– 45 ವರ್ಷಗಳ ಬಳಿಕ ಭಾರತದ ಪ್ರಧಾನಿ ಪೋಲೆಂಡ್‍ಗೆ
ವಾರ್ಸಾ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಉಕ್ರೇನ್ (Ukraine) ಹಾಗೂ ಪೋಲೆಂಡ್ (Poland) ಪ್ರವಾಸದ ಮೊದಲ ಹಂತದಲ್ಲಿ ಪೋಲೆಂಡ್‍ಗೆ ಭೇಟಿ ನೀಡಿದ್ದಾರೆ.
Advertisement
ವಾರ್ಸಾದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ. ಈ ವೇಳೆ, ಭಾರತವು ಭಗವಾನ್ ಬುದ್ಧನ ಪರಂಪರೆಯ ನಾಡು. ಆದ್ದರಿಂದ, ಭಾರತವು ಜಗತ್ತಿನ ಎಲ್ಲೆಡೆ ಶಾಶ್ವತ ಶಾಂತಿಯನ್ನು ಪ್ರತಿಪಾದಿಸಿಸುತ್ತದೆ. ಇದು ಯುದ್ಧದ ಯುಗವಲ್ಲ. ಭಾರತವು ಯಾವಾಗಲೂ ಸಂಘರ್ಷವನ್ನು ಪರಿಹರಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬಲವಾಗಿ ನಂಬುತ್ತದೆ. ನಾವು ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ಪರಿಗಣಿಸಿದ್ದೇವೆ ಮತ್ತು ಇದು ಇಂದಿನ ಭಾರತದ ನೀತಿಗಳು ಮತ್ತು ನಿರ್ಧಾರಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ ಎಂದಿದ್ದಾರೆ.
Advertisement
ಇಂದಿನ ಭಾರತವು ಎಲ್ಲರೊಂದಿಗೆ ಸಂಪರ್ಕ ಹೊಂದಲು ಬಯಸುತ್ತದೆ. ಈ ಮೂಲಕ ಎಲ್ಲರ ಅಭಿವೃದ್ಧಿ ಹಾಗೂ ಹಿತಾಸಕ್ತಿಗಳ ಬಗ್ಗೆ ಯೋಚಿಸುತ್ತದೆ. ಕೋವಿಡ್ ಬಂದಾಗ, ಭಾರತ ಮಾನವೀಯತೆಯೇ ಮೊದಲು ಎಂದು ಹೇಳಿತ್ತು. ನಾವು ವಿಶ್ವದ 150 ಕ್ಕೂ ಹೆಚ್ಚು ದೇಶಗಳಿಗೆ ಔಷಧಗಳು ಮತ್ತು ಲಸಿಕೆಗಳನ್ನು ಕಳುಹಿಸಿದ್ದೇವೆ. ಎಲ್ಲಿ ಭೂಕಂಪ ಅಥವಾ ಯಾವುದೇ ವಿಪತ್ತು ಸಂಭವಿಸಿದರೂ ಭಾರತಕ್ಕೆ ಮಾನವೀಯತೆ ಒಂದೇ ಮೊದಲ ಮಂತ್ರ ಎಂದು ಶಾಂತಿಯ ಸಂದೇಶ ಸಾರಿದ್ದಾರೆ.
Advertisement
Advertisement
ಭಾರತ ಮತ್ತು ಫೋಲೆಂಡ್ ಬಹಳಷ್ಟು ಸಾಮ್ಯತೆಗಳನ್ನು ಹೊಂದಿವೆ. ಅವುಗಳಲ್ಲಿ ಒಂದು ಪ್ರಜಾಪ್ರಭುತ್ವವಾಗಿದೆ. ಭಾರತವು ಪ್ರಜಾಪ್ರಭುತ್ವದ ತಾಯಿ, ನಮ್ಮ ದೇಶದ ಜನರು ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ವಿಶ್ವಾಸ ಹೊಂದಿದ್ದಾರೆ ಮತ್ತು ಇದು ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ ಅದು ಸ್ಪಷ್ಟವಾಗಿದೆ ಎಂದಿದ್ದಾರೆ.
ಬಳಿಕ 2022 ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗ ಭಾರತೀಯ ವಿದ್ಯಾರ್ಥಿಗಳಿಗೆ ನೀಡಿದ ಬೆಂಬಲಕ್ಕಾಗಿ ಮೋದಿ ಧನ್ಯವಾದ ಅರ್ಪಿಸಿದರು. ಕಳೆದ 45 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‍ಗೆ ಭೇಟಿ ನೀಡಿರುವುದು ಇದಾಗಿದೆ.