ಬೆಂಗಳೂರು: ಮೈಸೂರಿನ (Mysuru) ಉದಯಗಿರಿ ಪೊಲೀಸ್ ಠಾಣೆಗೆ (Udayagiri Police Station) ಕಲ್ಲು ತೂರಾಟ ಪ್ರಕರಣ ಸಂಬಂಧ ಇಂದು ಮಧ್ಯಾಹ್ನ 12:45 ಕ್ಕೆ ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಸಭೆಯಲ್ಲಿ ಸರ್ಕಾರದ ಎಸಿಎಸ್, ಗೃಹ ಇಲಾಖೆ ಅಧಿಕಾರಿಗಳು, ಡಿಜಿಪಿ ಅಲೋಕ್ ಮೋಹನ್, ಎಡಿಜಿಪಿ, ಮೈಸೂರು ಡಿಸಿ ಹಾಗೂ ಕಮಿಷನರ್ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಉದಯಗಿರಿಯಲ್ಲಿ ಸಲ್ಪ ಯಾಮಾರಿದ್ರೂ ಬೀಳುತಿತ್ತು ಪೊಲೀಸರ ಹೆಣಗಳು – ಎಫ್‌ಐಆರ್‌ನಲ್ಲಿದೆ ಸ್ಫೋಟಕ ವಿಚಾರ
ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆದಿತ್ತು. ಘಟನೆಯಲ್ಲಿ ಪೊಲೀಸರ ವೈಫಲ್ಯ ಕಂಡು ಬಂದಿತ್ತು. ಕಾನೂನು ಸುವ್ಯವಸ್ಥೆ ಹದ್ದಗೆಟ್ಟ ಬಗ್ಗೆ ವರದಿಯಾಗಿತ್ತು. ಕೋಮು ಗಲಭೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಂಡಿರುವ ಬಗ್ಗೆ, ಎಷ್ಟು ಮಂದಿ ಆರೋಪಿಗಳ ಬಂಧನ ಆಗಿದೆ. ಘಟನೆ ನಡೆಯಲು ಕಾರಣವಾದ ಅಂಶ ಯಾವುದು? ಡಿಸಿಪಿ ಕಾರಿನ ಮೇಲೆ ಕಲ್ಲು ತೂರಾಟ ಮಾಡಲು ಕಾರಣವೇನು? ಕಲ್ಲು ಸಂಗ್ರಹ ಮಾಡಿದವರು ಯಾರು? ಎಂಬ ಮಾಹಿತಿಯನ್ನು ಸಿಎಂ ಪಡೆಯಲಿದ್ದಾರೆ.
ಪ್ರಕರಣದ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಲಿದ್ದಾರೆ. ಮುಂದೆ ಇಂತಹ ಘಟನೆ ನಡೆಯದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಇದನ್ನೂ ಓದಿ: ಮೈಸೂರಿನ ಉದಯಗಿರಿ ಗಲಾಟೆ – ಕಲ್ಲು ತೂರಿದ 1,000 ಕ್ಕೂ ಹೆಚ್ಚು ಆರೋಪಿಗಳ ವಿರುದ್ಧ ಎಫ್‌ಐಆರ್