– ಅಭಿಮಾನಿಗಳಿಂದ ಅನ್ನದಾನ, ರಕ್ತದಾನ
ಬೆಂಗಳೂರು: ಇಂದು ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್‍ರ 9ನೇ ಪುಣ್ಯತಿಥಿ. ಬೆಳಗ್ಗೆ ವಿಷ್ಣು ಕುಟುಂಬ ಅಭಿಮಾನ್ ಸ್ಟುಡಿಯೋಗೆ ಆಗಮಿಸಿ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.
ವಿಷ್ಣು ಪುಣ್ಯತಿಥಿ ಅಂಗವಾಗಿ ಅಭಿಮಾನಿಗಳು ಅನ್ನದಾನ, ರಕ್ತದಾನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾದೆ. ಕೇವಲ ಅಭಿಮಾನ್ ಸ್ಟುಡಿಯೋ ಮಾತ್ರವಲ್ಲ. ಆಟೋ ರಿಕ್ಷಾಗಳಲ್ಲೂ ಸಾಹಸ ಸಿಂಹನ ಭಾವಚಿತ್ರ ಹಾಕಿ, ಪೂಜೆ ಸಲ್ಲಿಸಲಾಗುತ್ತಿದೆ.
Advertisement
Advertisement
ವಿಷ್ಣುವರ್ಧನ್ ಅವರು ದೈಹಿಕವಾಗಿ ನಮ್ಮ ನಡುವೆ ಇಲ್ಲವಾದರೂ ಕೋಟ್ಯಾನುಕೋಟಿ ಜನರ ಹೃದಯ ಸಿಂಹಾಸನದಲ್ಲಿ ಅಚ್ಚಳಿಯದೇ ಕುಳಿತಿದ್ದಾರೆ. ಪ್ರತಿದಿನ ಪ್ರತಿ ಕ್ಷಣನೂ ವಿಷ್ಣುನಾ ಆರಾಧಿಸೋ ಭಕ್ತವಲಯ ಪ್ರತಿವರ್ಷ ದಾದಾ ಪುಣ್ಯಭೂಮಿಗೆ ಬಂದು ನಮಿಸುತ್ತಾರೆ. ಈ ವರ್ಷವೂ ರಾಜ್ಯದ ಮೂಲೆಮೂಲೆಯಿಂದ ಭಕ್ತರು ವಿಷ್ಣು ಪುಣ್ಯತಿಥಿಗೆ ಕೆಂಗೇರಿಯ ಅಭಿಮಾನ್ ಸ್ಟುಡಿಯೋಗೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಅಂಬಿಗೊಂದು ನ್ಯಾಯ, ವಿಷ್ಣುವಿಗೊಂದು ನ್ಯಾಯವೇ – ಮತ್ತೆ ಸಿಡಿದ ಅನಿರುದ್ಧ್
Advertisement
Advertisement
ಒಂಬತ್ತು ವರ್ಷ ಕಳೆದರೂ ಕರ್ಣನ ಪುಣ್ಯ ಭೂಮಿ ನಿರ್ಮಾಣಗೊಂಡಿಲ್ಲ ಅನ್ನೋ ಕೊರಗು ಇದ್ದೇ ಇದೆ. ಇತ್ತೀಚೆಗಷ್ಟೇ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟಿದ್ರು. ದಾದಾ ಪುಣ್ಯ ಭೂಮಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು. ಇಲ್ಲವಾದಲ್ಲಿ ಸಿಂಹಗಳನ್ನ ಬಡಿದೆಬ್ಬಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ರು. ಆ ಡೆಡ್‍ಲೈನ್ ಇಂದಿಗೆ ಮುಗಿಯಲಿದೆ. ಇದನ್ನೂ ಓದಿ: ವಿಷ್ಣುವರ್ಧನ್ ಅಳಿಯ ಅನಿರುದ್ಧ್ ವಿರುದ್ಧ ಸಿಎಂ ಕೆಂಡಾಮಂಡಲ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv