ಡಾ.ಮಂಜುನಾಥ್ ಪರ ಇಂದು ಪವನ್‌ ಕಲ್ಯಾಣ್‌ ಪ್ರಚಾರ

Public TV
1 Min Read
pawan kalyan

ಲೋಕಸಭೆ ಚುನವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸ್ಟಾರ್ ಪ್ರಚಾರಕರು ತಾವು ಬೆಂಬಲಿಸುವ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಮೂಲಕ ಸಾಥ್ ನೀಡುತ್ತಿದ್ದಾರೆ. ಈ ನಡುವೆ ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ (Actor Pawan Kalyan) ಇಂದು (ಏ.21) ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಡಾ. ಮಂಜುನಾಥ್‌ ಪರ ಪ್ರಚಾರದ ಅಖಾಡಕ್ಕೆ ಪವನ್‌ ಇಳಿಯುತ್ತಿದ್ದಾರೆ. ಇದನ್ನೂ ಓದಿ:ನಾಮಪತ್ರ ಸಲ್ಲಿಸಿದ ನಟ ಬಾಲಯ್ಯ: ಹೆಂಡತಿ ಆಸ್ತಿಯೇ ಹೆಚ್ಚು

pawan kalyan

ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿ ಡಾ. ಮಂಜುನಾಥ್ (Dr. Manjunath) ಪರ ಪವನ್ ಕಲ್ಯಾಣ್ ಪ್ರಚಾರಕ್ಕೆ ಸಾಥ್ ನೀಡುತ್ತಿದ್ದಾರೆ. ಬೀದರಗುಪ್ಪೆಯಿಂದ ಹೆಬ್ಬಗೋಡಿ ತನಕ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದಾರೆ. ಬೃಹತ್ ಬೈಕ್ ರ‍್ಯಾಲಿ ಉದ್ದೇಶಿಸಿ ಹೆಬ್ಬಗೋಡಿಯಲ್ಲಿ ಪವನ್ ಕಲ್ಯಾಣ್ ಮಾತನಾಡಲಿದ್ದಾರೆ. ಈ ವೇಳೆ, ನೂರಾರು ಸಂಖ್ಯೆಯಲ್ಲಿ ಪವನ್ ಕಲ್ಯಾಣ್ ಅಭಿಮಾನಿಗಳು ಭಾಗವಹಿಸಲಿದ್ದಾರೆ.

ಸದ್ಯ ಸಿನಿಮಾಗಳಿಗೆ ಬ್ರೇಕ್ ಹಾಕಿ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಲೋಕಸಭೆ ಎಲೆಕ್ಷನ್ ನಂತರ ಮತ್ತೆ ಸಿನಿಮಾದತ್ತ ನಟ ಮುಖ ಮಾಡಲಿದ್ದಾರೆ.

Share This Article