ಬೋಲ್ಡ್ ಆದ ‘ಟೋಬಿ’ ಸುಂದರಿ- ಕನ್ನಡದ ಆಲಿಯಾ ಭಟ್ ಎಂದ ಫ್ಯಾನ್ಸ್

Public TV
2 Min Read
chaithra achar

ಸ್ಯಾಂಡಲ್‌ವುಡ್ ನಟಿ ಚೈತ್ರಾ ಆಚಾರ್ (Chaithra Achar) ಮತ್ತೆ ಹೊಸ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಬೋಲ್ಡ್ ಆಗಿ ‘ಟೋಬಿ’ (Toby) ಸುಂದರಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ನ್ಯೂ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.

chaithra

ಬಿಳಿ ಬಣ್ಣದ ಶರ್ಟ್‌- ಲೈಟ್ ಕಲರ್ ಸ್ಕರ್ಟ್ ಧರಿಸಿದ್ದಾರೆ ಚೈತ್ರಾ. ಮಾದಕ ನೋಟ ಬೀರುವ ಮೂಲಕ ಸಖತ್ ಬೋಲ್ಡ್ & ಬ್ಯೂಟಿಫುಲ್ ಆಗಿ ಚೈತ್ರಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಚೈತ್ರಾ ಫೋಟೋ ನೋಡ್ತಿದ್ದಂತೆ ಬಾಲಿವುಡ್ ನಟಿ ಆಲಿಯಾ ಭಟ್‌ಗೆ ಹೋಲಿಸಿ ಹೊಗಳಿದ್ದಾರೆ ಫ್ಯಾನ್ಸ್. ಕನ್ನಡದ ಆಲಿಯಾ ಭಟ್ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

chaithra achar 1

ಇತ್ತೀಚೆಗೆ ಫೋಟೋಶೂಟ್‌ವೊಂದಕ್ಕೆ ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್ ಆಗಿತ್ತು. ಅದಕ್ಕೆ ಖಡಕ್ ಆಗಿ ಚೈತ್ರಾ ರಿಯಾಕ್ಟ್ ಮಾಡಿದ್ದರು. ದೇವರ ಹಾಡು ಹಾಡ್ತಾರೆ ಆದರೆ ಹಾಕುವ ಬಟ್ಟೆ ಈ ತರಹ ಎಂದು ಕಾಮೆಂಟ್ ಮಾಡುವವರಿಗೆ ನಟಿ ತಕ್ಕ ಉತ್ತರ ನೀಡಿದ್ದರು.

chaithra

ಬೇರೇ ಮನೆ ಹೆಣ್ಣು ಮಗಳ ಮರ್ಯಾದೆ ತೆಗೆಯಬೇಕು ಎಂದು ಪಣ ತೊಟ್ಟವರಿಗೆ ಏನು ಹೇಳೋದು ಅಂತಾ ನಟಿ ಗರಂ ಆಗಿದ್ದರು. ನನಗೆ ಯಾವ ವಿಚಾರ ತಪ್ಪು ಅಥವಾ ಸರಿ. ಎಲ್ಲಿ ಯಾವ ತರಹ ಇರಬೇಕು ಅನ್ನೋದು ಚೆನ್ನಾಗಿ ಗೊತ್ತು. ನಾನು ಬೆಳೆದು ಹಾದಿಯಲ್ಲಿ ನನ್ನ ಪೋಷಕರು ಮತ್ತು ಶಿಕ್ಷಕರು ನನಗೆ ಕಲಿಸಿ ಕೊಟ್ಟಿದ್ದಾರೆ ಎಂದು ನಟಿ ಪ್ರತಿಯುತ್ತರ ನೀಡಿದ್ದರು.

ನನ್ನ ಸಿನಿಮಾಗಳ ಮೂಲಕ ಜನಕ್ಕೆ ರೀಚ್ ಆಗುತ್ತೀದ್ದಿನಿ. ನಾನು ಏನೋ ಕೆಲಸ ಮಾಡಿದಾಗ ಒಳ್ಳೆತನದಿಂದ ಹಾರೈಸೋದು ತುಂಬಾ ಕಮ್ಮಿ. ಅವರನ್ನ ಕೆಳಗೆ ಇಳಿಸುವಂತಹ ಮನಸ್ಥಿತಿ ಇರೋರು. ಯಾವುದೇ ರೀತಿಯ ಪೋಸ್ಟ್ ಇದ್ದರು ಕೆಟ್ಟ ಕಾಮೆಂಟ್‌ಗಳನ್ನೇ ಮಾಡುತ್ತಾರೆ ಅಂತಹವರಿಗೆ ಏನು ಹೇಳೋದು ಎಂದು ಅಸಮಾಧಾನ ಹೊರಹಾಕಿದ್ದರು. ಇದನ್ನೂ ಓದಿ:ಸೆಲೆಬ್ರೇಶನ್ ಮೂಡ್‌ನಲ್ಲಿ ಸಿಂಹಪ್ರಿಯಾ ಜೋಡಿ- ಫ್ಯಾನ್ಸ್‌ಗೆ ಲವ್ಲಿ ವಿಶ್ಸ್

2023ರಲ್ಲಿ ‘ಟೋಬಿ’ ಮತ್ತು ‘ಸಪ್ತಸಾಗರದಾಚೆ ಎಲ್ಲೋ’ ಪಾರ್ಟ್ 2 ಈ ಚಿತ್ರಗಳು ಚೈತ್ರಾ ಆಚಾರ್ ಕೆರಿಯರ್‌ಗೆ ಬಿಗ್ ಬ್ರೇಕ್ ನೀಡಿದೆ. ಇದೀಗ ದೀಕ್ಷಿತ್ ಶೆಟ್ಟಿ ಜೊತೆಗಿನ ‘ಬ್ಲಿಂಕ್’ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳು ಚೈತ್ರಾ ಕೈಯಲ್ಲಿದೆ.

Share This Article