ಕನ್ನಡದ ನಟಿಯರಾದ ರಶ್ಮಿಕಾ ಮಂದಣ್ಣ(Rashmika Mandanna), ಶ್ರೀಲೀಲಾ, ರುಕ್ಮಿಣಿ ವಸಂತ್ ಅವರಂತೆ ಚೈತ್ರಾ ಆಚಾರ್ (Chaithra Achar) ಕೂಡ ಸೌತ್ನತ್ತ ಮುಖ ಮಾಡಿದ್ದಾರೆ. ಕನ್ನಡದ ಜೊತೆಗೆ ದಕ್ಷಿಣದ ಸಿನಿಮಾದಲ್ಲೂ ಮಿಂಚಲು ಅವರು ರೆಡಿಯಾಗಿದ್ದಾರೆ.
ಟೋಬಿ, ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರಗಳಲ್ಲಿ ಗುರುತಿಸಿಕೊಂಡ್ಮೇಲೆ ತಮಿಳಿನಿಂದ ಚೈತ್ರಾಗೆ ಉತ್ತಮ ಅವಕಾಶಗಳು ಅರಸಿ ಬಂದಿವೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಫಾರ್ಮ್ಹೌಸ್ನಲ್ಲಿ ದರ್ಶನ್ ಪತ್ನಿ ರಿಲ್ಯಾಕ್ಸ್- ಕುದುರೆ ಜೊತೆ ವಿಜಯಲಕ್ಷ್ಮಿ ಪೋಸ್
ಶಿವಣ್ಣ, ಡಾಲಿ, ಭಾವನಾ ಮೆನನ್, ಐಶ್ವರ್ಯಾ ರಾಜೇಶ್ ನಟನೆಯ ‘ಉತ್ತರಕಾಂಡ’ ಚಿತ್ರದಲ್ಲಿ ಚೈತ್ರಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಈ ಚಿತ್ರದ ರಿಲೀಸ್ ಬಗ್ಗೆ ಮಾಹಿತಿ ಸಿಗಲಿದೆ. ಇದನ್ನೂ ಓದಿ:ಚಿರಂಜೀವಿ ಜೊತೆ ನಟಿಸಲು ಅಬ್ಬಬ್ಬಾ 18 ಕೋಟಿ ಡಿಮ್ಯಾಂಡ್ ಮಾಡಿದ್ರಾ ನಯನತಾರಾ?
ಪ್ರತಿಭಾನ್ವಿತ ನಟ ರಾಜ್ ಬಿ ಶೆಟ್ಟಿ ಹೊಸ ಚಿತ್ರಕ್ಕೂ ಚೈತ್ರಾ ನಾಯಕಿಯಾಗಿದ್ದಾರೆ. ಟೋಬಿ ಬಳಿಕ ಮತ್ತೆ ಈ ಜೋಡಿ ಜೊತೆಯಾಗಿ ನಟಿಸಲಿದ್ದಾರೆ. ಒಂದಿಷ್ಟು ಚಿತ್ರಗಳ ಮಾತುಕತೆ ನಡೆಯುತ್ತಿದೆ.
ತಮಿಳು ನಟ ಸಿದ್ಧಾರ್ಥ್ ನಟನೆಯ ‘3BHK’ ಚಿತ್ರಕ್ಕೆ ಚೈತ್ರಾ ನಾಯಕಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಇವರೊಂದಿಗೆ ಶರತ್ ಕುಮಾರ್, ದೇವಯಾನಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಇದರ ಜೊತೆ ತಮಿಳಿನ ನಟ ಶಶಿಕುಮಾರ್ ಜೊತೆಗೂ ಅವರು ತೆರೆಹಂಚಿಕೊಂಡಿದ್ದಾರೆ. ಮತ್ತೊಂದು ಹೆಸರಿಡದ ಹೊಸ ಚಿತ್ರಕ್ಕೂ ಅವರು ಆಯ್ಕೆ ಆಗಿದ್ದಾರೆ.
ಒಟ್ನಲ್ಲಿ ಕನ್ನಡದ ಜೊತೆ ತಮಿಳಿನಲ್ಲೂ ಮಿಂಚಲು ‘ಟೋಬಿ’ ಬೆಡಗಿ ರೆಡಿಯಾಗಿದ್ದಾರೆ. ರಶ್ಮಿಕಾ, ಶ್ರೀಲೀಲಾರಂತೆಯೇ (Sreeleela) ಸೌತ್ನಲ್ಲಿ ಚೈತ್ರಾ ಮೋಡಿ ಮಾಡ್ತಾರಾ? ಎಂದು ಕಾದುನೋಡಬೇಕಿದೆ.