಯಾಗಿದ್ದು, ಇಂಥ ಸಂದರ್ಭದಲ್ಲಿ ಜನಕ್ಕೆ ನೆರವಾಗುವ ಕೆಲಸ ಮಾಡಬೇಕಿದೆ ಎಂದರು.Toilets and sewers are overflowing on the roads and sewage water is entering the house 2

ಬಿಟಿಡಿಎ-ನಗರಸಭೆ ಸಿಬ್ಬಂದಿಯನ್ನು ಕರೆದು ಬಗೆಹರಿಸುವ ಕೆಲಸವನ್ನಾದರೂ ಮಾಡಬೇಕು. ನಾವು ಸಾಧ್ಯವಾದಷ್ಟು ಜನರ ತೊಂದರೆಯನ್ನು ನಿವಾರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ವಿದ್ಯಾಗಿರಿಯಲ್ಲಿನ ಒಳಚರಂಡಿ ನಿರ್ವಹಣೆ ಸಂಬಂಧ ನಗರಸಭೆಯಿಂದ ಟೆಂಡರ್ ಕರೆಯಬೇಕಿದ್ದು, ಅಲ್ಲಿಯವರೆಗೂ ಜನರ ಕಷ್ಟ ತಪ್ಪಿದಲ್ಲ ಎಂಬ ಮಾತು ಕೇಳಿ ಬಂದಿದೆ. ಇದನ್ನೂ ಓದಿ: ತುಂಗಾ ಮೇಲ್ದಂಡೆ ಕಾಲುವೆ ಒಡೆದು ಅಪಾರ ಪ್ರಮಾಣದ ಬೆಳೆಹಾನಿ

ಈ ನಡುವೆ ವಿದ್ಯಾಗಿರಿಯ 20ನೇ ಕ್ರಾಸ್ ನಲ್ಲಿ ಹೊಸದಾಗಿ ರಸ್ತೆ ಡಾಂಬರೀಕರಣ ಮಾಡಲಾಗಿದ್ದು, ರಸ್ತೆ ಕೆಳಭಾಗದ ಪೈಪ್‌ಗಳು ಒಡೆದು ನಿರಂತರವಾಗಿ ನೀರು ಪೋಲಾಗುತ್ತಿದೆ. ಈ ಬಗ್ಗೆಯೂ ಸಾರ್ವಜನಿಕರು ದೂರು ನೀಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.

Share This Article