ರಾಯಚೂರು: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಇಂದು ಮಂತ್ರಾಲಯಕ್ಕೆ (Mantralaya) ಭೇಟಿ ನೀಡಿ ಗುರು ರಾಘವೇಂದ್ರ ಸ್ವಾಮಿ (Guru Raghavendra Swamy) ದರ್ಶನ ಪಡೆದರು.
Advertisement
ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ (Bharat Jodo Padayatre) ಇಂದು ಮಂತ್ರಾಲಯ ತಲುಪಿತು. ಸಾಂಪ್ರದಾಯಿಕ ವಸ್ತ್ರ ಧರಿಸಿ ರಾಯರ ಮಠಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ರಾಘವೇಂದ್ರ ಸ್ವಾಮಿ, ಮಂಚಾಲಮ್ಮ ದೇವಿಯ ದರ್ಶನ ಪಡೆದರು. ನಂತರ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ರಾಹುಲ್ ಗಾಂಧಿಗೆ ಆಶೀರ್ವಚನ ನೀಡಿದರು.
Advertisement
Advertisement
ಈ ವೇಳೆ, ಡಿ.ಕೆ. ಶಿವಕುಮಾರ್ (D.K.Shivakumar) ನೀಡಿದ ಬೆಳ್ಳಿ ಖಡ್ಗವನ್ನು ಸ್ವಾಮೀಜಿ ನಯವಾಗಿಯೇ ನಿರಾಕರಿಸಿದರು. ನಾಳೆ ರಾಹುಲ್ ಪಾದಯಾತ್ರೆ ಮತ್ತೆ ಕರ್ನಾಟಕಕ್ಕೆ ಕಾಲಿಡಲಿದೆ. ಭಾರತ್ ಜೋಡೋ ಸ್ವಾಗತಕ್ಕೆ ರಾಯಚೂರು ನಗರ ಸಜ್ಜಾಗಿದೆ. ಇದನ್ನೂ ಓದಿ : 1 ಮತದಿಂದ ಸೋತು ಮರು ಮತ ಎಣಿಕೆಗೆ ಕೋರ್ಟ್ ಮೊರೆ ಹೋಗಿದ್ದ ಅಭ್ಯರ್ಥಿಗೆ ಮುಖಭಂಗ
Advertisement
ನಾಳೆಯಿಂದ ಮೂರು ದಿನ ರಾಹುಲ್ ನಡಿಗೆ ರಾಯಚೂರು ಜಿಲ್ಲೆಯಲ್ಲಿ ಸಾಗಲಿದೆ. ನಾಡಿದ್ದು ಪ್ರಿಯಾಂಕಾ ಗಾಂಧಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸಂಭವವಿದೆ. ಇದನ್ನೂ ಓದಿ: ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸಹಾಯವಾಣಿ ಆರಂಭ – ಸಕ್ಕರೆ ಇಲಾಖೆ ತೀರ್ಮಾನ