– ಪ್ರಧಾನಿ ಮೋದಿ ಆಲೋಚನೆಯಿಂದ ದೇಶ ಆರ್ಥಿಕತೆ ನಾಶ: ರಾಹುಲ್
– ಮಾರುಕಟ್ಟೆ ತೆರೆಯುತ್ತಿದ್ದಂತೆ ಸೆನ್ಸೆಕ್ಸ್ 1,459 ಪಾಯಿಂಟ್ ಕುಸಿತ
ಮುಂಬೈ: ಕೊರೊನಾ ವೈರಸ್ ಹಾಗೂ ಯೆಸ್ ಬ್ಯಾಂಕಿನ ಬಿಕ್ಕಟ್ಟಿನಿಂದ ಭಯಭೀತರಾದ ಹೂಡಿಕೆದಾರರು ಹೆಚ್ಚಿನ ಸಂಖ್ಯೆಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದಾಗಿ ಬಿಎಸ್‍ಇ ಸೆನ್ಸೆಕ್ಸ್ ಶುಕ್ರವಾರ 893.99 ಪಾಯಿಂಟ್‍ಗಳ ಕುಸಿತ ಕಂಡು 37,576.62 ಕ್ಕೆ ತಲುಪಿದೆ. ಅಂತೆಯೇ, ಎನ್‍ಎಸ್‍ಇ ನಿಫ್ಟಿ 368.15 ಪಾಯಿಂಟ್‍ಗಳ ಕುಸಿತದಿಂದ 11,000 ಪಾಯಿಂಟ್‍ಗಳ ಪಾತಾಳಕ್ಕೆ ತಲುಪಿದೆ.
ಬ್ಯಾಂಕ್ ಷೇರುಗಳು ಬಿಎಸ್‍ಇಯಲ್ಲಿ ಶೇ.56 ಮತ್ತು ಎನ್‍ಎಸ್‍ಇಯಲ್ಲಿ ಶೇ.74 ಕುಸಿತ ಕಂಡಿವೆ. ಟಾಟಾ ಸ್ಟೀಲ್ ಷೇರುಗಳು ಬಿಎಸ್‍ಇಯಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದವು. ಬಜಾಜ್ ಆಟೋ, ಮಾರುತಿ ಮತ್ತು ಏಷ್ಯನ್ ಪೇಂಟ್ಸ್ ಮಾತ್ರ ಭಾರೀ ಲಾಭ ಗಳಿಸಿವೆ. ಇದನ್ನೂ ಓದಿ: ಕೊರೊನಾ ಎಫೆಕ್ಟ್- ಒಂದೇ ದಿನಕ್ಕೆ ಚಿನ್ನದ ಬೆಲೆ 990 ರೂ. ಹೆಚ್ಚಳ
Advertisement
Advertisement
ಮಾರುಕಟ್ಟೆ ತೆರೆದ ಕೂಡಲೇ ಸೆನ್ಸೆಕ್ಸ್ 1,459 ಪಾಯಿಂಟ್ ಕುಸಿದು, 37,011.09ಕ್ಕೆ ತಲುಪಿತ್ತು. ಬಿಎಸ್‍ಇಯಲ್ಲಿ ಗುರುವಾರ ದಿನದಂತ್ಯಕ್ಕೆ 37,524 ಪಾಂಯಿಂಟ್ಸ್ ಇತ್ತು. ಆದರೆ ಇಂದಿನ ದಿನದಂತ್ಯಕ್ಕೆ 893.99 ಪಾಯಿಂಟ್ಸ್ ಕಳೆದುಕೊಂಡು, 37,576.62 ಪಾಯಿಂಟ್ಸ್ ಗೆ ತಲುಪಿದೆ.
Advertisement
ಎನ್‍ಎಸ್‍ಇ ಇಂದು 279.55 ಪಾಯಿಂಟ್ಸ್ ಕುಸಿತ ಕಂಡಿದೆ. ಗುರುವಾರ ದಿನದಂತ್ಯಕ್ಕೆ 10,979 ಪಾಂಯಿಂಟ್ಸ್ ಹೊಂದಿದ್ದ ನಿಫ್ಟಿ ಇಂದಿನ ದಿನದ ಅಂತ್ಯಕ್ಕೆ 10,989.45 ಪಾಯಿಂಟ್ಸ್ ತಲುಪಿದೆ.
Advertisement
ಎನ್‍ಎಸ್‍ಇಯಲ್ಲಿ ಬ್ಯಾಂಕ್ ಷೇರುಗಳು ಶೇ.76 ರಷ್ಟು ಕುಸಿದಿವೆ. ಎಸ್‍ಬಿಐ ಷೇರುಗಳು ಶೇ.12 ಕಡಿಮೆ ಆಗಿದೆ. ಗುರುವಾರ, ಯೆಸ್ ಬ್ಯಾಂಕ್ ಅನ್ನು ಉಳಿಸಲು ಸರ್ಕಾರ ಎಸ್‍ಬಿಐಗೆ ಫಾರ್ವರ್ಡ್ ಮಾಡಬಹುದು ಎಂಬ ವರದಿಯಿತ್ತು. ಈ ಕಾರಣದಿಂದಾಗಿ ಎಸ್‍ಬಿಐ ಷೇರುಗಳು ಕುಸಿತ ಕಂಡಿವೆ.
ಕೊರೊನಾ ವೈರಸ್ ಸೋಂಕು ಹೆಚ್ಚುತ್ತಲೇ ಇದೆ. ವಿಶ್ವಾದ್ಯಂತ ಸೋಂಕಿತರ ಸಂಖ್ಯೆ 1 ಲಕ್ಷವನ್ನು ತಲುಪುತ್ತಿದೆ ಹಾಗೂ 3,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಪರಿಣಾಮ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಿಂದ ನಿರಂತರವಾಗಿ ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಕಳೆದ 14 ವಹಿವಾಟು ಅವಧಿಯಲ್ಲಿ ಎಫ್‍ಐಐಗಳು ಭಾರತೀಯ ಮಾರುಕಟ್ಟೆಯಿಂದ 18,343 ಕೋಟಿ ರೂ. ಹಿಂಪಡೆದಿದ್ದಾರೆ.
ಅಮೆರಿಕದ ಷೇರು ಮಾರುಕಟ್ಟೆ ಡೌ ಜೋನ್ಸ್ ಶೇ.3.58 ಮತ್ತು ನಾಸ್ಡಾಕ್ ಶೇ.3.10 ಇಳಿದಿದೆ. ನಿಕ್ಕಿ ಶೇ.2.94 ಮತ್ತು ಆಸ್ಟ್ರೇಲಿಯಾದ ಮಾರುಕಟ್ಟೆ ಶೇ.2.44 ಕುಸಿದಿದೆ.
ಮೋದಿಯಿಂದ ನಾಶ:
ಯೆಸ್ ಬ್ಯಾಂಕ್‍ನಲ್ಲಿನ ಬಿಕ್ಕಟ್ಟಿನ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಹನೆಯನ್ನು ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದೆ. ಜೊತೆಗೆ ರಾಹುಲ್ ಗಾಂಧಿ ಅವರು, ಪ್ರಧಾನಿ ಮೋದಿ ಮತ್ತು ಅವರ ಆಲೋಚನೆಗಳು ಭಾರತದ ಆರ್ಥಿಕತೆಯನ್ನು ನಾಶಪಡಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
Dear PM,
Here's some sound advice from Former PM Dr. Manmohan Singh on how to fix your own mess. It's time you start listening to real economists.#NoBank pic.twitter.com/ET06N6H75u
— Congress (@INCIndia) March 6, 2020