– ಪ್ರಾಣಪ್ರತಿಷ್ಠೆ ಸಮಯಕ್ಕೆ ರಾಜ್ಯದ ದೇವಾಲಯಗಳಲ್ಲೂ ವಿಶೇಷ ಪೂಜೆ
ಬೆಂಗಳೂರು: ಅಯೋಧ್ಯೆಯಲ್ಲಿ (Ayodhya) ತಲೆಎತ್ತಿರುವ ಭವ್ಯ ರಾಮಮಂದಿರದಲ್ಲಿಂದು (Ram Mandir) ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಲಿದೆ. ಅದಕ್ಕಾಗಿ ರಾಮನೂರಿನ ಎಲ್ಲ ಬೀದಿ-ಬೀದಿಗಳು ತಳಿರು ತೋರಣಗಳಿಂದ ಅಲಂಕೃತಗೊಂಡಿದೆ. ಧನುರ್ಧಾರಿ ರಾಮನ ಚಿತ್ರ, ರಾಮಚರಿತ ಮಾನಸದ ಸಾಲುಗಳನ್ನು ನಗರದ ಗೋಡೆ-ಗೋಡೆಗಳ ಮೇಲೂ ಬರೆಯಲಾಗಿದೆ. ಶತಮಾನಗಳ ಕನಸು ಇಂದು ನನಸಾಗುತ್ತಿದ್ದು, ಅಯೋಧ್ಯೆ ತುಂಬಾ ಸಂಭ್ರಮ ಮನೆ ಮಾಡಿದೆ.
Advertisement
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಯೂ (Bengaluru) ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ನಗರದಲ್ಲಿರುವ ರಾಮಭಂಟ ಹನುಮನ ದೇವಾಲಯಗಳ ಮುಂದೆ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಹೊಸ ಗುಡ್ಡದ ಹಳ್ಳಿಯ ವೀರಾಂಜನೇಯ ಸ್ವಾಮಿ ದೇವಸ್ಥಾನ, ಯಲಹಂಕ, ಬ್ಯಾಟರಾಯನಪುರ, ರಾಜಾಜಿನಗರದ ವೀರಾಂಜನೇಯ ಸ್ವಾಮಿ ದೇವಸ್ಥಾನ, ದೀಪಾಂಜಲಿನಗರದಲ್ಲಿರುವ ಗಾಳಿ ಆಂಜನೇಯ ಸ್ವಾಮಿದೇವಸ್ಥಾನ ಸೇರಿದಂತೆ ಪ್ರಮುಖ ದೇವಸ್ಥಾನಗಳ ಮುಂದೆ ಖಾಕಿ ಕಣ್ಗಾವಲು ಇರಿಸಲಾಗಿದೆ.
Advertisement
Advertisement
ನಗರದ ಅತಿಸೂಕ್ಷ್ಮ ಪ್ರದೇಶಗಳು ಹಾಗೂ ಪೆಂಡಲ್‌ಗಳು ಪ್ಲೆಕ್ಸ್ ಬಂಟಿಂಗ್ಸ್‌ಗಳು ಕಟ್ಟಿರುವ ಸ್ಥಳಗಲ್ಲಿ ಭದ್ರತೆ ಪರಿಶೀಲನೆ ನಡೆಸಲಾಗಿದೆ. ದೇವಸ್ಥಾನಗಳ ಮುಂದೆ ಭದ್ರತೆ ನಿಯೋಜನೆ ಮಾತ್ರವಲ್ಲದೇ ಪ್ರಮುಖ ಏರಿಯಾಗಳಲ್ಲಿ ಪೊಲೀಸರು ಬೀಟ್ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಪ್ರಕರಣ – ಉಗ್ರರಿಗೆ ಆಶ್ರಯ ನೀಡಿದ್ದ ಅಪ್ರಾಪ್ತನ ಬಂಧನ
Advertisement
ಮಹಾಮಂಗಳಾರತಿ ಬಳಿಕ ದರ್ಶನಕ್ಕೆ ಅವಕಾಶ: ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆ ನೆರವೇರುವ ಸಮಯಕ್ಕೆ ಬೆಂಗಳೂರಿನ ದೇವಾಲಯಗಳಲ್ಲೂ ವಿಶೇಷ ಪೂಜೆ ಸಲ್ಲಿಕೆಯಾಗಲಿದೆ. ಇದೇ ವೇಳೆ ಮಹಾಮಂಗಳಾರತಿ ನೆರವೇರಲಿದೆ. ಬಳಿಕ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿಗಳು ತಿಳಿಸಿವೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ದಿನ ಮುಸ್ಲಿಮರು, ಕ್ರೈಸ್ತರು ಪ್ರಾರ್ಥನೆ ಮಾಡಿ: ಅಸ್ಸಾಂ ಸಿಎಂ ಮನವಿ