ಬೆಂಗಳೂರು: ಇಂದು ಮತ್ತು ನಾಳೆ ಅಂದರೆ ಬುಧವಾರ ಸಿಲಿಕಾನ್ ಸಿಟಿಯಲ್ಲಿ ಪ್ರಯಾಣಿಕರಿಗೆ, ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟಲಿದೆ.
ಕರ್ನಾಟಕದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ಆಗ್ರಹಿಸಿ ಸುಮಾರು 2 ಸಾವಿರ ಮಹಿಳೆಯರಿಂದ ಬೆಂಗಳೂರು ಚಲೋ ಕಾರ್ಯಕ್ರಮ ನಡೆಯಲಿದೆ. ಚಿತ್ರದುರ್ಗದ ಕ್ರೀಡಾಂಗಣದಲ್ಲಿ ಜನವರಿ 19ರಂದು ಮಹಿಳೆಯರು ಕಾಲ್ನಡಿಗೆ ಜಾಥಾ ಆರಂಭಿಸಿದ್ದರು. ಇಂದು ಬೆಂಗಳೂರು ನಗರಕ್ಕೆ ಬರಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್ ಉಂಟಾಗುವ ಸಾಧ್ಯತೆ ಇದೆ.
Advertisement
Advertisement
ಪ್ರತಿಭಟನಾ ಮಹಿಳೆಯರು ಇಂದು ರಾತ್ರಿಯಿಡೀ ಕಾಲ್ನಡಿಗೆ ಜಾಥಾ ಮಾಡಲಿದ್ದು, ನೈಸ್‍ರೋಡ್, ಜಾಲಹಳ್ಳಿ, ಗೊರಗುಂಟೆಪಾಳ್ಯ ಹಾಗೂ ಯಶವಂತಪುರ, ಮಾರ್ಗವಾಗಿ ಮಲ್ಲೇಶ್ವರಂ ಗ್ರೌಂಡ್ ನಲ್ಲಿ ರಾತ್ರಿ ಪ್ರತಿಭಟನಾಕಾರರು ತಂಗಲಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಭಟನೆಕಾರರು ಕಾಲ್ನಡಿಗೆ ಜಾಥದ ಮೂಲಕ ಬರುವುದರಿಂದ ಬೆಂಗಳೂರಿಗೆ ಟ್ರಾಫಿಕ್ ಬಿಸಿ ತಟ್ಟಲಿದೆ.
Advertisement
ಬುಧವಾರ ಮಲ್ಲೇಶ್ವರಂನಿಂದ ಕಾಲ್ನಡಿಗೆಯಲ್ಲಿ ವಿಧಾನಸೌಧಕ್ಕೆ ಜಾಥಾ ಹೋಗಿ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಈ ಮಾರ್ಗಗಳಲ್ಲಿ ಟ್ರಾಫಿಕ್ ಉಂಟಾಗಲಿದ್ದು, ವಾಹನ ಸವಾರರಿಗೆ ತೊಂದರೆ ಆಗುವ ಸಾದ್ಯತೆ ಇದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv