ಹುಬ್ಬಳ್ಳಿ: ಹೋಟೆಲ್ ಕಾರ್ಮಿಕರ ಮೇಲೆ ನಡೆದ ಹಲ್ಲೆ ಖಂಡಿಸಿ ಇಂದು ಹುಬ್ಬಳ್ಳಿ-ಧಾರವಾಡ ಹೋಟೆಲ್ ಬಂದ್ ಗೆ ಕರೆನೀಡಲಾಗಿದ್ದು, ಬಂದ್ ಹಿನ್ನೆಲೆಯಲ್ಲಿ ಅವಳಿನಗರದ ಎಲ್ಲಾ ಹೋಟೆಲ್ ಗಳಿಗೆ ಬೀಗ ಹಾಕಲಾಗಿದೆ.
ಹೋಟೆಲ್ ಮಾಲೀಕರು ಕರೆ ನೀಡಿರುವ ಬಂದ್ ಗೆ ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕರು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಸ್ವೀಟ್ ಮಾರ್ಟ್ ಮತ್ತು ಬೇಕರಿ ವರ್ತಕರು ಕೂಡ ಬೆಂಬಲ ಸೂಚಿಸಿದ್ದಾರೆ. ಕೇವಲ ಅವಳಿ ನಗರ ಮಾತ್ರವಲ್ಲದೆ ಕುಂದಗೋಳ ಹಾಗೂ ಕಲಘಟಗಿ ಹೋಟೆಲ್ ಮಾಲೀಕರ ಸಂಘ ಕೂಡ ಬಂದ್ ಗೆ ಬೆಂಬಲ ನೀಡಿದ್ದು, ಅಲ್ಲಿನ ಹೋಟೆಲ್ ಗಳನ್ನೂ ಕೂಡ ಬಂದ್ ಮಾಡಿದ್ದಾರೆ.
Advertisement
ಇಂದು ಬೆಳಗ್ಗೆ ಮರಾಠ ಗಲ್ಲಿಯಲ್ಲಿರುವ ಸಂಘದ ಕಚೇರಿಯಿಂದ ದುರ್ಗದ ಬೈಲ್, ದಾಜೀಬಾನಪೇಟ್ ಮಾರ್ಗವಾಗಿ ತಹಶೀಲ್ದಾರ್ ಕಚೇರಿವರಗೆ ಕೈಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಿದ್ದಾರೆ.
Advertisement