– ನನ್ನ ಮಗ ಇಲ್ಲ ಎನ್ನುವ ನೋವು ನನ್ನನ್ನು ಕಾಡುತ್ತಿದೆ
– ನಮ್ಮ ಬಲಗೈ ಹೋಗಿ ಬಿಟ್ಟಿದೆ
– ಅಪ್ಪು ತಂದೆಗೆ ತಕ್ಕ ಮಗನಾಗಿದ್ದ
ಬೆಂಗಳೂರು: ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ. ಪುನೀತ್ ರಾಜ್‍ಕುಮಾರ್ ಅವರಿಗೆ ಪದ್ಮಶ್ರೀ ಕೊಡಬೇಕು ಎನ್ನುವ ವಿಚಾರವಾಗಿ ಕೆಲವು ಗಣ್ಯರು ಒತ್ತಾಯ ಮಾಡುತ್ತಿದ್ದಾರೆ. ಈ ಕುರಿತಾಗಿ ನಟ ಶಿವರಾಜ್‍ಕುಮಾರ್ ಅವರು ಮಾತನಾಡಿದ್ದಾರೆ.
ಪುನೀತ್ ರಾಜ್‍ಕುಮಾರ್ ಅವರ ಸಮಾಧಿ ಬಳಿಯ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುನೀತ್‍ಗೆ ಪದ್ಮಶ್ರೀ ಯಾಕೆ, ಪುನೀತ್ ಅಮರ ಶ್ರೀ. ಹೆಸರ ಪಕ್ಕದಲ್ಲೊಂದು ಟೈಟಲ್ ಅಷ್ಟೆಯಾಗಿದೆ. ಎಲ್ಲರ ಆತ್ಮದಲ್ಲಿಯೂ ಅಪ್ಪು ಶ್ರೀಯಾಗಿರುತ್ತಾನೆ ಅದೇ ನಮಗೆ ದೊಡ್ಡುದು ಎಂದು ಹೇಳಿದ್ದಾರೆ.
ಗದ್ದಲ ಆಗೋದು ಬೇಡ ಎಂದು ಅಭಿಮಾನಿಗಳಿಗೆ ಅಪ್ಪು ಸಮಾಧಿ ಬಳಿ ಬರಲು ಅವಕಾಶ ನೀಡಿಲ್ಲ. ನಾವು 11 ದಿನದ ಕಾರ್ಯ ಎಂದು ಮಾಡುತ್ತಿರುವುದೇ ನೋವಿನ ಸಂಗತಿಯಾಗಿದೆ. ಬೆಳಗ್ಗೆ ಅಂದುಕೊಳ್ಳತ್ತಾ ಇದ್ದೆ, ಇದೆಲ್ಲಾ ಅವನಿಗೆ ಮಾಡಬೇಕಾ? ಎಂದು ನೋವಾಯಿತ್ತು. ಅಭಿಮಾನಿಗಳಿಗೆ ಮೊದಲು ಬಿಡಬೇಕು ಆದರೆ ಕುಟುಂಬದ ಕೆಲವು ಆಚಾರ, ಸಂಸ್ಕೃತಿಯನ್ನು ನಾವು ಅನುಸರಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಮಾಡ್ಕೊಂಡ ಅಪ್ಪು ಅಭಿಮಾನಿ ಮನೆಗೆ ರಾಘಣ್ಣ ಭೇಟಿ, ಸಾಂತ್ವನ
ನೋವು ಇದೆ ಆದರೆ ಎಲ್ಲಾ ಕಾರ್ಯ ಮಾಡಬೇಕಿದೆ. ನನಗೆ ಇದನ್ನು ಬಿಟ್ಟು ಬೇರೆ ಏನನ್ನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಇವತ್ತು ಮನೆಯಲ್ಲಿ ಪೂಜೆ ಇದೆ. ಈ ವಿಚಾರವಾಗಿ ಅಣ್ಣನಾಗಿ ಮಾತನಾಡೋದು ಕಷ್ಟವಾಗಿದೆ. ಅಪ್ಪುನನ್ನು ಕಳೆದುಕೊಂಡಿರುವುದು ನನ್ನ ಮಗ, ನನ್ನ ಬಲಗೈ ಹೋದಾಗಿದೆ. ನಾನು ಅಳಬಹುದು, ದುಃಖವನ್ನು ನಾನು ತೋಡಿಕೊಳ್ಳಬಹುದು. ನಾನು ಜೀವಂತವಾಗಿ ಇರುವವರೆಗೂ, ನನ್ನ ಜೀವ ಹೋದ ಮೇಲೂ ಈ ನೋವು ಹೋಗಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲ ಥಿಯೇಟರ್‌ಗಳಲ್ಲಿ ಏಕಕಾಲಕ್ಕೆ ಅಪ್ಪುಗೆ ಶ್ರದ್ಧಾಂಜಲಿ
ಅಪ್ಪು ಖುಷಿ ಆಗಬೇಕಾದರೆ ಜನ ಪ್ರಾಣ ಕಳೆದುಕೊಳ್ಳಬಾರದು. ಅಪ್ಪು ಹೆಸರನ್ನು ಉಳಿಸಲು ನೀವು ಪ್ರಯತ್ನಪಡಬೇಕು. ನಿಮ್ಮ ಕುಟುಂಬ ನಿಮ್ಮನ್ನು ನಂಬಿಕೊಂಡು ಇದೆ. ನಿಮ್ಮ ಕೈಲಿ ಆದಷ್ಟು ಬೇರೆಯವರಿಗೆ ಸಹಯಾ ಮಾಡಿ. ಪ್ರಾಣವನ್ನು ಮಾತ್ರ ಕಳೆದುಕೊಳ್ಳ ಬೇಡಿ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಹೇಳುತ್ತಾ ಬಾವುಕರಾಗಿದ್ದಾರೆ. ಇದನ್ನೂ ಓದಿ: ಪುನೀತ್ ಅಂತ್ಯಸಂಸ್ಕಾರಕ್ಕೆ ಶ್ರಮಿಸಿದ ಎಲ್ಲರಿಗೂ ಅಶ್ವಿನಿ ಧನ್ಯವಾದ
ಈಗಾಗಲೇ ನಾವೆಲ್ಲ ನೋವನಲ್ಲಿ ಇದ್ದೇವೆ. ಅಪ್ಪು ಹೋಗಿದ್ದಾನೆ ಎಂದು ಯಾಕೆ ಅಂದು ಕೊಳ್ಳುತ್ತಿರ, ನಮ್ಮಲ್ಲಿ ಇದ್ದಾರೆ ಅಂತಾ ತಿಳಿದುಕೊಳ್ಳಿ. ಪುನೀತ್ ತಂದೆಗೆ ತಕ್ಕ ಮಗನಾಗಿದ್ದಾನೆ ಎಂದಿದ್ದಾರೆ.