ಮೈಸೂರು: ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ಈ ನಡುವೆ ಮೇಯರ್ ಸ್ಥಾನ ನಮಗೆ ಬೇಕು, ನಮಗೆ ಬೇಕು ಅಂತ ದೋಸ್ತಿ ಪಕ್ಷಗಳೇ ಕಿತ್ತಾಡಿಕೊಂಡಿವೆ. ಸಚಿವ ಸಾ.ರಾ.ಮಹೇಶ್ ಮೇಯರ್ ಸ್ಥಾನ ನಮಗೆ ಬೇಕು, ಮೇಯರ್ ಸಿಗದಿದ್ದರೆ ನಾವು ಮುಂದಿನ ನಿರ್ಧಾರ ಮಾಡಬೇಕಾಗುತ್ತೆ ಎಂದು ಪರೋಕ್ಷವಾಗಿ ಬಿಜೆಪಿ ಜೊತೆ ಹೋಗುವ ಸುಳಿವು ನೀಡಿದ್ರು.
Advertisement
Advertisement
ಸಾ.ರಾ.ಮಹೇಶ್ ಹೇಳಿಕೆ ನೀಡುತ್ತಿದ್ದಂತೆಯೇ ಅವರ ಕಚೇರಿಗೆ ಬಂದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಏನಪ್ಪ ಹೀಗಂತೀಯ ಅಂತ ಒಂದು ಗಂಟೆಗೂ ಹೆಚ್ಚು ಕಾಲ ಸಾರಾ ಜೊತೆ ಮಾತುಕತೆ ನಡೆಸಿದ್ರು. ಲೋಕಲ್ ಅಖಾಡಕ್ಕೆ ಇಳಿದ ಸಿದ್ದರಾಮಯ್ಯ ಸಹ ಮೇಯರ್ ಸ್ಥಾನ ನಮಗೇ ಬೇಕು ಎಂದು ಪಟ್ಟಿ ಹಿಡಿದಿದ್ದರು. ಹೀಗಾಗಿ ಮೈಸೂರು ನಿವಾಸದಿಂದಲೇ ಎಚ್.ಡಿ. ದೇವೇಗೌಡರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಮೇಯರ್ ಸ್ಥಾನ ಬಿಟ್ಟುಕೊಡುವಂತೆ ಮನವಿ ಮಾಡಿದ್ರು. ದೇವೇಗೌಡರು ಸಹ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ. ಇದೀಗ ಮೇಯರ್ ಸ್ಥಾನ ಕಾಂಗ್ರೆಸ್‍ಗೆ ಪಕ್ಕಾ ಆಗಿದೆ.
Advertisement
Advertisement
ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಒಮ್ಮೆ ನೋವಾಗಿದೆ. ಮೈತ್ರಿ ವೇಳೆ ಇದ್ದಕಿದ್ದಂತೆ ನಾಮಪತ್ರ ಸಲ್ಲಿಸಿ ತೊಂದರೆ ಕೊಟ್ಟಿದ್ದರು. ಅದಕ್ಕಾಗಿ ಈ ಬಾರಿ ಮೊದಲಿಗೆ ಜೆಡಿಎಸ್‍ಗೆ ಮೇಯರ್ ಸ್ಥಾನ ಬೇಕು ಎಂದು ಕೇಳಿದ್ದೇವೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಹೆಚ್ಚು ಮತ ಇರುವವರಿಗೇ ಮೇಯರ್ ಸ್ಥಾನ ಎಂದು ಹೇಳಿದ್ದಾರೆ. ಸದ್ಯ ಮೇಯರ್ ಆಯ್ಕೆ ಮಾಡುವ ಮತದಾರರ ಸಂಖ್ಯೆ ಜೆಡಿಎಸ್‍ನಲ್ಲಿ ಹೆಚ್ಚಿದೆ. ನಾವು ಈಗಾಗಲೇ ಬಿಬಿಎಂಪಿಯಲ್ಲೂ ಕಾಂಗ್ರೆಸ್ಸಿಗೆ ಅಧಿಕಾರ ಬಿಟ್ಟುಕೊಟ್ಟಿದ್ದೇವೆ. ಈಗ ನಮಗೆ ಅಧಿಕಾರ ಕೇಳುತ್ತಿದ್ದೇವೆ. ಬಿಜೆಪಿ ನಾಯಕರು ಈಗಾಗಲೇ ಜೆಡಿಎಸ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಕಾಂಗ್ರೆಸ್ಸಿಗೆ ಸಚಿವ ಸಾ.ರಾ.ಮಹೇಶ್ ನೇರವಾಗಿ ಟಾಂಗ್ ಕೊಟ್ಟಿದ್ದರು.
ಜೆಡಿಎಸ್ ಸದಸ್ಯರು ಈಗಾಗಲೇ ರೆಸಾರ್ಟ್‍ಗೆ ತೆರಳಿದ್ದು, ನಮ್ಮ ಸದಸ್ಯರು ಕಾಂಗ್ರೆಸ್ಸಿನಂತೆ ಹೆದರಿಕೊಂಡು ರೆಸಾರ್ಟ್ ಗೆ ಹೋಗಿಲ್ಲ. ಎಲ್ಲರೂ ಕೂತು ಸಮಾಲೋಚನೆ ನಡೆಸಲು ನಾವೇ ಕಳುಹಿಸಿಕೊಟ್ಟಿದ್ದೇವೆ. ಶಾಸಕ ತನ್ವೀರ್ ಸೇಠ್ ಈಗಾಗಲೇ ಬಂದು ಭೇಟಿಯಾಗಿ ಹೋಗಿದ್ದಾರೆ. ಮಾತುಕತೆ ನಡೆಸಿ ಮತ್ತೊಮ್ಮೆ ಬರುವುದಾಗಿ ತಿಳಿಸಿದ್ದಾರೆ ಎಂದು ಸಚಿವ ಸಾ.ರಾ.ಮಹೇಶ್ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ಸುಳಿವು ಕೊಟ್ಟಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews