ನಾಗತಿಹಳ್ಳಿ ಚಂದ್ರಶೇಖರ್ (Nagatihalli Chandrasekhar) ನಿರ್ದೇಶನದಲ್ಲಿ ಮೂಡಿ ಬಂದ ‘ಅಮೃತಧಾರೆ’ (Amruthadhare) ಸಿನಿಮಾ ರಿಲೀಸ್ ಆಗಿ ಇಂದಿಗೆ 18 ವರ್ಷಗಳಾಗಿವೆ. ಈ ಸಿಹಿ ನೆನಪುಗಳನ್ನು ನಿರ್ದೇಶಕರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಆ ಸಿನಿಮಾದ ಫೋಟೋವೊಂದನ್ನು ಹಂಚಿಕೊಂಡು, ಅದರ ದಾಖಲೆಯನ್ನು ನೆನಪಿಸಿಕೊಂಡಿದ್ದಾರೆ.
Advertisement
16ನೇ ಸೆಪ್ಟೆಂಬರ್ 2005ರಲ್ಲಿ ಈ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಬೆಂಗಳೂರಿನ ಸಾಗರ ಚಿತ್ರಮಂದಿರದಲ್ಲೇ ಬರೋಬ್ಬರಿ 40 ವಾರಗಳ ಭರ್ಜರಿ ಪ್ರದರ್ಶನವನ್ನು ಕಂಡು ದಾಖಲೆ ಬರೆದಿತ್ತು. ಈ ಸಿನಿಮಾದ ಮೂಲಕ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಅವರು ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ಹೆಗ್ಗಳಿಕೆಗಳಲ್ಲಿ ಇದು ಕೂಡ ಒಂದಾಗಿತ್ತು. ಇದನ್ನೂ ಓದಿ:ಬಾಲಿವುಡ್‌ನಲ್ಲಿ ಬಂಪರ್ ಆಫರ್ ಗಿಟ್ಟಿಸಿಕೊಂಡ ‘ಸೀತಾರಾಮಂ’ ಬೆಡಗಿ
Advertisement
Advertisement
ಮೋಹಕ ತಾರೆ ರಮ್ಯಾ (Ramya) ಮತ್ತು ಧ್ಯಾನ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಸಿನಿಮಾದಲ್ಲಿ ಉತ್ಕಟ ಪ್ರೇಮವಿತ್ತು. ಕಥಾ ನಾಯಕ ಮತ್ತು ನಾಯಕಿ ಈ ಯುವ ಜೋಡಿ ಮದುವೆಯಾದರೂ, ಗಂಡ ಹೆಂಡತಿ ರೀತಿಯಲ್ಲಿ ಬದುಕುವುದು ಬೇಡ, ಸ್ನೇಹಿತರಾಗಿ ಇರೋಣ ಎಂದುಕೊಂಡು ಜೀವನ ನಡೆಸುತ್ತಿರುವಾಗ, ಈ ಜೋಡಿಯಲ್ಲಿ ಸಮಸ್ಯೆಯೊಂದು ಕಾಣಿಸುತ್ತದೆ. ಆಗ ಅದನ್ನು ಅವರು ಹೇಗೆ ದಾಟಿಕೊಳ್ಳುತ್ತಾರೆ ಎನ್ನುವುದೇ ಸಿನಿಮಾವಾಗಿತ್ತು.
Advertisement
ನಾಗತಿಹಳ್ಳಿ ಚಂದ್ರಶೇಖರ್ ಬರಹದಲ್ಲಿ ಮೂಡಿ ಬಂದಿದ್ದ ಈ ಸಿನಿಮಾವನ್ನು ಅನೇಕ ಪ್ರೇಮಿಗಳು ಮೆಚ್ಚಿದ್ದರು. ಆದರೆ, ದುರಂತದ ಕಥನವನ್ನು ನೋಡಿ ಕಣ್ಣೀರಿಟ್ಟಿದ್ದರು. ಧ್ಯಾನ್ ಮತ್ತು ರಮ್ಯಾ ಜೋಡಿಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದವು. ಇದೀಗ ಆ ಸಿನಿಮಾಗೆ 18ರ ಹರೆಯ.
Web Stories