ಇಂದು ನಟ ಸಾರ್ವಭೌಮ ರಾಜ್‍ಕುಮಾರ್ ಜಯಂತಿ – ರಾಜ್ ಪುತ್ಥಳಿ ಬಳಿ ಅಭಿಮಾನಿಯ ಮದುವೆ

Public TV
1 Min Read
dr rajkumar

-ಪಬ್ಲಿಕ್ ಮ್ಯೂಸಿಕ್‍ನಲ್ಲಿ ದಿನವಿಡೀ ರಾಜ್ ಹಬ್ಬ

ಬೆಂಗಳೂರು: ಇಂದು ಕನ್ನಡದ ಕಣ್ಮಣಿ, ನಟ ಸಾರ್ವಭೌಮ ಮತ್ತು ವರನಟ ಡಾ. ರಾಜ್‍ಕುಮಾರ್ ಅವರ 89ನೇ ಜಯಂತಿ.

ಡಾ. ರಾಜ್ ಕುಮಾರ್ ಅವರು ಗಾಜನೂರಲ್ಲಿ 1929ರ ಏಪ್ರಿಲ್ 24ರಂದು ಜನಿಸಿದ್ದರು. ರಾಜಣ್ಣ, ಬೇಡರ ಕಣ್ಣಪ್ಪನಾಗಿ, ಗಂಧದ ಗುಡಿಯಲ್ಲಿ ಅವತರಿಸಿ ಶಬ್ಧವೇದಿವರೆಗೂ 206 ಸಿನಿಮಾಗಳಲ್ಲಿ ಒಂದಕ್ಕಿಂತ ಒಂದು ಅಪರೂಪದ ಪಾತ್ರಗಳಲ್ಲಿ ಮಾಡಿ ಕನ್ನಡ ನಾಡಿನ ಮನೆ-ಮನಗಳನ್ನು ಗೆದಿದ್ದಾರೆ.

1 2

ಪ್ರತಿ ಬಾರಿಯಂತೆ ರಾಜ್ ಸ್ಮಾರಕಕ್ಕೆ ಅಭಿಮಾನಿಗಳು ಹರಿದು ಬರುತ್ತಿದ್ದಾರೆ. ಕಟ್ಟಾ ಅಭಿಮಾನಿ ರುಧ್ರ ಎಂಬವರು ಕುರುಬರಹಳ್ಳಿಯ ರಾಜ್ ಪುತ್ಥಳಿ ಮುಂಭಾಗದಲ್ಲಿ ಮದುವೆಯಾಗಲಿದ್ದಾರೆ. ರುಧ್ರ ಮತ್ತು ಶಿಲ್ಪಾರೊಂದಿಗೆ ಇಂದು 11.30ರ ಶುಭ ಮೂಹುರ್ತದಲ್ಲಿ ಸಾಂಸರಿಕ ಜೀವನಕ್ಕೆ ಕಾಲಿರಿಸಲಿದ್ದಾರೆ .

ಡಾ. ರಾಜ್‍ಕುಮಾರ್ ಅವರ 89ನೇ ಜಯಂತಿ ಪ್ರಯುಕ್ತ ಇಂದು ಅವರ ಕುಟುಂಬದವರು ಕಂಠೀರವ ಸ್ಟುಡಿಯೋಗೆ ಹೋಗಿ ಅವರ ಸಮಾಧಿಗೆ ಪೂಜೆ ಸಲ್ಲಿಸದ್ದಾರೆ. ಡಾ.ರಾಜ್ ಕುಮಾರ್ ಜಯಂತಿ ಅಂಗವಾಗಿ ಶಿವರಾಜ್ ಕುಮಾರ್ ಅಭಿನಯದ ‘ರುಸ್ತುಂ’ ಚಿತ್ರ ಫಸ್ಟ್ ಲುಕ್ ರಿಲೀಸ್ ಆಗಿದೆ. ಸಾಹಸ ನಿರ್ದೆಶಕ ರವಿವರ್ಮ ನಿರ್ದೆಶಿಸಿದ್ದು, ಚಿತ್ರದಲ್ಲಿ ಶಿವಣ್ಣ ಮತ್ತೆ ಖಾಕಿ ಧರಿಸಲಿದ್ದು, ಮೀಸೆ ಬಿಟ್ಟ ರೂಪದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಶಿವಣ್ಣಗೆ ಜೋಡಿಯಾಗಿ ಶ್ರದ್ಧಾ ಶ್ರೀನಾಥ್ ಅಭಿನಯಿಸುತ್ತಿದ್ದಾರೆ.

raj kumar

ಇನ್ನು ರಾಜ್ ಹುಟ್ಟು ಹಬ್ಬದ ಪ್ರಯುಕ್ತ ಮಂಡ್ಯ, ಹಾಸನ, ಬೆಂಗಳೂರು ಮತ್ತು ಮೈಸೂರ್ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಟಗರು ಸಿನಿಮಾ ಟಿಕೆಟ್ ಮೇಲೆ 50% ರಿಯಾಯಿತಿ ನೀಡಲಾಗಿದೆ. ಡಾ. ರಾಜ್‍ಕುಮಾರ್ ಅವರ 89ನೇ ಜಯಂತಿ ಪ್ರಯುಕ್ತ ಮುಖ್ಯ ಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಫೋಟೋ ಹಾಕಿ ಡಾ. ರಾಜ್ ಅವರನ್ನು ಸ್ಮರಿಸಿದ್ದಾರೆ.

ಪಬ್ಲಿಕ್ ಟಿವಿ ಸಹ ಚಾನೆಲ್ ಪಬ್ಲಿಕ್ ಮ್ಯೂಸಿಕ್ ಇವತ್ತು ಇಡೀ ದಿನ ರಾಜ್‍ಕುಮಾರ್ ಮಯವಾಗಿರುತ್ತೆ.

Share This Article
Leave a Comment

Leave a Reply

Your email address will not be published. Required fields are marked *