ಕೊರೊನಾ ಆತಂಕದ ಮಧ್ಯೆ ವೈಕುಂಠ ಏಕಾದಶಿ- ಹೊಸ ವರ್ಷದಲ್ಲಿ ದೇವಸ್ಥಾನಕ್ಕೆ ಭಕ್ತಸಾಗರ

Public TV
1 Min Read
VAKUNTA EKADASHI

ಬೆಂಗಳೂರು: ಹೊಸ ವರ್ಷ (New Year 2023) ಒಂದೆಡೆಯಾದರೆ, ಮತ್ತೊಂದೆಡೆ ವೈಕುಂಠ ಏಕಾದಶಿ (Vaikunta Ekadashi). ಬೆಂಗಳೂರಿನ ದೇವಸ್ಥಾನಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ. ಕಳೆದ 2 ವರ್ಷದಿಂದ ಕೊರೊನಾ ಹಿನ್ನೆಲೆ ವೈಕುಂಠ ಏಕಾದಶಿಯನ್ನ ಸಂಭ್ರಮ, ಸಡಗರದಿಂದ ಆಚರಿಸಲು ಆಗಿರಲಿಲ್ಲ. ಇದೀಗ ಕೊಂಚ ಕೊರೊನಾ ಆತಂಕದ ಮಧ್ಯೆ ವೈಕುಂಠ ಏಕಾದಶಿ ನಡೆಯಲಿದೆ. ದೇವಾಲಯಗಳಿಗೆ ಸಾವಿರಾರು ಭಕ್ತಾದಿಗಳ ದಂಡೇ ಹರಿದು ಬರಲಿದೆ.

VAKUNTA EKADASHI 1

ಹೊಸ ವರ್ಷ ಹಿನ್ನೆಲೆ ನಿನ್ನೆ ವೈಯಾಲಿಕಾವಲ್‍ನ ಟಿಟಿಡಿ ದೇವಸ್ಥಾನಕ್ಕೆ 25 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ರು. ತಿರುಪತಿಯಿಂದ ಲಾಡು ಕಡಿಮೆ ಪ್ರಮಾಣದಲ್ಲಿ ಬಂದ ಹಿನ್ನೆಲೆ 10 ಸಾವಿರ ಲಾಡು ವಿತರಣೆ ಮಾಡಿದ್ರು. ಇಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಬೆಳಗ್ಗೆ 3 ಗಂಟೆಯಿಂದ ರಾತ್ರಿ 12 ಗಂಟೆವರೆಗೂ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳಿಗೆ ಪಾಸ್‍ಗಳನ್ನು ವಿತರಿಸಲಾಗಿದೆ. ಇದನ್ನೂ ಓದಿ: ಕೋಲಾರ ಸಂಸದ ಮುನಿಸ್ವಾಮಿಗೆ ಮುತ್ತು ಕೊಟ್ಟ ಮಾಜಿ ಸಚಿವ ವರ್ತೂರು ಪ್ರಕಾಶ್

VAKUNTA EKADASHI 4

ನಿನ್ನೆ ರಾಜಾಜಿ ನಗರದ ಇಸ್ಕಾನ್‍(Iskon) ನ ರಾಧಾಕೃಷ್ಣ ಮಂದಿರಕ್ಕೆ ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸಿ ಶ್ರೀಕೃಷ್ಣ ಪರಮಾತ್ಮನನ್ನು ಕಣ್ತುಂಬಿಕೊಂಡರು. ಇಂದು ಕೂಡ ಒಂದೂವರೆ ಲಕ್ಷ ಜನ ವೈಕುಂಠ ಏಕಾದಶಿಗೆ ಬರೋ ನಿರೀಕ್ಷೆ ಇದೆ. ಬೆಳಗ್ಗೆ 3 ಗಂಟೆಯಿಂದ ಪೂಜೆಗಳು ನಡೆಯಲಿವೆ. ಸುಪ್ರಭಾತ ಸೇವೆ, ಅರ್ಚನ ಸೇವೆ, ದ್ವಾರ ಸೇವೆ ನಡೆಯುತ್ತವೆ. ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರು ದರ್ಶನಕ್ಕೆ ಬರಬಹುದು. ರಾತ್ರಿ 11 ಗಂಟೆವರೆಗೂ ದರ್ಶನ ಇರುತ್ತದೆ. ಬೆಳಗ್ಗೆ ಮತ್ತು ಸಂಜೆ ಕಲ್ಯಾಣೋತ್ಸವ ಇರುತ್ತದೆ.

VAKUNTA EKADASHI 2

ಕಳೆದ 2 ವರ್ಷದಿಂದ ಕೊರೊನಾ (Corona Virus) ಹಿನ್ನೆಲೆ ವೈಕುಂಠ ಏಕಾದಶಿಯನ್ನ ಸಂಭ್ರಮ, ಸಡಗರದಿಂದ ಆಚರಿಸಲು ಆಗಿರಲಿಲ್ಲ. ಇದೀಗ ಕೊಂಚ ಕೊರೋನಾ ಆತಂಕದ ಮಧ್ಯೆ ವೈಕುಂಠ ಏಕಾದಶಿ ನಡೆಯಲಿದೆ. ದೇವಾಲಯಗಳಿಗೆ ಸಾವಿರಾರು ಭಕ್ತಾದಿಗಳ ದಂಡೇ ಹರಿದು ಬರಲಿದೆ. ಇದನ್ನೂ ಓದಿ: ಮಹದಾಯಿ ಯೋಜನೆಗೆ ಡಿಪಿಆರ್‌ ಆಗಿದೆ; ಕಾಂಗ್ರೆಸ್‌ ಟೀಕೆಗೆ ತಲೆಕೆಡಿಸಿಕೊಳ್ಳಲ್ಲ – ಸಿಎಂ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *