– ಶುದ್ದೀಕರಣದ ನಂತರ ಸೋಮವಾರ ಬೆಳಿಗ್ಗೆ ಓಪನ್
ಬೆಂಗಳೂರು: ಇಂದು ನಭೋ ಮಂಡಲದಲ್ಲಿ ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ನಡೆಯಲಿದೆ. ಈ ಗ್ರಹಣದ ಎಫೆಕ್ಟ್ ದೇವರಿಗೂ ತಟ್ಟಲಿದ್ದು, ಬೆಂಗಳೂರಿನ ಬಹುತೇಕ ದೇವಾಲಯಗಳು ಮಧ್ಯಾಹ್ನವೇ ಬಂದ್ ಆಗಲಿವೆ.
ಇಂದು ಭಾರತದಲ್ಲಿ ಚಂದ್ರಗ್ರಹಣ ಸಂಭವಿಸಲಿದ್ದು, ಜನರಲ್ಲಿ ಸಾಕಷ್ಟು ಆತಂಕ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಬಹುತೇಕ ದೇವಾಲಯಗಳು ಮಧ್ಯಾಹ್ನವೇ ಕ್ಲೋಸ್ ಆಗಲಿವೆ. ನಗರದ ಪ್ರಸಿದ್ಧ ದೇಗುಲಗಳ ಸಮಯವೂ ಬದಲಾವಣೆಯಾಗಲಿದೆ. ನಗರದ ಗವಿಪುರಂನ ಗವಿಗಂಗಾಧರೇಶ್ವರ ದೇವಾಲಯ ಇಂದು ಬೆಳಗ್ಗೆ 12 ಗಂಟೆಗೆ ಬಂದ್ ಆಗಲಿದ್ದು, ಗ್ರಹಣಕ್ಕೂ ಮೊದಲೇ ಸುಮಾರು 6 ಗಂಟೆ ದೇವಾಲಯ ಬಂದ್ ಆಗಲಿದೆ. ಗ್ರಹಣದ ಮರುದಿನ ಸೋಮವಾರ ಬೆಳಗ್ಗೆ 6 ಗಂಟೆಗೆ ಶುದ್ಧೀಕರಣ, ಪುಣ್ಯ ಮಾಡಿ ದರ್ಶನ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಅತ್ತ ಹುಣ್ಣಿಮೆ, ಇತ್ತ ಖಗ್ರಾಸ ಚಂದ್ರಗ್ರಹಣ – ಮಧ್ಯಾಹ್ನವೇ ಬಂದ್ ಆಗಲಿವೆ ಶನೇಶ್ವರ ದೇವಾಲಯಗಳು
ಇನ್ನೂ, ಗ್ರಹಣದ ದಿನ ಅಂದ್ರೆ ಇಂದು ಬನಶಂಕರಿ ದೇವಿ ಜನ್ಮದಿನೋತ್ಸವವಿದ್ದು, ಸಂಜೆ 4 ಗಂಟೆಯವರೆಗೆ ಚಂಡಿಕಾ ಹೋಮ ಸೇರಿದಂತೆ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ರಾಹುಕಾಲದ ಪೂಜೆ ಮುಗಿಸಿ 6 ಗಂಟೆಗೆ ದೇವಾಲಯದ ಎಲ್ಲಾ ಕಡೆ ದರ್ಬೆ ಇಟ್ಟು ಬಾಗಿಲು ಕ್ಲೋಸ್ ಮಾಡಲಾಗಿದೆ. ಮರುದಿನ ಬೆಳಗ್ಗೆ 5 ಗಂಟೆಗೆ ದೇವಾಲಯ ಶುದ್ಧೀಕರಣ ಮಾಡಿ, ಬೆಳಗ್ಗೆ 6 ಗಂಟೆಯಿಂದ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ನಗರದ ಕಾಡುಮಲ್ಲೇಶ್ವರ ದೇವಾಲಯ, ಸಂಜೆ 6:30ಕ್ಕೆ ಕ್ಲೋಸ್ ಆಗಲಿದೆ. ನಾಳೆ ಅಂದರೇ ಸೋಮವಾರ ಬೆಳಿಗ್ಗೆ 4 ಗಂಟೆಗೆ ದೇವಾಲಯ ಒಪನ್ ಆಗಲಿದ್ದು, ಶುದ್ಧೀಕರಣ ಕಾರ್ಯ, ನಂತರ ಗ್ರಹಣ ಶಾಂತಿಗಾಗಿ ರುದ್ರ ಹೋಮ, ಪ್ರಸಾದ ಸೇವೆಯಿದೆ. ಇದನ್ನೂ ಓದಿ: ಚಂದ್ರಗ್ರಹಣ; ಉಡುಪಿ ಕೃಷ್ಣ ಮಠದಲ್ಲಿ ಹಲವು ಬದಲಾವಣೆ
ನಗರದ ಗಾಳಿ ಆಂಜನೇಯ ದೇವಸ್ಥಾನ ಇಂದು ಮಧ್ಯಾಹ್ನ 3 ಗಂಟೆಗೆ ಕ್ಲೋಸ್ ಆಗಲಿದ್ದು, ದೇವಾಲಯವನ್ನ ದರ್ಬೆ ಹಾಕಿ ಮುಚ್ಚಲಾಗಿದೆ. ನಾಳೆ ಬೆಳಗ್ಗೆ 4ಕ್ಕೆ ಗ್ರಹಣ ಮುಕ್ತಿ ಶುಚಿತ್ವ ಕಾರ್ಯ ನಡೆಸಲಿದ್ದು, 6 ಗಂಟೆಯ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಇನ್ನೂ ಅಣ್ಣಮ್ಮ ದೇವಿ ದೇವಾಲಯದಲ್ಲಿ ಹುಣ್ಣುಮೆಯ ದಿನ ವಿಶೇಷ ಪೂಜೆಯಿದ್ದು, ಸಂಜೆ 8 ಗಂಟೆಗೆ ದೇವಾಲಯ ಬಂದ್ ಆಗಲಿದೆ. ಅದಕ್ಕಿಂತ ಮೊದಲೇ 7:30ಕ್ಕೆ ಮಹಾ ಮಂಗಳಾರತಿ ಮಾಡಿ, ದರ್ಬೆ ಹಾಕಿ ದೇವಸ್ಥಾನ ಕ್ಲೋಸ್ ಮಾಡಲಾಗಿದೆ. ಇದನ್ನೂ ಓದಿ: ರಾಹುಗ್ರಸ್ತ ರಕ್ತ ಚಂದ್ರಗ್ರಹಣಕ್ಕೆ ಕ್ಷಣಗಣನೆ – ರಾಜ್ಯದ ಪ್ರಸಿದ್ಧ ದೇವಾಲಯಗಳು ಬಂದ್
ಬಂಡೆ ಮಹಾಕಾಳಿ ದೇವಾಲಯ ಭಾನುವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 7ರವರೆಗೆ ಮಾತ್ರ ಓಪನ್ ಇರಲಿದೆ. ಸಂಜೆ ವಿಶೇಷ ಪೂಜೆ ಮಾಡಿ ದೇವಾಲಯ ಕ್ಲೋಸ್ ಆಗಲಿದೆ.