ಅಂದು ಬೇಡವಾಗಿದ್ದ ಸಿನಿಮಾದಲ್ಲೇ ಇಂದು ನಟಿಸುತ್ತಿದ್ದಾರೆ ವಿದ್ಯಾ ಬಾಲನ್

Public TV
2 Min Read
vidya balan 1

ಬಾಲಿವುಡ್ ನ ಭೂಲ್ ಭುಲಯ್ಯ ಸಿನಿಮಾಗೆ ದೊಡ್ಡದೊಂದು ಇತಿಹಾಸವೇ ಇದೆ. ಈಗಾಗಲೇ ಎರಡು ಭಾಗದಲ್ಲಿ ಅದು ಮೂಡಿ ಬಂದಿದೆ. ಮೂರನೇ (Bhool Bhulayya 3) ಭಾಗದ ಚಿತ್ರೀಕರಣಕ್ಕೆ ನಿರ್ದೇಶಕ ಅನೀಸ್ ರೆಡಿ ಆಗುತ್ತಿದ್ದಾರೆ. ಈ ಸಮಯದಲ್ಲಿ ವಿದ್ಯಾ ಬಾಲನ್ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ ನಿರ್ದೇಶಕರು.

vidya balan

ಭೂಲ್ ಭುಲಯ್ಯ ಸಿನಿಮಾದಲ್ಲಿ ವಿದ್ಯಾ ಬಾಲನ್ (Vidya Balan) ಮತ್ತು ಅಕ್ಷಯ್ ಕುಮಾರ್ (Akshay Kumar) ಜೋಡಿ ಮೋಡಿ ಮಾಡಿತ್ತು. ಅದರಲ್ಲೂ ವಿದ್ಯಾ ಬಾಲನ್ ಮಾಡಿದ್ದ ಮಂಜುಲಿಕಾ ಪಾತ್ರ ಅಭಿಮಾನಿಗಳ ಸೆಳೆದಿತ್ತು. ಬಾಕ್ಸ್ ಆಫೀಸಿನಲ್ಲೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್‍ ಸಿಕ್ಕಿತ್ತು. ಎರಡನೇ ಭಾಗ ಮಾಡುವಾಗ ಈ ಜೋಡಿಯೇ ಇರಲಿಲ್ಲ. ಈ ಎರಡೂ ಪಾತ್ರಗಳಿಗೆ ಬೇರೆ ಬೇರೆ ಕಲಾವಿದರೇ ನಟಿಸಬೇಕಾಯಿತು.

Akshay Kumar 3

ಕೊರೋನಾ ನಂತರ ಬಾಲಿವುಡ್ ಸಿನಿಮಾಗಳು ಮಕಾಡೆ ಮಲಗಿದ್ದವು. ಸ್ಟಾರ್ ನಟರ ಸಿನಿಮಾಗಳು ಬಂದರೂ, ಪ್ರೇಕ್ಷಕ ಮಾತ್ರ ಅವುಗಳನ್ನು ಸ್ವೀಕರಿಸಲೇ ಇಲ್ಲ. ಅದರಲ್ಲೂ ದಕ್ಷಿಣದ ಸಿನಿಮಾಗಳ ಮುಂದೆ ಬಾಲಿವುಡ್ ಮಂಡಿಯೂರಿತ್ತು. ಇವೆಲ್ಲ ಅವಮಾನಗಳನ್ನು ನಿವಾರಿಸಲು ಎಂಬಂತೆ ಬಂದಿದ್ದೇ ಕಾರ್ತಿಕ್ ಆರ್ಯನ್ (Karthik Aryan)  ನಟನೆಯ ‘ಭುಲ್ ಭುಲಯ್ಯ 2’ ಸಿನಿಮಾ. ಬಾಕ್ಸ್ ಆಫೀಸಿನಲ್ಲಿ ಭಾರೀ ಸದ್ದು ಮಾಡುವುದರ ಮೂಲಕ ಬಾಲಿವುಡ್ ಮಾನ ಮರ್ಯಾದೆ ಉಳಿಸಿತ್ತು.

karthik aryan

ಐವತ್ತು ಕೋಟಿಯಲ್ಲಿ ನಿರ್ಮಾಣವಾದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗಳಿಸಿದ್ದು ಬರೋಬ್ಬರಿ 185 ಕೋಟಿ ಎನ್ನಲಾಗಿತ್ತು. ನಿರೀಕ್ಷೆಗೂ ಮೀರಿ ಹಣ ಬಂದಿರುವ ಕಾರಣಕ್ಕಾಗಿ ತಮ್ಮ ಸಿನಿಮಾದ ನಾಯಕ ನಟ ಕಾರ್ತಿಕ್ ಆರ್ಯನ್ ಅವರಿಗೆ ಭರ್ಜರಿ ಉಡುಗೊರೆಯನ್ನೇ ನೀಡಿದ್ದರು ನಿರ್ಮಾಪಕ ಭೂಷಣ್ ಕುಮಾರ್.  ಅಂದಾಜು ನಾಲ್ಕು ಕೋಟಿ ರೂಪಾಯಿ ಮೌಲ್ಯದ ಮೆಕ್ ಲಾರೆನ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾದ್ದರು. ಟಬು, ಕಿಯಾರ ಅಡ್ವಾನಿ ಪಾತ್ರ ಮಾಡಿದ್ದರು.

 

ಇದೀಗ ಮೂರನೇ ಭಾಗ ಮೂಡಿ ಬರುತ್ತಿದೆ. ಈ ಸಿನಿಮಾದಲ್ಲಿ ಮತ್ತೆ ವಿದ್ಯಾ ಬಾಲನ್ ನಟಿಸುತ್ತಿದ್ದಾರೆ. ತಮ್ಮ ಮಂಜುಲಿಕಾ ಪಾತ್ರವನ್ನೇ ಅವರು ಮುಂದುವರೆಸಲಿದ್ದಾರಂತೆ. ಆದರೆ, ಅಕ್ಷಯ್ ಕುಮಾರ್ ನಟಿಸುತ್ತಾರಾ ಅಥವಾ ಕಾರ್ತಿಕ್ ಆರ್ಯನ್ ಇರ್ತಾರಾ ಎನ್ನುವ ಕುತೂಹಲ ಎಲ್ಲರಲ್ಲಿದೆ. ಅದಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದು.

Share This Article