ವಿಜಯಪುರ: ವಿಜಯಪುರ-ಬಾಗಲಕೋಟ ಎಂಎಲ್ ಸಿ ಉಪಚುನಾವಣೆಗೆ ಮತದಾನ ಇಂದು ನಡೆಯುತ್ತಿದೆ. ಒಟ್ಟು 16- ಅತಿಸೂಕ್ಷ್ಮ, 14 ಸೂಕ್ಷ್ಮ ಹಾಗೂ 8 ಸಾಧಾರಣ ಮತಗಟ್ಟೆಗಳನ್ನು ಮಾಡಲಾಗಿದ್ದು, ವಿಜಯಪುರ ಬಾಗಲಕೋಟೆ ಜಿಲ್ಲೆಗಳಲ್ಲಿ 38 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ.
ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಒಟ್ಟು 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 4,074 ಪುರುಷ, 4,163 ಮಹಿಳಾ ಮತದಾರರು ಇದ್ದಾರೆ. ಅವಳಿ ಜಿಲ್ಲೆಗಳಲ್ಲಿ ಒಟ್ಟು 8,237 ಮತದಾರರಿದ್ದಾರೆ. ಆಯಾ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರಿಗೆ ಚುನಾವಣಾ ಗುರುತಿನ ಚೀಟಿ ನೀಡಲು ಸೂಚನೆ ನೀಡಲಾಗಿದ್ದು, ಗುರತಿನ ಚೀಟಿ ಹೊರತುಪಡಿಸಿ ಚುನಾವಣಾ ಆಯೋಗ ನಿಗದಿಪಡಿಸಿದ 12 ಇತರೆ ದಾಖಲೆಗಳಲ್ಲೊಂದು ದಾಖಲೆ ಮೂಲಕ ಮತದಾನ ಮಾಡಬಹುದಾಗಿದೆ.
Advertisement
Advertisement
ಬಿಜೆಪಿ ಅಭ್ಯರ್ಥಿ ಗೂಳಪ್ಪಾ ಶಟಗಾರ ಜಿಲ್ಲಾ ಪಂಚಾಯತ್ ಬೂತ್ ನಂ 1 ರಲ್ಲಿ ಮತದಾನ ಮಾಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನ್ನ ಗೆಲವು ನಿಶ್ಚಿತವಾಗಿದೆ. ಬಿಜೆಪಿ ಸಂಸದರು, ಶಾಸಕರು ಮತ್ತು ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸಿ ಮತಯಾಚನೆ ಮಾಡಿದ್ದಾರೆ. ಸಿಂಧಗಿಯಲ್ಲಿ ಮತದಾರರಿಗೆ ಹಣ ಹಂಚಿದ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನ ಮೇಲೆ ದೂರು ದಾಖಲಾಗಿದ್ದು ತಿಳಿದಿಲ್ಲ. ನನಗೆ ಮತಚಲಾಯಿಸದಂತೆ ಅನಾಮಧೇಯ ಪತ್ರವನ್ನು ಬಿಜೆಪಿಯವರ ಹೆಸರ ಮೇಲೆ ಬೇರೆ ಯಾರೋ ಮಾಡಿದ್ದಾರೆ ಎಂದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv