ಬೆಂಗಳೂರು: ಇಡೀ ದೇಶವೇ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಈ ನಡುವೆ ಶಾಂತಿನಗರ ಶಾಸಕ ಹ್ಯಾರೀಸ್ ಬೆಂಬಲಿಗರಿಂದ ಹುಟ್ಟುಹಬ್ಬ ಮನರಂಜನಾ ಕಾರ್ಯಕ್ರಮ ನಡೆದಿದೆ.
ಶಾಂತಿನಗರ ಹಬ್ಬ ಎಂಬ ಹೆಸರಿನಲ್ಲಿ ವಿವೇಕನಗರ ಬಸ್ ನಿಲ್ದಾಣ ಬಳಿ ಕಾರ್ಯಕ್ರಮ ಆಯೋಜಿಸಿದ್ದು, ಆರ್ಕೆಸ್ಟ್ರಾ ಏರ್ಪಡಿಸಲಾಗಿತ್ತು. ಅಪ್ಪ-ಮಗನ ಹೆಸರಿನಲ್ಲಿ ದೊಡ್ಡ ದೊಡ್ಡ ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದವು. ಆದರೆ ವಿಷಯ ಮಾಧ್ಯಮದವರಿಗೆ ಗೊತ್ತಾಗುತ್ತಿದ್ದಂತೆ ಹ್ಯಾರೀಸ್ ಬೆಂಬಲಿಗರು ಕಾರ್ಯಕ್ರಮವನ್ನ ರದ್ದುಗೊಳಿಸಿದ್ದಾರೆ.
Advertisement
Advertisement
ಈ ಬಗ್ಗೆ ಶಾಸಕ ಹ್ಯಾರೀಸ್‍ರನ್ನೇ ಕೇಳಿದ್ದಕ್ಕೆ, ನನ್ನ ಬರ್ತ್ ಡೇ ಇರುವುದು ಜನವರಿ ತಿಂಗಳಲ್ಲಿ. ಬರ್ತ್ ಡೇ ಪಾರ್ಟಿ ಮಾಡಿಲ್ಲ. ಅದು ಶಾಂತಿನಗರ ಹಬ್ಬ ಅಂತ ಮಾಡುತ್ತಿದ್ದರು. ಸ್ಥಳಕ್ಕೆ ಭೇಟಿ ನೀಡಿ ಆ ಕಾರ್ಯಕ್ರಮ ಬದಲಾಯಿಸಿ ಯೋಧರ ಬಗ್ಗೆ ಶ್ರದ್ಧಾಂಜಲಿ ಸಲ್ಲಿಸಿ ಕಾರ್ಯಕ್ರಮ ಮುಗಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
Advertisement
ಇನ್ನೂ ಪುಲ್ವಾಮಾ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮ ಹಿನ್ನೆಲೆಯಲ್ಲಿ ಕುಟುಂಬಕ್ಕೆ ಐವತ್ತು ಸಾವಿರ ನೆರವು ನೀಡಲು ಮುಂದಾಗಿದ್ದಾರೆ. ಎನ್.ಎ.ಹ್ಯಾರೀಸ್ ಫೌಂಡೇಷನ್ ನಿಂದ ಐವತ್ತು ಸಾವಿರ ನೆರವು ನೀಡುವುದಾಗಿ ಶಾಸಕ ಹ್ಯಾರೀಸ್ ಟ್ವೀಟ್ ಮಾಡಿದ್ದಾರೆ.
Advertisement
33 year-old H Guru, who hailed from Mandya district of Karnataka was martyred in the deadly attack on Thursday in Pulwama MLA NA Haris has sanctioned ₹ 50,000 for his family from the NA Haris Foundation#pulwamaterrorattack #CRPFJawans #KashmirTerrorAttack
— N A Haris (@mlanaharis) February 15, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv