‘ಟೋಬಿ’, ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ಮೂಲಕ ಮನಗೆದ್ದ ನಟಿ ಚೈತ್ರಾ ಆಚಾರ್ (Chaithra Achar) ನಟನೆಯ ಹೊಸ ಸಿನಿಮಾವೊಂದು ನೇರವಾಗಿ ಒಟಿಟಿ ಫ್ಲಾರ್ಟ್ ಫಾರಂನಲ್ಲಿ ರಿಲೀಸ್ ಆಗುತ್ತಿದೆ. ಡಿಫರೆಂಟ್ ಅವತಾರದಲ್ಲಿ ಬೋಲ್ಡ್ ಬೆಡಗಿ ಚೈತ್ರಾ ಕಾಣಿಸಿಕೊಳ್ತಿದ್ದಾರೆ. ಒಟಿಟಿಯಲ್ಲಿ ಡೇಟ್ ಕೂಡ ಫಿಕ್ಸ್ ಆಗಿದೆ. ಇದನ್ನೂ ಓದಿ:ಬ್ರೇಕಪ್ ಬಳಿಕ ಜೀವನ ಹೇಗಿದೆ ಎಂದು ಹಾಡಿದ ಶ್ರುತಿ ಹಾಸನ್
‘ಹ್ಯಾಪಿ ಬರ್ತ್‌ಡೇ ಟು ಮಿ’ (Happy Birthday To Me) ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಟೋಬಿ ನಟಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸ್ಕೂಲ್ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಚೈತ್ರಾ ಪಾತ್ರದ ಸುತ್ತ ಹಲವು ಪಾತ್ರಗಳಿವೆ. ಅದು ಪೋಸ್ಟರ್‌ನಲ್ಲಿ ಹೈಲೆಟ್ ಆಗಿದೆ. ಇದೇ ಜೂನ್ 28ರಂದು ಒಟಿಟಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
View this post on Instagram
ಅಂದಹಾಗೆ, ಈ ಸಿನಿಮಾದಲ್ಲಿ ಸಿದ್ದು ಮೂಲಿಮನಿ, ಅರ್ಚನಾ ಕೊಟ್ಟಿಗೆ, ರಚನಾ ರೈ, ಗೋಪಾಲ ದೇಶಪಾಂಡೆ ಸೇರಿದಂತೆ ಹಲವರು ನಟಿಸಿದ್ದಾರೆ. ಇದನ್ನೂ ಓದಿ:ಪ್ರಿನ್ಸ್ ಫ್ಯಾನ್ಸ್‌ಗೆ ಸಿಹಿಸುದ್ದಿ- ರಾಜಮೌಳಿ ಜೊತೆಗಿನ ಮಹೇಶ್ ಬಾಬು ಚಿತ್ರಕ್ಕೆ ಮುಹೂರ್ತ ಫಿಕ್ಸ್
ಇನ್ನೂ ಕನ್ನಡದ ಸಿನಿಮಾ ಜೊತೆಗೆ ತಮಿಳಿನಲ್ಲಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ನಿರ್ಮಾಣ ಸಂಸ್ಥೆಯ ಅಧಿಕೃತ ಘೋಷಣೆಗೆ ನಟಿ ಕಾಯ್ತಿದ್ದಾರೆ.