ಸೌತಾಂಪ್ಟನ್: ಲಂಡನ್‍ನ ಕೆನ್ನಿಂಗ್ಟನ್ ಕ್ರೀಡಾಂಗಣ ಇಂದು ಹೈವೋಲ್ಟೇಜ್ ಮ್ಯಾಚ್‍ಗೆ ಸಾಕ್ಷಿಯಾಗಲಿದೆ. ಭಾರತ-ಆಸ್ಟ್ರೇಲಿಯಾ ನಡುವಿನ ಇಂದಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.
ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಸೋಲುಣಿಸಿರುವ ಕೊಹ್ಲಿ ಪಡೆ, ಇಂದು ಆಸ್ಟ್ರೇಲಿಯಾ ವಿರುದ್ಧ ಸೆಣಸುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಆದ ತಪ್ಪುಗಳನ್ನ ತಿದ್ದುಕೊಂಡು ಎಚ್ಚರಿಕೆಯಿಂದಾಡಲು ಕೊಹ್ಲಿ ಪಡೆ ತಂತ್ರ ರೂಪಿಸಿದೆ.
Advertisement
Advertisement
ಮೊದಲ ಪಂದ್ಯದಲ್ಲೇ ಶತಕ ಸಿಡಿಸಿರುವ ರೋಹಿತ್ ಫಾರ್ಮ್ ನಲ್ಲಿದ್ದು ಆಸಿಸ್‍ಗೆ ನಡುಕ ಹುಟ್ಟಿಸಿದ್ದಾರೆ. ಬ್ಯಾಟಿಂಗ್ ವೈಫಲ್ಯ ಕಂಡ ಧವನ್, ಕೊಹ್ಲಿ ಇಂದಿನ ಪಂದ್ಯದಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಜಾದವ್, ಕೆಎಲ್ ರಾಹುಲ್, ಧೋನಿ, ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಮಿಡಲ್ ಆರ್ಡರ್ ನ ಟ್ರಂಪ್ ಕಾರ್ಡ್ಸ್, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ಎದುರಾಳಿಗಳನ್ನ ಕಟ್ಟಿಹಾಕೋ ತಾಕತ್ತು ಹೊಂದಿದ್ದಾರೆ. ಚಹಲ್, ಕುಲ್ದೀಪ್ ಯಾದವ್ ಆಸಿಸ್ ಬ್ಯಾಟ್ಸ್ ಮನ್‍ಗಳನ್ನ ಕಾಡೋದು ಗ್ಯಾರಂಟಿ.
Advertisement
Advertisement
ಆಸಿಸ್ ರಣತಂತ್ರ, ಕೊಹ್ಲಿ ಬಾಯ್ಸ್ ಪ್ರತಿತಂತ್ರ:
ಅಫ್ಘಾನಿಸ್ತಾನ್, ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಬೀಗುತ್ತಿರುವ ಫಿಂಚ್ ಪಡೆ ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿದೆ. ಆದರೆ ಎದುರಾಳಿ ಭಾರತ ಏನು ಅಷ್ಟೊಂದು ಸುಲಭ ತುತ್ತಲ್ಲ ಅಂತಲೂ ಗೊತ್ತಿದೆ. ಹಾಗಾಗಿ, ಆಸಿಸರು ರಣತಂತ್ರ ಹೆಣೆದಿದ್ದಾರೆ. ಬಲಿಷ್ಠ ಬ್ಯಾಟಿಂಗ್ ಲೈನ್ ಆಪ್ ಹೊಂದಿರುವ ಆಸಿಸ್‍ಗೆ ಡೇವಿಡ್ ವಾರ್ನರ್, ಸ್ಮಿತ್ ಆನೆಬಲ. ಫಿಂಚ್, ಖವಾಜ, ಮ್ಯಾಕ್ಸ್ ವೆಲ್, ಸ್ಟೋಯ್ನಿಸ್, ಅಲೆಕ್ಸ್ ಗೆ ಪಂದ್ಯದ ಗತಿಯನ್ನೇ ಬದಲಿಸೋ ತಾಕತ್ತಿದೆ. ಬಲಿಷ್ಠ ಬೌಲಿಂಗ್ ಪಡೆಯನ್ನೂ ಹೊಂದಿರೋ ಆಸ್ಟ್ರೇಲಿಯಾಗೆ ಕೌಲ್ಟರ್ ನೈಲ್, ಕಮಿನ್ಸ್, ಮಿಚಲ್ ಸ್ಟಾರ್ಕ್, ಝುಂಪಾ ಪ್ರಮುಖ ಅಸ್ತ್ರಗಳಾಗಿವೆ.
ಒಟ್ಟಿನಲ್ಲಿ, ವಿಶ್ವಕ್ರಿಕೆಟ್‍ನ ದಿಗ್ಗಜರ ಸೆಣಸಾಟ ಫೈನಲ್ ಪಂದ್ಯದಷ್ಟೇ ಕೌತುಕವನ್ನ ಹೆಚ್ಚಿಸಿದೆ. ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ.