ಅಮರಾವತಿ: ಎರಡು ವರ್ಷದ ಹೆಣ್ಣು ಮಗುವೊಂದು ಹಕ್ಕಿಜ್ವರಕ್ಕೆ (Bird Flu) ಬಲಿಯಾಗಿರುವ ಘಟನೆ ಆಂಧ್ರಪ್ರದೇಶದ (Andhra Pradesh ) ಪಲ್ನಾಡು ಜಿಲ್ಲೆಯ ನರಸರಾವ್‌ಪೇಟೆಯಲ್ಲಿ ನಡೆದಿದೆ.
ಮಾರ್ಚ್ 15ರಂದು ಮಗು ಮೃತಪಟ್ಟಿದೆ. ಈ ಹಿನ್ನೆಲೆ ಮಗುವಿನ ಸ್ಯಾಂಪಲ್ ಅನ್ನು ಪುಣೆ ಮೂಲದ ರಾಷ್ಟ್ರೀಯ ವೈರಾಲಜಿಗೆ ಕಳುಹಿಸಲಾಗಿತ್ತು. ಸ್ಯಾಂಪಲ್ ಪರೀಕ್ಷೆಯಲ್ಲಿ ಮಗು ಹಕ್ಕಿಜ್ವರದಿಂದ ಮೃತಪಟ್ಟಿರುವುದು ಧೃಡಪಟ್ಟಿದೆ. ಇದನ್ನೂ ಓದಿ: ರಾಜೇಂದ್ರ ಕೊಲೆ ಸಂಚು ಪ್ರಕರಣ – ಮುಖ್ಯ ಆರೋಪಿ ಸೋಮ ಪೊಲೀಸರಿಗೆ ಶರಣು
ಮಂಗಳಗಿರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮಗು ಸಾವನ್ನಪ್ಪಿದೆ. ಪಲ್ನಾಡು ಜಿಲ್ಲೆಯಲ್ಲಿ ಯಾವುದೇ ಹಕ್ಕಿಜ್ವರದ ಪ್ರಕರಣಗಳು ವರದಿಯಾಗಿಲ್ಲ. ಆದರೆ ಮಗುವಿಗೆ ಹೇಗೆ ಸೋಂಕು ತಗುಲಿತು ಎಂಬುದು ಇನ್ನೂ ಅಸ್ಪಷ್ಟ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 6 ವಾರಗಳಲ್ಲಿ ಓಲಾ, ಉಬರ್ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ
ಮಗು ಆಗಾಗ ಹಸಿ ಕೋಳಿಮಾಂಸದ ತುಂಡುಗಳನ್ನು ತಿನ್ನುತ್ತಿತ್ತು. ರೋಗಲಕ್ಷಣಗಳು ಕಾಣಿಸುವ ಮೊದಲೂ ಮಗು ಒಂದು ತುಂಡು ಮಾಂಸ ತಿಂದಿದ್ದಳು. ಹೀಗಾಗಿ ಮಗುವಿಗೆ ಕೋಳಿಜ್ವರ ಹರಡಿರಬಹುದು ಎಂದು ಶಂಕಿಸಲಾಗಿದೆ. ಈ ಬೆನ್ನಲ್ಲೇ ಮಗುವಿನ ಪೋಷಕರು ಹಾಗೂ ಕುಟುಂಬಸ್ಥರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಆದರೆ ಅವರಲ್ಲಿ ಯಾವುದೇ ಸೋಂಕು ಅಥವಾ ಲಕ್ಷಣಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 105 ಮೀಟರ್ ಭರ್ಜರಿ ಸಿಕ್ಸರ್ – ಈ ಐಪಿಎಲ್‌ನಲ್ಲಿ ಫಿಲ್ ಸಾಲ್ಟ್ ವಿಶೇಷ ಸಾಧನೆ