ಮಂಡ್ಯ: ಕಾವೇರಿ (Cauvery River) ಜಲಾನಯನ ಪ್ರದೇಶದಲ್ಲಿ ಮಳೆ (Rain) ಕಡಿಮೆಯಾದ ಪರಿಣಾಮ ಕೆಆರ್‌ಎಸ್ (KRS) ಡ್ಯಾಂಗೆ ಹರಿದು ಬರುತ್ತಿದ್ದ ನೀರಿನ ಒಳಹರಿವಿನ ಪ್ರಮಾಣ ಮತ್ತೆ ಕುಸಿತ ಕಂಡಿದೆ.
ಇಂದಿನ ಒಳಹರಿವು 5861 ಕ್ಯೂಸೆಕ್ ಆಗಿದ್ದು, ಮಂಗಳವಾರ 11,800 ಕ್ಯೂಸೆಕ್ ಮತ್ತು ಬುಧವಾರ 9,052 ಕ್ಯೂಸೆಕ್ ಒಳ ಹರಿವು ಇತ್ತು. ಕಳೆದ ಮೂರು ದಿನಗಳಿಂದ ಒಳಹರಿವಿನ ಪ್ರಮಾಣ ಹೆಚ್ಚಿದ್ದರಿಂದ ಡ್ಯಾಂ ನೀರಿನ ಮಟ್ಟ 100 ಅಡಿಗಳಷ್ಟು ಏರಿಕೆ ಕಂಡಿತ್ತು. ಅಷ್ಟರಲ್ಲೇ ಈಗ ಮತ್ತೆ ಒಳಹರಿವು ಕುಸಿದಿದೆ. ಇದನ್ನೂ ಓದಿ: ಕಾಂಗ್ರೆಸ್ ಅಂದ್ರೆ ಹಿಂದೂ ವಿರೋಧಿ ಅನ್ನೋದು ಸ್ಪಷ್ಟವಾಗಿದೆ: ಅಶ್ವಥ್ ನಾರಾಯಣ್
Advertisement
Advertisement
ಕೆಲವು ದಿನಗಳಿಂದ 97 ಅಡಿಗೆ ಕುಸಿದಿದ್ದ ನೀರಿನ ಮಟ್ಟ. 20 ಟಿಎಂಸಿಯಿಂದ 23 ಟಿಎಂಸಿಗೆ ಏರಿಕೆಯಾಗಿದೆ. ಪ್ರಸ್ತುತ ಡ್ಯಾಂನಿಂದ ತಮಿಳುನಾಡಿಗೆ 1489 ಕ್ಯೂಸೆಕ್ ಬಿಡುಗಡೆ ಮಾಡಲಾಗುತ್ತಿದೆ. ಇದನ್ನೂ ಓದಿ: ಸಿಕ್ಕಿಂ ಪ್ರವಾಹ – 102 ಜನ ನಾಪತ್ತೆ, ಸಾವಿನ ಸಂಖ್ಯೆ 14ಕ್ಕೆ ಏರಿಕೆ
Advertisement
Advertisement
ಕೆಆರ್‌ಎಸ್ ಡ್ಯಾಂ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 100.82 ಅಡಿಗಳು
ಗರಿಷ್ಠ ಸಾಮಥ್ರ್ಯ – 49.452 ಟಿಎಂಸಿ
ಇಂದು ಸಂಗ್ರಹ ನೀರು – 23.460 ಟಿಎಂಸಿ
ಒಳ ಹರಿವು – 5861 ಕ್ಯೂಸೆಕ್
ಹೊರ ಹರಿವು – 1489 ಕ್ಯೂಸೆಕ್
Web Stories