ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಧರ್ಮಸ್ಥಳ ಮಂಜುನಾಥ ಸನ್ನಿಧಿಗೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದರು.
ಪಂಚೆ, ಶಲ್ಯ ಧರಿಸಿ ಮಂಜುನಾಥನ ದರ್ಶನ ಪಡೆದು ಸನ್ನಿಧಿ ಅತಿಥಿ ಗೃಹದಲ್ಲಿ ಕ್ಷೇತ್ರದ ಊಟ ಸೇವಿಸಿದರು. ಈ ವೇಳೆ ರಾಹುಲ್‍ಗೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸಾಥ್ ನೀಡಿದರು.
Advertisement
ಬಳಿಕ ಮಾತನಾಡಿದ ವೀರೇಂದ್ರ ಹೆಗ್ಗಡೆ, ರಾಹುಲ್ ಗಾಂಧಿ ಮಂಜುನಾಥ ಸ್ವಾಮಿಗೆ ಫಲಕಾಣಿಕೆ ಅರ್ಪಿಸಿದರು. ಕ್ಷೇತ್ರಕ್ಕೆ ರಾಹುಲ್ ಗಾಂಧಿ ನೀಡಿದ ಎರಡನೇ ಭೇಟಿ ಇದಾಗಿದೆ. ಒಂಭತ್ತು ವರ್ಷಗಳ ಹಿಂದೆ ರಾಹುಲ್ ಗಾಂಧಿ ಕ್ಷೇತ್ರಕ್ಕೆ ಬಂದಿದ್ದರು. ಇಂದು ದೇವಸ್ಥಾನದ ಸಿಬ್ಬಂದಿಯ ಗುರುತು ಹಿಡಿದಿದ್ದಾರೆ ಎಂದರು.