ಬೆಂಗಳೂರು: ಕೆಲ ದಿನಗಳಲ್ಲಿ ಸುಮ್ಮನಾಗಿದ್ದ ಮಳೆರಾಯ ಮತ್ತೆ ಬೆಂಗಳೂರಲ್ಲಿ ಅಬ್ಬರಿಸಲಿದ್ದಾನೆ. ಇಂದು ಮತ್ತು ನಾಳೆ ಮಹಾನಗರಿಯಲ್ಲಿ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬುಧವಾರ ನೈರುತ್ಯ ಮುಂಗಾರು ಮಾರುತ ನಿರ್ಗಮಿಸಿದೆ. ಹಿಂಗಾರು ಮಾರುತ ಪ್ರವೇಶವಾಗಲಿದೆ. ಈ ಅವಧಿಯಲ್ಲಿ ಮಳೆ ಸರ್ವೆ ಸಾಮಾನ್ಯ. ಕೋರಮಂಗಲ, ಯಶವಂತಪುರ, ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಲಿದೆ.
Advertisement
ಶುಕ್ರವಾರ ಮೋಡಕವಿದ ವಾತಾವರಣ ಇದ್ದು, ಸಂಜೆ ವೇಳೆ ಗುಡುಗು ಸಹಿತ ಮಳೆಯಾಗಲಿದೆ. ಇತ್ತ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಹಲವಾರು ಪ್ರದೇಶಗಳಿಗೆ ನೀರು ನುಗ್ಗಿದೆ.