ನವದೆಹಲಿ: 5 ವರ್ಷಗಳ ಹಿಂದೆ ವಿಶ್ವದ ಟಾಪ್ 200 ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಭಾರತದ ಯಾವುದೇ ಸಂಸ್ಥೆ ಸ್ಥಾನ ಪಡೆದಿರಲಿಲ್ಲ. ಆದರೆ ಸರ್ಕಾರ ನೀಡಿದ ಪ್ರೋತ್ಸಾಹದಿಂದ ಈಗ ಈ ಪಟ್ಟಿಯಲ್ಲಿ ಮೂರು ಸಂಸ್ಥೆಗಳು ಸ್ಥಾನ ಪಡೆದಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ತಮ್ಮ ಬಜೆಟ್ ಭಾಷಣದಲ್ಲಿ ಸೀತಾರಾಮನ್, ದೇಶದ ಎರಡು ಐಐಟಿ, ಬೆಂಗಳೂರಿನ ಐಐಎಸ್‍ಸಿ ಈ ಪಟ್ಟಿಯಲ್ಲಿ ಈಗ ಸ್ಥಾನ ಪಡೆದಿದೆ. ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದರು.
Advertisement
National Research Foundation will step up research in thrust areas
National Sports Education Goard to be set up under @kheloindia, for development of sportspersons
➡️https://t.co/eaGif2cqrL#BudgetForNewIndia #Budget2019 pic.twitter.com/Fo9oXKQ8wY
— PIB India (@PIB_India) July 5, 2019
Advertisement
2019-20ರ ಸಾಲಿನಲ್ಲಿ ‘ವಿಶ್ವ ದರ್ಜೆಯ ಇನ್‍ಸ್ಟಿಟ್ಯೂಷನ್’ ಅಡಿಯಲ್ಲಿ 400 ಕೋಟಿ ರೂ. ಮೀಸಲಿಟ್ಟಿದ್ದೇವೆ. ಈ ಹಿಂದಿನ ಅವಧಿಗೆ ಹೋಲಿಸಿದರೆ 3 ಪಟ್ಟಿ ಹೆಚ್ಚಳ ಹಣ ಇದಾಗಿದೆ. ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ಉನ್ನತ ಶಿಕ್ಷಣ ಕಲಿಯಲು ಪ್ರೋತ್ಸಾಹ ನೀಡುವ ನಿಟ್ಟಿಲ್ಲಿ ‘ಸ್ಟಡಿ ಇನ್ ಇಂಡಿಯಾ’ ಹೆಸರಿನಲ್ಲಿ ಕಾರ್ಯಕ್ರಮ ತರುತ್ತೇವೆ ಎಂದು ತಿಳಿಸಿದರು.