ಬೆಂಗಳೂರು: ಪಬ್ಲಿಕ್ ಟಿವಿ (PUBLiC TV) ಪ್ರಸ್ತುತಪಡಿಸುವ ವಿದ್ಯಾಮಂದಿರ 2022 ಮೆಗಾ ಪಿಜಿ ಎಜುಕೇಶನ್ ಎಕ್ಸ್ ಪೋ (Mega Education Expo0 ಗೆ ಶನಿವಾರ ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಚಾಲನೆ ಸಿಕ್ಕಿದೆ. ಮೊದಲ ದಿನವೇ ಅದ್ಭುತ ರೆಸ್ಪಾನ್ಸ್ ಸಿಕ್ಕಿದ್ದು, ಮಳೆಯ ನಡುವೆಯೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗಿಯಾದ್ರು.
Advertisement
ಮೊದಲ ದಿನದ ಪಬ್ಲಿಕ್ ಶಿಕ್ಷಣ ಮೇಳದಲ್ಲಿ 36ಕ್ಕೂ ಹೆಚ್ಚು ಶೈಕ್ಷಣಿಕ ವಿದ್ಯಾಸಂಸ್ಥೆಗಳು ಭಾಗಿಯಾಗಿದ್ದವು. ಒಂದೂವರೆ ಸಾವಿರದಿಂದ 2 ಸಾವಿರದಷ್ಟು ವಿದ್ಯಾರ್ಥಿಗಳು ಭಾಗಿಯಾಗಿ ನೋಂದಣಿ ಮಾಡಿಸಿದ್ದಾರೆ. ಪ್ರತಿ ಅರ್ಧ ಗಂಟೆಗೊಮ್ಮೆ ಜೀನಿ ಹೆಲ್ತ್ ಮಿಲೆಟ್ ಕಂಪನಿಯಿಂದ ಲಕ್ಕಿ ಡಿಪ್ ಕೂಡ ಇತ್ತು. ಇದನ್ನೂ ಓದಿ: ನಂಗೂ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪಿಜಿ ಮಾಡಬೇಕು ಅನಿಸಿದೆ: ಹೆಚ್. ಆರ್ ರಂಗನಾಥ್
Advertisement
Advertisement
ಎಜುಕೇಶನ್ ಎಕ್ಸ್ ಪೋಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ (Ashwath Narayan0 ಚಾಲನೆ ನೀಡಿದ್ರು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ (H R Ranganath), ಬಿಜಿಎಸ್ ಸಂಸ್ಥೆ ಎಂಡಿ ಪ್ರಕಾಶನಾಥ ಸ್ವಾಮೀಜಿ, ರೇವಾ ವಿವಿ ಪ್ರೋ-ಚಾನ್ಸಲರ್ ಉಮೇಶ್ ಎಸ್.ರಾಜು, ಪ್ರೊ. ವಿಸಿ ವಿದ್ಯಾಶಂಕರ ಶೆಟ್ಟಿ, ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆ ಚೇರ್ಮನ್ ಡಿಕೆ ಮೋಹನ್ ಸೇರಿ ಹಲವು ಗಣ್ಯರು ಭಾಗಿಯದ್ರು. ಇದನ್ನೂ ಓದಿ: ಡಿಗ್ರಿ ಬಳಿಕ ಡಾಕ್ಟರೇಟ್ ಕೋರ್ಸ್‍ಗಳ ಕಡೆ ಯುವಕರು ಹೆಚ್ಚು ಗಮನ ಹರಿಸಬೇಕು: ಅಶ್ವಥ್ ನಾರಾಯಣ್
Advertisement
ಇನ್ನೂ ಇಂದೂ ಕೂಡ ಶಿಕ್ಷಣ ಮೇಳ ನಡೆಯಲಿದ್ದು, ಶೈಕ್ಷಣಿಕ ವಿದ್ಯಾಸಂಸ್ಥೆಗಳ ಸ್ಟಾಲ್‍ಗಳಲ್ಲಿ, ಕೋರ್ಸ್‍ಗಳ ವಿಶೇಷತೆ, ಹಾಗೂ ಯಾವ್ಯಾವ ಕೋರ್ಸ್‍ಗಳು ಭವಿಷ್ಯಕ್ಕೆ ನೆರವಾಗಲಿವೆ ಎಂಬ ಶೈಕ್ಷಣಿಕ ಮಾಹಿತಿ ನೀಡಲಾಗುತ್ತೆ. ನೀವು ಕೂಡ ಮಿಸ್ ಮಾಡ್ಕೊಂಡಿದ್ರೆ ಉನ್ನತ ಮಟ್ಟದ ವಿದ್ಯಾಭ್ಯಾಸ, ಮುಂದಿನ ಉಜ್ವಲ ಭವಿಷ್ಯಕ್ಕಾಗಿ ವಿದ್ಯಾಮಂದಿರಕ್ಕೆ ಬನ್ನಿ.. ಭಾಗವಹಿಸಿ.