ಇಂದು ಕಿಚ್ಚನ ಹುಟ್ಟುಹಬ್ಬ: ಸೆಲೆಬ್ರೆಷನ್‌ಗೆ ಜಯನಗರದಲ್ಲಿ ಭರ್ಜರಿ ತಯಾರಿ

Public TV
1 Min Read
Sudeep 3

ಬೆಂಗಳೂರು: ಇಂದು ಅಭಿನಯ ಚಕ್ರವರ್ತಿ ಸುದೀಪ್ (Sudeep) ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳಲ್ಲಿ ಸೆಲೆಬ್ರೆಷನ್ ಜೋರಾಗಿದೆ. ಜಯನಗರದ ಎಂಇಎಸ್ ಗ್ರೌಂಡ್‌ನಲ್ಲಿ (MES Ground Jayanagar) ಬರ್ತಡೇಗೆ ಭರ್ಜರಿ ತಯಾರಿ ನಡೆದಿದೆ.

Sudeep Birthday

ಸ್ಯಾಂಡಲ್‌ವುಡ್ ಬಾದ್‌ಶಾ (Sandalwood Badshaah) ಕಿಚ್ಚ ಸುದೀಪ್ ಇಂದು (ಸೆ.2)ರಂದು ತಮ್ಮ 51ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಮೂಲಕ 50 ಮುಗಿದು 51ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.ಇದನ್ನೂ ಓದಿ: ಅಪರಾಧಿಗಳು ನಿರ್ಭೀತಿಯಿಂದ ಓಡಾಟ, ಸಂತ್ರಸ್ತರ ಪರದಾಟ: ದ್ರೌಪದಿ ಮುರ್ಮು ಕಳವಳ

ಇತ್ತೀಚಿಗಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸುದೀಪ್ ಮನೆಯ ಬಳಿ ಯಾವುದೇ ಆಚರಣೆ ಇರುವುದಿಲ್ಲ ಎಂಬ ಮನವಿ ಮಾಡಿದ್ದರೂ, ಮಧ್ಯರಾತ್ರಿಯೇ ಮನೆಯ ಬಳಿ ಅಭಿಮಾನಿಗಳು ಜಮಾಯಿಸಿದ್ದರು. ಆದರೆ ಅಲ್ಲಿ ಯಾವುದೇ ಸೆಲೆಬ್ರೇಷನ್‌ಗೂ ಕೂಡ ಅವಕಾಶ ಇರಲಿಲ್ಲ. ಪೊಲೀಸರು ಸುದೀಪ್ ಮನೆಯ ಬಳಿಯ ರಸ್ತೆಯನ್ನ ಬಂದ್ ಮಾಡಿದ್ದರು. ಸುದೀಪ್ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಬಾಸ್ ಬಾಸ್ ಕಿಚ್ಚ ಬಾಸ್ ಎಂದು ಘೋಷಣೆ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

Sudeep Birthday 2

ಈ ವರ್ಷ ಭರ್ಜರಿಯಾಗಿ ಸೆಲೆಬ್ರೇಟ್ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದು, ಜಯನಗರದ ಎಂಇಎಸ್ ಗ್ರೌಂಡ್‌ನಲ್ಲಿ ಸಕಲ ತಯಾರಿ ನಡೆದಿದೆ. ಇದೇ ವೇಳೆ ಸುದೀಪ್ ಫ್ಯಾನ್ಸ್‌ಗೆ ಸರ್‌ಪ್ರೈಸ್‌ ನೀಡಲಿದ್ದಾರೆ. ಬಿಲ್ಲಾರಂಗಾ ಬಾದ್‌ಶಾ ಸಿನಿಮಾ ಟೀಸರ್ ರಿಲೀಸ್ ಆಗಲಿದೆ. ಜೊತೆಗೆ ಮ್ಯಾಕ್ಸ್ ಸಿನಿಮಾದ ಸಾಂಗ್ ಕೂಡ ರಿಲೀಸ್ ಮಾಡಲಿದ್ದಾರೆ. ಕೆಆರ್‌ಜಿ ಸ್ಟುಡಿಯೋ ಪ್ರೊಡಕ್ಷನ್‌ನಲ್ಲಿ ಸುದೀಪ್ ನಿರ್ದೇಶನದ ಹೊಸ ಸಿನಿಮಾ ಕೂಡ ಇಂದು ಅನೌನ್ಸ್ ಆಗಲಿದೆ.ಇದನ್ನೂ ಓದಿ: ಸಿಎಂ ಬಳಿಕ ಹಲವು ಕೈ ನಾಯಕರಿಗೆ ಪ್ರಾಸಿಕ್ಯೂಷನ್‌ ಭೀತಿ

ಬರ್ತ್ಡೇಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದ್ದು, ಸ್ಯಾಂಡಲ್‌ವುಡ್ ಸ್ನೇಹಿತರು, ಆಪ್ತರು ಸಹ ಬಾದ್‌ಶಾ ಬರ್ತ್ಡೇಗೆ ಪ್ರೀತಿಯಿಂದ ಶುಭ ಕೋರಿದ್ದಾರೆ. ಸೃಜನ್ ಲೋಕೇಶ್ (Srujan Lokesh), ಇಂದ್ರಜಿತ್ ಲಂಕೇಶ್ ಸೇರಿ ಹಲವರು ಸುದೀಪ್ ನಿವಾಸಕ್ಕೆ ತೆರಳಿ ಶುಭ ಕೋರಿದ್ದಾರೆ.

Share This Article