ಬೆಂಗಳೂರು: ಕನ್ನಡ ನಾಡನ್ನು ಆಳಿದ್ದ ಚಾಲುಕ್ಯರ ರಾಜಧಾನಿ ಬಾದಾಮಿ ಈಗ ಕರ್ನಾಟಕ ಕುರುಕ್ಷೇತ್ರದಲ್ಲಿ ಮತ್ತೊಮ್ಮೆ ಅಕ್ಷರಶಃ ರಾಜಕೀಯ ರಾಜಧಾನಿಯಾಗಿ ಮಾರ್ಪಟ್ಟಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರೋ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸವಾಲೆಸೆದಿರೋ ಸಂಸದ ಶ್ರೀರಾಮುಲು ನಾಮಪತ್ರ ಸಲ್ಲಿಸ್ತಾರೆ.
ಹುಬ್ಬಳ್ಳಿಯಿಂದ ಹೆಲಿಕಾಪ್ಟರ್‍ನಲ್ಲಿ 12.30ಕ್ಕೆ ಬಾದಾಮಿಗೆ ಬರೋ ಸಿಎಂ ಮೊದಲು ಬನಶಂಕರಿ ದೇವಿಯ ದರ್ಶನ ಪಡೀತಾರೆ. ಅಲ್ಲಿಂದ ಬಾದಾಮಿಯಲ್ಲಿ ಬೃಹತ್ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ ಮಾಡ್ತಾರೆ. ಮಧ್ಯಾಹ್ನ 2 ರಿಂದ 2.30ಕ್ಕೆ ಚುನಾವಣಾಧಿಕಾರಿ ಉಮೇದುವಾರಿಕೆ ಸಲ್ಲಿಸ್ತಾರೆ. ಈ ವೇಳೆ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಸಚಿವರು, ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‍ಆರ್ ಪಾಟೀಲ್, ಆಪ್ತ ಸಿಎಂ ಇಬ್ರಾಹಿಂ ಸೇರಿದಂತೆ ದೊಡ್ಡ ದಂಡೇ ಜೊತೆಗಿರಲಿದೆ. ಇದನ್ನೂ ಓದಿ: ರಾಷ್ಟ್ರೀಯ ವಾಹಿನಿಗಳ ಸಮೀಕ್ಷೆ: ರಾಜ್ಯದಲ್ಲಿ ಅತಂತ್ರ ಸ್ಥಿತಿ, ಯಾರಿಗೆ ಎಷ್ಟು ಸ್ಥಾನ?
Advertisement
ಇತ್ತ ಬೆಳಗ್ಗೆ 11 ಗಂಟೆಗೆ ಬಾದಾಮಿಯ ಬಸವೇಶ್ವರ ವೃತ್ತದಿಂದ ಬೃಹತ್ ರೋಡ್ ಶೋ ಮೂಲಕ ಬಲ ಪ್ರದರ್ಶನ ಮಾಡಲಿರೋ ರಾಮುಲು ಮಧ್ಯಾಹ್ನ 12.30ಕ್ಕೆ ನಾಮಪತ್ರ ಸಲ್ಲಿಸ್ತಾರೆ. ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಬಾಗಲಕೋಟೆ ಸಂಸದ ಪಿ ಸಿ ಗದ್ದಿಗೌಡರ್ ಸೇರಿದಂತೆ ಬಿಜೆಪಿ ಗುಂಪೇ ಜೊತೆಗಿರಲಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಬಿಎಸ್‍ವೈ ಮತ್ತು ಸಿದ್ದರಾಮಯ್ಯಗೆ ಇರೋ ವ್ಯತ್ಯಾಸ ಇದೇ: ಸಿಎಂ ಕಾಲೆಳೆದ ಮುರುಳೀಧರ್ ರಾವ್