ಪವಿತ್ರ ಕಡ್ತಲ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ ಮಂಜುನಾಥ ಕ್ಷೇತ್ರ ದರ್ಶನ ಹಾಗೂ ಬೆಂಗಳೂರಿನಲ್ಲಿ ನಡೆದ ಸೌಂದರ್ಯಲಹರಿ ಕಾರ್ಯಕ್ರಮ ಹಿಂದಿನ ಮಹಾರಹಸ್ಯ ಬಯಲಾಗಿದೆ. ಧರ್ಮಸ್ಥಳಕ್ಕೆ ಮೋದಿ ಇಂದೇ ಭೇಟಿ ಕೊಡಲು ವಿಶೇಷ ಕಾರಣವಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ಖ್ಯಾತ ಜ್ಯೋತಿಷಿಗಳ ಸಲಹೆಯ ಮೇರೆಗೆ ನರೇಂದ್ರ ಮೋದಿ ಧರ್ಮಸ್ಥಳಕ್ಕೆ ಬಂದಿರೋದಂತೆ.
Advertisement
ಇಂದು ಶಿವ ದರ್ಶನ ಪಡೆದ್ರೆ ಅದ್ಭುತವೊಂದು ಸಂಭವಿಸಲಿದೆ. ಕಾರ್ತಿಕ ಮಾಸದ ನವಮಿ ಶ್ರೇಷ್ಠ ದಿನವಾಗಿದ್ದು ಇಂದು ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರೆ ಅತೀತ ಶಕ್ತಿ ಸಿಗಲಿದೆ. ಶಿವಶಕ್ತಿಯ ಪ್ರಾಪ್ತಿಗಾಗಿಯೇ ಮೋದಿ ಕರ್ನಾಟಕಕ್ಕೆ ಬಂದ್ರು ಎನ್ನಲಾಗಿದೆ. ಕಾರ್ತಿಕ ಮಾಸ ಅಂದ್ರೆ ಧರ್ಮಸ್ಥಳದಲ್ಲಿ ಅದು ಪುಣ್ಯ ಮಾಸ. ಇಂದು ಈಶ್ವರ ಪೂಜೆಗೆ ಸರ್ವಶ್ರೇಷ್ಠ. ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ನಡೆಯುತ್ತಿದೆ. ಜೊತೆಗೆ ಇಂದು ನವಮಿಯೂ ಹೌದು. ನವಮಿ ಪುರಾಣದಲ್ಲೂ ಉಲ್ಲೇಖವಿದೆ. ನವಮಿಯಲ್ಲಿ ಧರ್ಮಸ್ಥಳ ಯಾತ್ರೆ ಗೆಲುವಿಗೆ ಸಹಕಾರಿ. 2014ರಲ್ಲಿ ಮೋದಿ ಅಲೆ ಇತ್ತು, ಆದರೆ ಈಗ ಶ್ರಮ ಬೇಕಾಗಿದೆ. ಅದಕ್ಕಾಗಿ ಮಂಜುನಾಥನ ಕೃಪೆ ಅತ್ಯಗತ್ಯ. ವೀರೇಂದ್ರ ಹೆಗ್ಗಡೆಯವರ ಧರ್ಮಾಧಿಕಾರಿಗಳ ಪೀಠದಿಂದಲೇ ಅವ್ರಿಗೆ ಪುಣ್ಯ ಲಭಿಸುತ್ತದೆ. ಮೋದಿಗೆ ವೈಯಕ್ತಿಕ ಸ್ವಾರ್ಥ ಇಲ್ಲ, ಅವರು ಮನೆ ಮಾಡಿಕೊಂಡಿಲ್ಲ, ಅವರು ಸನ್ಯಾಸಿ. ದೇಶದ ಒಳಿತಿಗಾಗಿ ಬಯಸುವ ಮನಸ್ಸು ಮೋದಿಯದ್ದು. ಮೋದಿ ಮುಂದಿನ ಪ್ರಯಾಣ ಸುಖವಾಗಿರುತ್ತದೆ ಎಂದು ಖ್ಯಾತ ಜ್ಯೋತಿಷಿ ದ್ವಾರಕಾನಾಥ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
Advertisement
Advertisement
ಬೆಂಗಳೂರಿನಲ್ಲಿ ನಡೆದ ಸೌಂದರ್ಯ ಲಹರಿ ಕಾರ್ಯಕ್ರಮದಲ್ಲಿ ಕೂಡಾ ಶಕ್ತಿದಾಯಿ ಪಾರ್ವತಿ ಆರಾಧನೆ ನಡೆಯುತ್ತಿದೆ. ಶಿವ ಪಾರ್ವತಿ ಸಾಕ್ಷಾತ್ಕಾರದಿಂದ ಮೋದಿಗೆ ಅತೀತ ಶಕ್ತಿ ಬರಲಿದೆ. ಇದು ಶಿವ ಶಕ್ತಿಯ ಮುಖಾಮುಖಿ. ಒಂದೇ ದಿನಕ್ಕೆ ಶಿವ ಪಾರ್ವತಿಯ ದರ್ಶನ ಭಾಗ್ಯ. ರಾಜಕೀಯ ಶಕ್ತಿ ಪಡೆಯಲೆಂದೇ ಮೋದಿ ಕರ್ನಾಟಕಕ್ಕೆ ಬಂದಿದ್ದಾರೆ ಎಂದು ದ್ವಾರಕಾನಾಥ್ ಮಾಹಿತಿ ನೀಡಿದ್ದಾರೆ. ಪಾರ್ವತಿ ಈಶ್ವರನ ದರ್ಶನದಿಂದ ಜಗತ್ತೆ ಗೆಲ್ಲುವ ಶಕ್ತಿ ಪ್ರಾಪ್ತಿಯಾಗುತ್ತದೆ. ಇದಕ್ಕಾಗಿ ನವಮಿ ದಿನವೇ ಪುಣ್ಯ ಕ್ಷೇತ್ರಕ್ಕೆ ನರೇಂದ್ರ ಮೋದಿ ಬಂದು ಪ್ರಾರ್ಥನೆ ಸಲ್ಲಿಸಿದ್ರು ಎನ್ನಲಾಗಿದೆ. ಶಿವ ಪಾರ್ವತಿಯ ಆರಾಧನೆ ಇಂದು ನಡೆದ್ರೆ ಜಗತ್ತನ್ನೇ ನೀಡ್ತಾರೆ. ಭಾರತ ದೇಶವನ್ನು ಮೋದಿಯ ಕೈಯಲ್ಲಿ ಇಡೋದು ಗ್ಯಾರಂಟಿ. ಮೋದಿಗೆ ವಿರೋಧಿ ಶಕ್ತಿಯಿಂದಲೂ ರಕ್ಷಣೆ ಸಿಗಲಿದೆ. ದೇಶಕ್ಕೆ ಬಂದಿರುವ ಸಂಕಷ್ಟಗಳೆಲ್ಲಾ ದೂರವಾಗುತ್ತದೆ ಎನ್ನುವುದು ಜ್ಯೋತಿಷಿಗಳ ಮಾತು.
Advertisement