ಕೇವಲ 5 ಗಂಟೆಯಲ್ಲಿ ಶಿವಮೊಗ್ಗದಿಂದ ಬೆಂಗ್ಳೂರಿಗೆ ಬರುತ್ತೆ ಜನಶತಾಬ್ಧಿ ಎಕ್ಸ್‌ಪ್ರೆಸ್ ರೈಲು!

Public TV
2 Min Read
SMG TRAIN

– ಮುಂಗಡ ಬುಕ್ಕಿಂಗ್ ಮಾಡದೇ ಇದ್ರೆ ಹತ್ತಬೇಡಿ
– ರೈಲಿಗೆ ಬಿಎಸ್‍ವೈ, ರಾಘವೇಂದ್ರರಿಂದ ಹಸಿರು ನಿಶಾನೆ

ಶಿವಮೊಗ್ಗ: ಇಂದಿನಿಂದ ನೀವು ಕೇವಲ 5 ಗಂಟೆಯಲ್ಲಿ ಬೆಂಗಳೂರು ತಲುಪಬಹುದು. ಯಶವಂತಪುರ ಮತ್ತು ಶಿವಮೊಗ್ಗ ನಡುವೆ ಜನಶತಾಬ್ಧಿ ಎಕ್ಸ್‌ಪ್ರೆಸ್ ರೈಲು ಸಂಚಾರ ಇಂದಿನಿಂದ ಆರಂಭಗೊಂಡಿದೆ.

ನೂತನ ಜನಶತಾಬ್ಧಿ ರೈಲಿಗೆ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಅಷ್ಟೇ ಅಲ್ಲದೇ ಯಡಿಯೂರಪ್ಪ, ಆಯನೂರು ಮಂಜುನಾಥ್, ಸಂಸದ ರಾಘವೇಂದ್ರ, ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರ ಜೊತೆಗೂಡಿ, ಭದ್ರಾವತಿಯವರೆಗೆ ರೈಲಿನಲ್ಲಿ ಸಂಚಾರ ಮಾಡಿದ್ದಾರೆ.

Capture 3

ನಿಲ್ದಾಣದ ಕೌಂಟರ್ ನಲ್ಲಿ ಟಿಕೆಟ್ ಪಡೆದು ಪ್ರಯಾಣಿಸಲು ಸಾಧ್ಯವಿಲ್ಲ. ರೈಲು ನಿಲ್ದಾಣ ಬಿಡುವ ಅರ್ಧಗಂಟೆ ಮೊದಲು ಆನ್ ಲೈನ್ ನಲ್ಲಿ ಅಥವಾ ಹಿಂದಿನ ದಿನ ರಾತ್ರಿ 8 ಗಂಟೆಯವರೆಗೂ ಕೌಂಟರ್ ನಲ್ಲಿ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಮಾತ್ರ ಈ ರೈಲಿನಲ್ಲಿ ಪ್ರಯಾಣಿಸಬಹುದು.

ಬೆಂಗಳೂರು ಶಿವಮೊಗ್ಗ ಮಧ್ಯೆ ಈಗ ಸಂಚರಿಸುವ ಪ್ಯಾಸೆಂಜರ್ ರೈಲು 8 ಗಂಟೆ ತೆಗೆದುಕೊಂಡರೆ, ಎಕ್ಸ್‌ಪ್ರೆಸ್ ರೈಲುಗಳು 6.30 ಗಂಟೆ ತೆಗದುಕೊಳ್ಳುತ್ತದೆ. ಆದರೆ ಈ ರೈಲು ಭದ್ರಾವತಿ, ಕಡೂರು, ತುಮಕೂರಿನಲ್ಲಿ ಮಾತ್ರ ನಿಲ್ಲುವ ಕಾರಣ ಕೇವಲ 5 ಗಂಟೆಯಲ್ಲಿ ಶಿವಮೊಗ್ಗ/ಬೆಂಗಳೂರು ತಲುಪುತ್ತದೆ.

bgl 1
ಸಮಯ-ಮಾರ್ಗ:
ಈ ರೈಲು (ರೈಲು ಸಂಖ್ಯೆ- 12090) ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ಶಿವಮೊಗ್ಗದಿಂದ ಬೆಳಗ್ಗೆ 5.15ಕ್ಕೆ ಹೊರಟು, 10.10ಕ್ಕೆ ಯಶವಂತಪುರ ತಲುಪಲಿದೆ. ಇದೇ ರೀತಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಯಶವಂತಪುರದಿಂದ (ರೈಲು ಸಂಖ್ಯೆ- 12089) ಸಂಜೆ 5.30 ಕ್ಕೆ ಹೊರಟು ರಾತ್ರಿ 10.10ಕ್ಕೆ ಶಿವಮೊಗ್ಗ ತಲುಪುತ್ತದೆ.

ರೈಲಿನ ದರ:
ಈ ರೈಲಿನಲ್ಲಿ ಎರಡು ಎಸಿ ಬೋಗಿಗಳು, 8 ಕಾರ್ ಚೇರ್, ಎರಡು ಲಗೇಜ್ ಬೋಗಿಗಳು ಇರಲಿವೆ. ಎಸಿ ಕಾರ್ ಚೇರ್ ಗೆ 485 ರೂಪಾಯಿ, ಸೆಕೆಂಡ್ ಕ್ಲಾಸ್ ಚೇರ್ ಕಾರ್ ಗೆ 145 ರೂಪಾಯಿ ದರ ನಿಗದಿಯಾಗಿದೆ. ಇದಲ್ಲದೆ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ವಿಶೇಷ ರಿಯಾಯಿತಿ ಕೂಡ ಇದೆ.

ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಶಿವಮೊಗ್ಗ ಈಗ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿದೆ. ಜಿಲ್ಲೆಯಲ್ಲಿ ಹಲವಾರು ಸುಂದರ ನಿಸರ್ಗತಾಣಗಳು ಇದ್ದು, ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿದೆ. ಈಗ ಬೆಂಗಳೂರು- ಶಿವಮೊಗ್ಗ ನಡುವೆ ಹೆಚ್ಚುವರಿ ರೈಲು ಆರಂಭದಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಶಿವಮೊಗ್ಗ-ಬೆಂಗಳೂರು ನಡುವೆ ಸಂಚರಿಸುತ್ತಿರುವ ಎಕ್ಸ್‌ಪ್ರೆಸ್ ರೈಲಿನೊಂದಿಗೆ ಈ ಜನಶತಾಬ್ಧಿ ರೈಲನ್ನು ಹೆಚ್ಚುವರಿಯಾಗಿ ಆರಂಭಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *