ಬೆಂಗಳೂರು: ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ್ ಕುಮಾರ್ ಅಕಾಲಿಕ ನಿಧನದಿಂದ ಮುಂದೂಡಿಕೆಯಾಗಿದ್ದ, ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, ಸೆಲೆಬ್ರಿಟಿಗಳು ಹಕ್ಕು ಚಲಾವಣೆ ಮಾಡಿದ್ದಾರೆ.
216 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್, ನಟಿ ಭಾರತಿ ವಿಷ್ಣುವರ್ಧನ್, ತಾರಾ, ಅನುರಾಧ, ಪ್ರಮಿಳಾ ಜೋಷಾಯ್, ಮೇಘನಾ ರಾಜ್, ಸುಂದರ್ ರಾಜ್ ಹಾಸ್ಯ ನಟ ಉಮೇಶ್, ನಿರ್ಮಾಪಕ ಕೆ ಮಂಜು, ಸಾಹಿತಿ ಬರಗೂರು ರಾಮಚಂದ್ರಪ್ಪ, ಮುಖ್ಯಮಂತ್ರಿ ಚಂದ್ರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಸೇರಿದಂತೆ ಹಲವರು ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ್ರು.
Advertisement
Advertisement
ಮುಖ್ಯಮಂಂತ್ರಿ ಚಂದ್ರು ಅಸಮಾಧಾನ: ಮತಗಟ್ಟೆಯ ಅವ್ಯವಸ್ಥೆ ಕಂಡು ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ನಟ ಮುಖ್ಯಮಂತ್ರಿ ಚಂದ್ರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅಲ್ಲದೇ ಈ ಕುರಿತು ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ.
Advertisement
ಮೊದಲು ಒಂದು ತಾಸು ಲೇಟು ಅಂದ್ರು. ಸರತಿ ಸಾಲಿನಲ್ಲಿ ನಿಂತಿದ್ದೆ, ಮತದಾರರು ಇದ್ದಾಗ ಹೇಳಬೇಕಿತ್ತು, ಎಷ್ಟೊತ್ತು ಆಗುತ್ತೆ ಅಂತ. ಅಧಿಕಾರಿಗಳು ಎಲ್ಲಾ ಸರಿ ಮಾಡೋ ನಂಬಿಕೆ ಇದೆ. ವೋಟ್ ಹಾಕುವುದು ನಮ್ಮ ಹಕ್ಕು, ಅದಕ್ಕೆ ಕುಟುಂಬ ಸಮೇತ ಬಂದಿದ್ದೇನೆ. 216 ಮತಕೇಂದ್ರದ ಮಶಿನ್ ಮೇಲೆ ಗುಮಾನಿ ಇದೆ. ಮಶಿನ್ ಬದಲಾವಣೆ ಮಾಡಿಸಬೇಕು. ಹೊಸ ಯಂತ್ರ ಅಳವಡಿಸಿಬೇಕು. ಈ ಕುರಿತು ಚುನಾವಣೆ ಆಯುಕ್ತರಿಗೆ ದೂರು ನೀಡಿರುವುದಾಗಿ ಚಂದ್ರು ಹೇಳಿದ್ರು.
Advertisement
ಕಾಂಗ್ರೆಸ್ ಅಭ್ಯರ್ಥಿ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಮತಗಟ್ಟೆಗಳಿಗೆ ಭೇಟಿ ನೀಡಿ, ಮತದಾನದ ಪ್ರಕ್ರಿಯೆ ಗಮನಿಸಿದ್ರು. ಬೆಳ್ಳಂಬೆಳಗ್ಗೆ ವೃದ್ಧರು, ಅನಾರೋಗ್ಯಕ್ಕೆ ತುತ್ತಾದವರು ವ್ಹೀಲ್ ಚೇರ್‍ಗಳಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದ್ದು, ವಿಶೇಷವಾಗಿತ್ತು.
ಜಯನಗರ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿದ ಜೆಡಿಎಸ್ ಇಲ್ಲಿ ಕಾಂಗ್ರೆಸ್‍ಗೆ ಬೆಂಬಲ ಸೂಚಿಸಿದೆ. ಬಿಜೆಪಿಯ ಪ್ರಹ್ಲಾದ್, ರವಿಕೃಷ್ಣಾರೆಡ್ಡಿ ಸೇರಿದಂತೆ 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೂನ್ 13ರಂದು ಮತಎಣಿಕೆ ನಡೆಯಲಿದೆ.
https://www.youtube.com/watch?v=mtQKKYeY1l4
https://www.youtube.com/watch?v=6CAQxOoMenA