ಬೆಂಗಳೂರು: ನಾಡು ನುಡಿಗಾಗಿ ಶ್ರಮಿಸಿದ ಸಾಧಕ, ನಾಡು ಕಂಡ ಶ್ರೇಷ್ಠ ಸಂಶೋಧಕ, ಸಾಹಿತಿ ಚಿದಾನಂದಮೂರ್ತಿಯವರ ಅಂತ್ಯ ಸಂಸ್ಕಾರ ಇಂದು ನಡೆಯಲಿದೆ.
ಬೆಂಗಳೂರಿನ ಸುಮನಹಳ್ಳಿಯ ಚಿತಾಗಾರದಲ್ಲಿ ಬೆಳಗ್ಗೆ ಸುಮಾರು 10.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ. 88 ವರ್ಷ ವಯಸ್ಸಿನ ಚಿದಾನಂದ ಮೂರ್ತಿಗಳು ವಯೋ ಸಹಜ ಕಾಯಿಲೆಯಿಂದ ಶನಿವಾರ ಬೆಳಗ್ಗಿನ ಜಾವ ನಾಲ್ಕು ಗಂಟೆ ವೇಳೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತೇಜಿಸಿದ್ದರು. ಇದನ್ನೂ ಓದಿ: ಯಾವುದೇ ವಿಧಿವಿಧಾನವಿಲ್ಲದೇ ಅಂತ್ಯಕ್ರಿಯೆ: ಚಿಮೂ ಪುತ್ರ
Advertisement
Advertisement
ಆರ್‌ಪಿಸಿ ಲೇಔಟ್‍ನ ನಿವಾಸದಲ್ಲಿ ಡಾ. ಚಿದಾನಂದಮೂರ್ತಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾಜಕೀಯ ಮುಖಂಡರು, ಸಾಹಿತಿಗಳು, ಕವಿಗಳು, ಸ್ವಾಮೀಜಿಗಳು ಸೇರಿದಂತೆ ಸಾವಿರಾರು ಜನರು ಅಂತಿಮ ದರ್ಶನಪಡೆದರು.
Advertisement
ಚಿದಾನಂದ ಮೂರ್ತಿಗಳ ಇಚ್ಚೆಯಂತೆ ಅವರ ಹಣೆಗೆ ವಿಭೂತಿ, ಹೂ, ಪೂಜೆ ಸೇರಿದಂತೆ ಯಾವುದೇ ಸಂಪ್ರಾದಾಯವನ್ನು ಆಚರಣೆ ಮಾಡದೇ ಇರಲು ತಿರ್ಮಾನಿಸಲಾಗಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಡಾ. ಚಿದಾನಂದಮೂರ್ತಿ ಅವರ ಅಂತ್ಯಸಂಸ್ಕಾರ ನಡೆಯಲಿದೆ.