ಚಿಕ್ಕಬಳ್ಳಾಪುರ: ನಗರದ 65 ವರ್ಷದ ವೃದ್ಧ ಕೊರೊನಾಗೆ ಬಲಿಯಾದ ಬೆನ್ನಲ್ಲೇ ಈಗ ಅವರ ಮಗ ಸೇರಿ ಮೂರು ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟಿದ್ದರು. ಈಗ ಅವರ ಸಂಪರ್ಕದಲ್ಲಿದ್ದ ಅವರ ಕೊನೆಯ ಮಗ(26) ಹಾಗೂ ಮೃತರ ಜೊತೆ ಆತ್ಮೀಯವಾಗಿ ಸಂಪರ್ಕದಲ್ಲಿದ್ದ ಎದುರುಗಡೆ ಮನೆಯ 20 ಮತ್ತು 19 ವರ್ಷದ ಯುವಕರಿಗೆ ಸೋಂಕು ತಗುಲಿದೆ.
Advertisement
Advertisement
ವೃದ್ಧ ಮೃತಪಟ್ಟ ಬಳಿಕ ಅವರ ಕುಟುಂಬಸ್ಥರು ಸೇರಿ ಪ್ರಥಮ ಸಂಪರ್ಕಿತ 14 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿತ್ತು. ಅವರಲ್ಲಿ 9 ಮಂದಿಯ ವರದಿ ನೆಗೆಟಿವ್ ಬಂದಿದ್ದು, ಇಂದು ಮೂವರ ವರದಿ ಪಾಸಿಟಿವ್ ಎಂದು ಬಂದಿದೆ. ಇನ್ನು ಉಳಿದ ಮೂರು ಮಂದಿಯ ವರದಿ ಬರಬೇಕಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ 42 ಮಂದಿ ಸೋಂಕಿತರ ದ್ವೀತಿಯ ಸಂಪರ್ಕಿತರಿದ್ದು, ಅವರನ್ನೂ ಕ್ವಾರಂಟೈನ್ ಮಾಡಲಾಗಿದೆ.
Advertisement
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 38 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 353ಕ್ಕೆ ಏರಿದೆ. ನಾಗರಿಕರು ಸಾಮಾಜಿಕ ಅಂತರವನ್ನು ಪಾಲಿಸಿ, ಮನೆಯಲ್ಲಿಯೇ ಇರಬೇಕೆಂದು ವಿನಂತಿಸುತ್ತೇನೆ.#ಮನೆಯಲ್ಲೇಇರಿ pic.twitter.com/AU2WlSxVSx
— B Sriramulu (@sriramulubjp) April 17, 2020
Advertisement
ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 16ಕ್ಕೆ ಏರಿದ್ದು, 08 ಮಂದಿ ಗುಣಮುಖರಾಗಿದ್ದಾರೆ ಹಾಗೂ ಇಬ್ಬರು ಮೃತಪಟ್ಟಿದ್ದಾರೆ. ಉಳಿದ 06 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.