ನವದೆಹಲಿ: ಬಹು ನಿರೀಕ್ಷಿತ ಕಾಂಗ್ರೆಸ್ (Congress) ಅಭ್ಯರ್ಥಿಗಳ ಎರಡನೇ ಪಟ್ಟಿ ಗುರುವಾರ ಬಿಡುಗಡೆಯಾಗಲಿದೆ. ನಿನ್ನೆ ಸುದೀರ್ಘ ಸಭೆಗಳನ್ನು ನಡೆಸಿದ್ದ ಕಾಂಗ್ರೆಸ್ ಹೈಕಮಾಂಡ್ (Congress High Command) ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಎರಡನೇ ಪಟ್ಟಿಯಲ್ಲಿ ಸುಮಾರು ಐವತ್ತು ಅಭ್ಯರ್ಥಿಗಳ ಹೆಸರು ಪ್ರಕಟಗೊಳ್ಳಬಹುದು ಎಂದು ಕಾಂಗ್ರೆಸ್ ಉನ್ನತ ಮೂಲಗಳು ಹೇಳಿವೆ. ನಿನ್ನೆ ಸ್ಕೀನಿಂಗ್ ಸಭೆ ನಡೆಸಿದ್ದ ನಾಯಕರು ಚುನಾವಣಾ ಸಮಿತಿ ಮುಂದೆ ಹೊಸ ಪಟ್ಟಿಯನ್ನು ಪ್ರಸುತ್ತ ಪಡಿಸಿದರು. ಪಟ್ಟಿ ಪರಿಶೀಲಿಸಿ ಚರ್ಚೆ ನಡೆಸಿದ ಕೇಂದ್ರ ಚುನಾವಣಾ ಸಮಿತಿ ಸದಸ್ಯರು ಐವತ್ತಕ್ಕೂ ಹೆಚ್ಚು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದರು. ಇದನ್ನೂ ಓದಿ: ಅನಿರೀಕ್ಷಿತ ಬೆಳವಣಿಗೆಗಳಿಂದ ರಾಷ್ಟ್ರೀಯ ಪಕ್ಷಗಳು ವಿಲವಿಲ – ರೋಣ ಕ್ಷೇತ್ರದಲ್ಲಿ ಸಹೋದರರ ಸವಾಲ್
Advertisement
Advertisement
ಇನ್ನು ಬಾಕಿ ಕ್ಷೇತ್ರಗಳಿಗೆ ಇಂದು ಮಧ್ಯಾಹ್ನ 2:30 ಕ್ಕೆ ಮೂರನೇ ಬಾರಿಗೆ ಚುನಾವಣಾ ಸಮಿತಿ ಸಭೆ ನಡೆಸಲು ನಿರ್ಧರಿಸಿದ್ದಾರೆ. ನಿನ್ನೆಯ ಸಭೆ ಬಳಿಕ ಮಾತನಾಡಿದ ಉಸ್ತುವಾರಿ ರಣದೀಪ್ ಸುರ್ಜೆವಾಲ, ಕಾಂಗ್ರೆಸ್ ಚುನಾವಣೆ ಘೋಷಣೆಗೂ ಮುನ್ನ ಒಂದು ಪಟ್ಟಿ ಪ್ರಕಟಿಸಿತ್ತು. ಈಗ ಎರಡನೇ ಪಟ್ಟಿ ಪ್ರಕಟಿಸಲು ಸಿದ್ದವಾಗಿದೆ. ನಾಳೆ ಬೆಳಗ್ಗೆ ಹನ್ನೊಂದು ಗಂಟೆಯೊಳಗೆ ಪಟ್ಟಿ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
Advertisement
Advertisement
ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K.Shivakumar) ಮಾತನಾಡಿ, ನಾಳೆ ಸೂರ್ಯೋದಯದ ತನಕ ಕಾಯಿರಿ ಎಂದು ಪಟ್ಟಿ ಬಿಡುಗಡೆ ಬಗ್ಗೆ ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ ಬಿಜೆಪಿಯಲ್ಲಿ ಗೊಂದಲ – ಹಾಲಿ ಶಾಸಕನ ವಿರುದ್ಧವೇ ತೊಡೆತಟ್ಟಿದ ಸಹೋದರ
ಪಟ್ಟಿ ಬಿಡುಗಡೆಯಲ್ಲಿ ಗೊಂದಲ
ದೆಹಲಿಯಲ್ಲಿ ಟಿಕೆಟ್ ಗೊಂದಲ ಪರಿಹಾರ ಆದರೂ ಪಟ್ಟಿ ಬಿಡುಗಡೆ ಏಪ್ರಿಲ್ 10ರ ನಂತರವೇ ಮಾಡಲು ಬಹುತೇಕ ನಾಯಕರ ಒತ್ತಾಯ ಮಾಡ್ತಿದ್ದಾರೆ. ರಾಹುಲ್ ಗಾಂಧಿ ಕೋಲಾರದ ಸತ್ಯಮೇವ ಜಯತೆ ಮುಗಿಸಿ ಬಿಡುಗಡೆಗೆ ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿದಂತೆ ಕಾಣುತ್ತಿದೆ. ಬಹುತೇಕ ಇಂದೇ ಒಂದಷ್ಟು ಹೆಸರುಗಳ ಪಟ್ಟಿ ಬಿಡುಗಡೆ ಖಚಿತ ಎನ್ನಲಾಗಿದೆ. ಆದರೆ ಹಿರಿಯ ಕಾಂಗ್ರೆಸ್ ನಾಯಕರ ಸಲಹೆ ಏಪ್ರಿಲ್ 10ರ ನಂತರವೇ ಪಟ್ಟಿ ಬಿಡುಗಡೆ ಆಗಲಿ ಎಂಬುದು ಎನ್ನಲಾಗುತ್ತಿದೆ. ತೀರ ವಿವಾದ ಇಲ್ಲದ ಅರ್ಧದಷ್ಟಾದರು ಕ್ಷೇತ್ರದ ಪಟ್ಟಿ ಬಿಡುಗಡೆ ಇಂದೇ ಆಗಲಿ ಅನ್ನೋದು ಕೆಲ ನಾಯಕರ ವಾದ. ಒಟ್ಟಾರೆ ಇಂದೇ ಪಟ್ಟಿ ಬಿಡುಗಡೆ ಆದರೆ ಬಾಕಿ ಇರುವ ಹೆಸರುಗಳಲ್ಲೂ ಶೇಕಡಾ 50ಕ್ಕಿಂತ ಕಡಿಮೆ ಪ್ರಮಾಣದಲ್ಲೇ ಹೆಸರುಗಳು ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಏಪ್ರಿಲ್ 10ರ ನಂತರ ಪೂರ್ಣ ಪ್ರಮಾಣದ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ.