ನವದೆಹಲಿ: ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಇಂದು ನಿರ್ಣಾಯಕ ದಿನವಾಗಿದೆ. ಇಂದು ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ರಿಯಲ್ ಸರ್ಕಸ್ ನಡೆಯಲಿದ್ದು, ಜಾರಕಿಹೊಳಿ ಬ್ರದರ್ಸ್ ನ್ನು ಹೈಕಮಾಂಡ್ ಸಮಾಧಾನ ಮಾಡುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಸರ್ಕಾರ ಉಳಿಯಲು ಜಾರಕಿಹೊಳಿ ಸಹೋದರರ ಬೇಡಿಕೆ ಈಡೇರಿಸುತ್ತಾರೆಯೇ ಎಂಬ ಕುತೂಹಲವೊಂದು ಮೂಡಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಜಾರಕಿಹೊಳಿ ಬ್ರದರ್ಸ್ ಬೇಡಿಕೆಗೆ ಗ್ರೀನ್ ಸಿಗ್ನಲ್ ನೀಡುತ್ತಾರೆಯೆ ಎಂಬುದು ಇಂದು ತಿಳಿದುಬರಲಿದೆ.
ತಮ್ಮ ಸಮುದಾಯಕ್ಕೆ ಇನ್ನೊಂದು ಸಚಿವ ಸ್ಥಾನ ಬೇಕು ಹಾಗೂ ಬೆಂಬಲಿಗರಿಗೆ ನಿಗಮ ಮಂಡಳಿ ಅವಕಾಶ ಬೇಕು ಅಂತ ಜಾರಕಿಹೊಳಿ ಬ್ರದರ್ಸ್ ಬೇಡಿಕೆ ಇಟ್ಟಿದ್ದಾರೆ. ಜಾರಕಿಹೊಳಿ ಬ್ರದರ್ಸ್ ಅವರ ಈ ಮನವಿಗೆ ರಾಹುಲ್ ಗಾಂಧಿ ಅಸ್ತು ಅನ್ನಬಹುದು ಎನ್ನಲಾಗುತ್ತಿದೆ.
ಇತ್ತ ಡಿಕೆಶಿ ವಿಚಾರದಲ್ಲಿ `ರಾಗಾ’ ಖಚಿತ ಭರವಸೆ ಕೊಡ್ತಾರಾ ಅನ್ನೋದು ಡೌಟು. ಯಾಕಂದ್ರೆ ಟ್ರಬಲ್ ಶೂಟರ್ ಡಿಕೆಶಿ ಅಂದರೆ ರಾಹುಲ್ ಗಾಂಧಿಗೆ ಅಚ್ಚುಮೆಚ್ಚು ಅಂತೆ. ಹೀಗಾಗಿ ಜಾರಕಿಹೊಳಿ ಬ್ರದರ್ಸ್ ಗಾಗಿ ಡಿಕೆಶಿಯನ್ನ ದೂರ ಇಡಲು ರಾಹುಲ್ ಗಾಂಧಿ ಒಪ್ಪಲ್ಲ. ಒಂದು ವೇಳೆ ಒಪ್ಪದಿದ್ರೆ ಜಾರಕಿಹೊಳಿ ಸಹೋದರರ ಮುಂದಿನ ನಡೆ ಏನು ಎಂಬುದು ತೀವ್ರ ಕುತೂಹಲ ಹುಟ್ಟಿಸುತ್ತದೆ. ಒಟ್ಟಿನಲ್ಲಿ ಬಂಡಾಯವೆದ್ದ ಬ್ರದರ್ಸ್ ಮೇಲೆ ಇಂದಿನ ದಿನ ನಿರ್ಣಯಕವಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv