ಬೆಂಗಳೂರು: ಕೊರೊನಾ ವೈರಸ್ ಷೇರು ಮಾರುಕಟ್ಟೆ ಮೇಲೆ ಕರಾಳ ಛಾಯೆ ಬೀರಿದ ಪರಿಣಾಮ ಚಿನ್ನದ ಬೆಲೆ ಗಗನಕ್ಕೇರಿದೆ. ಶುಕ್ರವಾರ ಒಂದೇ ದಿನಕ್ಕೆ 10 ಗ್ರಾಂ ಚಿನ್ನದ ಬೆಲೆ 990 ರೂ. ಹೆಚ್ಚಳ ಕಂಡಿದೆ.
ಒಂದು ತಿಂಗಳಿನಲ್ಲಿ (ಫೆಬ್ರವರಿ 6ರಿಂದ ಮಾರ್ಚ್ 6ರವರೆಗೆ) 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 3,940 ರೂ. ಹೆಚ್ಚಾಗಿದೆ. ಅಂದರೆ ಫೆಬ್ರವರಿ 6ರಂದು 41,750 ರೂ. ಇದ್ದರೆ, ಇಂದು ಚಿನ್ನದ ಬೆಲೆ 45,690 ರೂ.ಗೆ ಏರಿಕೆ ಆಗಿದೆ. ಈ ಮಧ್ಯೆ ಅಂದ್ರೆ ಫೆಬ್ರವರಿ 29ರಂದು ಚಿನ್ನದ ಬೆಲೆ 43 ಸಾವಿರ ರೂ. ಇತ್ತು. ಆದರೆ ಆ ಬಳಿಕ ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ.
Advertisement
Advertisement
ಬೆಂಗಳೂರಿನಲ್ಲಿ 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ ಮಾರ್ಚ್ 2 ಹಾಗೂ 3ರಂದು 43,510 ರೂ., ಮಾರ್ಚ್ 4ರಂದು 44,570 ರೂ. ಹಾಗೂ ಮಾರ್ಚ್ 5ರಂದು 44,700 ರೂ. ಇತ್ತು. ಆದರೆ ಇಂದು 45,690 ರೂ.ಗೆ ಏರಿಕೆಯಾಗಿದೆ. ಈ ಮೂಲಕ ಒಂದೇ ದಿನಕ್ಕೆ 10 ಗ್ರಾಂ ಚಿನ್ನದ ಬೆಲೆ 990 ರೂ. ಹೆಚ್ಚಳವಾಗಿದೆ.
Advertisement
ಷೇರುಪೇಟೆ ಭಾರೀ ಕುಸಿತ ಕಾಣುತ್ತಿದೆ. ಹೀಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.