ಬೆಂಗಳೂರು: ನಿಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು..? ಶಿಕ್ಷಣ ನೀಡುವ ಶಾಲೆ ಹೇಗಿರಬೇಕು..? ಎಲ್ಲಿ ಓದಿದರೆ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದು..? ಈ ರೀತಿ ಯೋಚನೆ ಮಾಡುತ್ತಿರುವ ಪೋಷಕರಿಗೆ ಪಬ್ಲಿಕ್ ಟಿವಿ ಡ್ರೀಮ್ಸ್ ಸ್ಕೂಲ್ ಎಕ್ಸ್‍ಪೋ ಆಯೋಜಿಸಿದೆ. ಶನಿವಾರ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಇಂದು ಕೂಡ ಎಕ್ಸ್ ಪೋ ನಡೆಯುತ್ತಿದೆ.
Advertisement
ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪಬ್ಲಿಕ್‍ಟಿವಿ ಪ್ರಸ್ತುತ ಪಡಿಸಿರುವ ಬಿಜಿಎಸ್ ಇಂಟರ್ ನ್ಯಾಷನಲ್ ಡ್ರೀಮ್ಸ್ ಸ್ಕೂಲ್ ಎಕ್ಸ್ ಪೋ 2ನೇ ಆವೃತ್ತಿಗೆ ಅದ್ದೂರಿಯಾಗಿ ಚಾಲನೆ ದೊರೆತಿದೆ. ಬೆಂಗಳೂರಿನ ವಿಜಯನಗರದ ಎಂಸಿ ಲೇಔಟ್‍ನಲ್ಲಿರೋ ಶ್ರೀ ಬಾಲಗಂಗಾಧರನಾಥ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ಕೊಟ್ಟರು. ಸಚಿವರಾದ ವಿ ಸೋಮಣ್ಣ, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್ ಆರ್ ರಂಗನಾಥ್ ಮತ್ತು ಬಿಬಿಎಂಪಿ ಸದಸ್ಯರಾದ ಉಮೇಶ್ ಶೆಟ್ಟಿ ಭಾಗವಹಿಸಿದ್ದರು.
Advertisement
Advertisement
ಈ ಎಜುಕೇಶನ್ ಎಕ್ಸ್ ಪೋಗೆ ಪೋಷಕರು ಉತ್ತಮ ರೆಸ್ಪಾನ್ಸ್ ಕೊಟ್ಟಿದ್ದಾರೆ. ಎಕ್ಸ್ ಪೋ ನಿಂದ ನಮಗೆ ತುಂಬಾ ಅನುಕೂಲವಾಗಿದೆ. ನಮಗೆ ಬೇಕಾದ ಶಾಲೆಯನ್ನ ಆಯ್ಕೆ ಮಾಡಿಕೊಳ್ಳಲು ಸಹಾಯಕವಾಗುತ್ತಿದೆ. ಒಂದೇ ಜಾಗದಲ್ಲಿ 20ಕ್ಕೂ ಹೆಚ್ಚಿನ ಶಾಲೆಗಳ ಬಗ್ಗೆ ಮಾಹಿತಿ ಸಿಗುತ್ತಿದ್ದು ಇದು ಅತ್ಯುತ್ತಮ ಕೆಲಸ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸುನೀತಾ ಹೇಳಿದ್ದಾರೆ. ಇದನ್ನೂ ಓದಿ: ಡ್ರೀಮ್ಸ್ ಸ್ಕೂಲ್ ಎಕ್ಸ್‌ಪೋಗೆ ನಿರ್ಮಲಾನಂದ ಶ್ರೀ ಚಾಲನೆ
Advertisement
ಇಂದು ಡ್ರೀಮ್ಸ್ ಸ್ಕೂಲ್ ಎಕ್ಸ್ ಪೋ ಕಡೇ ದಿನವಾಗಿದ್ದು, ಬೆಳಗ್ಗೆ 10 ರಿಂದ ಸಂಜೆ 6ರ ಎಕ್ಸ್ ಪೋ ನಡೆಯಲಿದೆ. ಮಕ್ಕಳಿಗೆ ಬೆಳಗ್ಗೆ 11 ಗಂಟೆಗೆ ಡ್ರಾಯಿಂಗ್ ಮತ್ತು ಕ್ವಿಜ್ ಸ್ಪರ್ಧೆಗಳ ಫೈನಲ್ಸ್ ನಡೆಯಲಿದೆ. ಜೊತೆಗೆ ಬರವಣಿಗೆ ತಜ್ಞ ಡಾ. ರಫೀವುಲ್ಲಾ ಬೇಗ್ ಅವರಿಂದ ಮೆಮೊರಿ ಅಂಡ್ ಹ್ಯಾಂಡ್ ರೈಟಿಂಗ್ ಸ್ಕಿಲ್ಸ್ ಬಗ್ಗೆ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ಇರಲಿದೆ. ಇಂದು ಮಿಸ್ ಮಾಡದೇ ಬನ್ನಿ, ಎಕ್ಸ್ ಪೋನ ಲಾಭ ಪಡೆಯಿರಿ.
ಏನು ಇರುತ್ತೆ?
* ಒಂದೇ ಮಳಿಗೆಯಲ್ಲಿ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು
* ಮಾಹಿತಿಪೂರ್ಣ ಸಂವಾದಗಳು
* ಡ್ರಾಯಿಂಗ್ ಸ್ಪರ್ಧೆ
* ಕ್ವಿಜ್ ಸ್ಪರ್ಧೆ
* ಮ್ಯಾಜಿಕ್ ಶೋ
* ಸ್ಪರ್ಧಿಗಳಿಗೆ ಉಚಿತ ಗಿಫ್ಟ್
* ಸ್ಥಳದಲ್ಲೇ ಅಡ್ಮಿಶನ್ ವ್ಯವಸ್ಥೆ