-ರಾಜಧಾನಿಯಲ್ಲೂ ಗುಜರಾತ್ ಇತಿಹಾಸ ರಿಪೀಟ್ ಆಗೇಬಿಡುತ್ತಾ..?
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಕರ್ನಾಟಕ ವಿಧಾನಸಭಾ ಚುಣಾವಣೆಯ (Karnataka Election 2023) ಕೊನೆಯ ದಿನದ ಪ್ರಚಾರ ಮುಗಿಸಿದ್ದಾರೆ. ಇದೀಗ ಪ್ರಧಾನಿ ಬಂದು ಹೋದ ಮೇಲೆ ಬಿಜೆಪಿ ಗೆದ್ದೇ ಗೆಲ್ಲುತ್ತೆ ಅನ್ನೋ ವಿಶ್ವಾಸ ಕಮಲ ಪಾಳದಲ್ಲಿ ಮೂಡಿದೆ.
Advertisement
ಸಿಲಿಕಾನ್ ಸಿಟಿಯಲ್ಲಿ ಮೋದಿ 40 ಕಿ.ಮೀ ಮೆಗಾ ರೋಡ್ ಎಫೆಕ್ಟ್ ಏನು? ರಾಜಧಾನಿಯಲ್ಲೂ ಗುಜರಾತ್ ಇತಿಹಾಸ ರಿಪೀಟ್ ಆಗೇಬಿಡುತ್ತಾ? ಬೆಂಗಳೂರಿನ ಮೇಲೆ ಬಿಜೆಪಿ ಮತ್ತೆ ಹಿಡಿತ ಸಾಧಿಸಲು ರಹದಾರಿಯಾಗುತ್ತಾ ನಮೋ ರೋಡ್ ಶೋ..? ಅನ್ನೋ ಬಗ್ಗೆ ಬಿಜೆಪಿ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ಇದನ್ನೂ ಓದಿ: ಮೋದಿ ರೋಡ್‌ಶೋ; `ಜೈ ಬಜರಂಗಿ’ ಪೋಸ್ಟರ್ ಹಿಡಿದು ಗಮನ ಸೆಳೆದ ಮುಸ್ಲಿಂ ಮಹಿಳೆ
Advertisement
Advertisement
ಬೆಂಗಳೂರಿನಲ್ಲಿ ಗುಜರಾತ್‌ನ ಅಹಮದಾಬಾದ್ ಮಾದರಿಯ ರೋಡ್ ಶೋ ನಡೆಸಿದ್ದ ಮೋದಿ ಸಕ್ಸಸ್ ತಂದುಕೊಟ್ಟಿದ್ದರು. ಬೆಂಗಳೂರಿನಲ್ಲೂ ಅದೇ ಪ್ರಮಾಣದ ಸಕ್ಸಸ್ ತಂದುಕೊಡುವ ನಿರೀಕ್ಷೆಯನ್ನ ಹುಟ್ಟುಹಾಕಿದ್ದಾರೆ. ಗುಜರಾತ್ ರೋಡ್ ಶೋ ಹಿಸ್ಟರಿ ಇಲ್ಲೂ ಮರುಕಳಿಸುವ ಭರವಸೆಯಲ್ಲಿ ಬಿಜೆಪಿ ಇದೆ.
Advertisement
ಪ್ರಧಾನಿ ರೋಡ್ ಶೋ ನಡೆಸಿದ ಮೇಲೆ ಬಿಜೆಪಿ ಪರ ಜನರ ಅಲೆ ಜೋರಾಗಿದೆ. ಇದರಿಂದ 18-20 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಹೊಂದಿದೆ. 2008ರಲ್ಲಿ ಬಿಜೆಪಿ 17 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಇದನ್ನೂ ಓದಿ: ಡಿಕೆಶಿ ಪರ ಅಖಾಡಕ್ಕಿಳಿದ ಪತ್ನಿ, ಪುತ್ರ – ಕನಕಪುರದ ಹಲವೆಡೆ ಬಿರುಸಿನ ಪ್ರಚಾರ
ಈ ಬಾರಿ ಚುನಾವಣೆಯಲ್ಲಿ ಹಳೆ ಮೈಸೂರು ಹಾಗೂ ಬೆಂಗಳೂರು ನಗರವನ್ನ ಹೆಚ್ಚಾಗಿ ಟಾರ್ಗೆಟ್ ಮಾಡಿರುವ ಬಿಜೆಪಿ ಬಹುಮತದ ಡಬಲ್ ಎಂಜಿನ್ ಸರ್ಕಾರ ಸ್ಥಾಪಿಸುವ ನಿರೀಕ್ಷೆ ಹೊಂದಿದೆ. ಸೋಮವಾರ (ಮೇ 8) ಬಹಿರಂಗಪ್ರಚಾರಕ್ಕೆ ತೆರೆ ಬೀಳಲಿದ್ದು, ಯಾವ ಪಕ್ಷದ ಹಣೆಬರಹ ಹೇಗಿದೆ ಅನ್ನೋದನ್ನ ಕಾದುನೋಡಬೇಕಿದೆ.