ಬೆಂಗಳೂರು: ಪಬ್ಲಿಕ್ ಮ್ಯೂಸಿಕ್ (PUBLiC Music) ವಾಹಿನಿ ಶುರುವಾಗಿ ಇಂದಿಗೆ 10 ವರ್ಷವಾಗಿದೆ. ಸಹಜವಾಗಿಯೇ ಸಂಭ್ರಮ ಮೇಳೈಸಿದೆ. ಇಂದು ದಶೋತ್ಸವ (10th Anniversary) ಹೆಸರಲ್ಲಿ ಪಬ್ಲಿಕ್ ಮ್ಯೂಸಿಕ್ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.
ಪಬ್ಲಿಕ್ ಟಿವಿ (PUBLiC TV) ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (HR Ranganath) ಬೆಳಗ್ಗೆ 10 ಗಂಟೆ 10ನಿಮಿಷ 10 ಸೆಕೆಂಡ್‌ಗೆ ಸರಿಯಾಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪಬ್ಲಿಕ್ ಮ್ಯೂಸಿಕ್ ದಶೋತ್ಸವ ಸಂಭ್ರಮಕ್ಕೆ ಎಂದಿನಂತೆ ಲಹರಿ ಸಂಸ್ಥೆಯ ಮನೋಹರ್ ನಾಯ್ಡು, ಆನಂದ್ ಆಡಿಯೋದ ಶ್ಯಾಮ್ ಚಾಬ್ರಿಯಾ, ಅಶ್ವಿನಿ ರೆಕಾರ್ಡಿಂಗ್ ಕಂಪನಿಯ ಅಶ್ವಿನಿ ರಾಮ್‌ಪ್ರಸಾದ್ ಹಾಗೂ ಝೇಂಕಾರ್ ಮ್ಯೂಸಿಕ್‌ನ ಭರತ್ ಜೈನ್ ಸಾಕ್ಷಿಯಾಗಲಿದ್ದಾರೆ.
Advertisement
View this post on Instagram
Advertisement
ರಿಯಲ್‌ಸ್ಟಾರ್ ಉಪೇಂದ್ರ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್, ಗಾಯಕಿ ಐಶ್ವರ್ಯ ರಂಗರಾಜನ್ ಹಾಗೂ ನಟಿ ರೀಷ್ಮಾ ನಾಣಯ್ಯ ಕಾರ್ಯಕ್ರಮದ ಹೊಳಪನ್ನು ಹೆಚ್ಚಿಸಲಿದ್ದಾರೆ. ಇದನ್ನೂ ಓದಿ: MUDA Case| ರಾಜಧರ್ಮ ಪಾಲಿಸದಿದ್ದರೆ ಅದು ರಾವಣ ರಾಜ್ಯ ಆಗಲಿದೆ: ಕೋರ್ಟ್ ಆದೇಶದಲ್ಲಿ ಏನಿದೆ?
Advertisement
ದಶೋತ್ಸವದ ಪ್ರಯುಕ್ತ ಹತ್ತು ವಿಶೇಷ ಶೋಗಳು ನಡೆಯಲಿವೆ. ನಟ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಗಾಯಕರಾದ ನವೀನ್ ಸಜ್ಜು, ಸಂಗೀತ ರಾಜೀವ್ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ನಮ್ಮೊಂದಿಗೆ ಇರಲಿದ್ದಾರೆ.
Advertisement
View this post on Instagram
ಕಳೆದ ಹತ್ತು ವರ್ಷಗಳಲ್ಲಿ ಪಬ್ಲಿಕ್ ಮ್ಯೂಸಿಕ್ ಸಂಗೀತದ ಮೂಲಕ ಎಲ್ಲಾ ಕಡೆ ಪಸರಿಸಿಕೊಂಡಿದೆ. ಮೊದಲ ವರ್ಷದಿಂದ ಇಂದು ದಶಕದವರೆಗೂ ಪಬ್ಲಿಕ್ ಮ್ಯೂಸಿಕ್ ದಿನದಿಂದ ದಿನಕ್ಕೆ ಆಪ್ಡೇಟ್ ಆಗುತ್ತಾ, ಎಲ್ಲಾ ಜನರೇಶನ್‌ಗೂ ಇಷ್ಟವಾಗುವಂತ ಹಾಡುಗಳನ್ನು ಪ್ರಸಾರ ಮಾಡುತ್ತಿದೆ. ಈ ಸಂಭ್ರಮಕ್ಕೆ ಮುಖ್ಯ ಕಾರಣ ನೀವು. ಮೊದಲ ವರ್ಷದಿಂದ ಇಲ್ಲಿಯವರೆಗೂ ಜೊತೆಗೆ ನಿಂತಿದ್ದೀರಿ, ಬೆನ್ನುತಟ್ಟಿ ಬೆಂಬಲ ಕೊಟ್ಟಿದ್ದೀರಿ. ಇದೇ ರೀತಿ ಮುಂದೆಯೋ ನಿಮ್ಮ ಬೆಂಬಲ, ಹಾರೈಕೆ ನಮ್ಮ ಮೇಲಿರಲಿ.