ಕನ್ನಡದ ‘ಟೋಬಿ’ (Toby) ಸಿನಿಮಾ ನಟಿ ಚೈತ್ರಾ ಆಚಾರ್ (Chaithra Achar) ಸದಾ ಒಂದಲ್ಲಾ ಒಂದು ಹಾಟ್ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ರವಿಕೆ ಧರಿಸದೆ ಸೀರೆಯುಟ್ಟು ಬೋಲ್ಡ್ ಆಗಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಮತ್ತೊಂದು ರೊಮ್ಯಾಂಟಿಕ್ ಸಿನಿಮಾ ಒಪ್ಪಿಕೊಂಡ ತೃಪ್ತಿ ದಿಮ್ರಿ
ಸದ್ಯ ಕನ್ನಡದ ಆಲಿಯಾ ಭಟ್ ಎಂದೇ ಫೇಮಸ್ ಆಗಿರುವ ಈ ಟೋಬಿ ನಟಿ ಮತ್ತೆ ಹೊಸ ಫೋಟೋಶೂಟ್‌ನಿಂದ ಇಂಟರ್‌ನೆಟ್‌ನಲ್ಲಿ ಕಮಾಲ್ ಮಾಡಿದ್ದಾರೆ. ರವಿಕೆ ಧರಿಸದೆ ಬೆನ್ನು ತೋರಿಸಿ ಸೀರೆಯಲ್ಲಿ ಮಿಂಚಿರೋದು ಈಗ ಪಡ್ಡೆಹುಡುಗರ ನಿದ್ದೆ ಕೆಡಿಸಿದೆ.
ಬಿಳಿ ಬಣ್ಣದ ಸೀರೆಯುಟ್ಟು ಕೆಂಪು ಗಾಜಿನ ಬಳೆ ಹಾಕಿಕೊಂಡು ಮುದ್ದಾಗಿ ನಟಿ ಕಾಣಿಸಿಕೊಂಡಿದ್ದಾರೆ. ಬ್ಲೌಸ್ ಧರಿಸದೆ ಸೀರೆ ಉಟ್ಟಿರೋದಕ್ಕೆ ಬೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಕೆಟ್ಟ ಕಾಮೆಂಟ್ಸ್‌ಗೆ ತಲೆ ಕೆಡಿಸಿಕೊಳ್ಳದೆ ರವಿಕೆ ಯಾಕೆ ಬೇಕು, ಮಾನ ಮುಚ್ಚಲು ಸೀರೆ ಸಾಕು ಎಂದು ಚೈತ್ರಾ ಸಖತ್ ಆಗಿಯೇ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ಇನ್ನೂ ಕನ್ನಡತಿ ಚೈತ್ರಾ ತಮಿಳಿನ ಎರಡು ಬಂಪರ್ ಆಫರ್‌ಗಳನ್ನು ಬಾಚಿಕೊಂಡಿದ್ದಾರೆ. ಸ್ಟಾರ್ ನಟ ಸಿದ್ಧಾರ್ಥ್‌ಗೆ ನಾಯಕಿಯಾಗಿ ಚೈತ್ರಾ ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಗಳಿಂದ ನಟಿಗೆ ಅವಕಾಶಗಳು ಅರಸಿ ಬರುತ್ತಿವೆ.
ಸಪ್ತಸಾಗರದಾಚೆ ಎಲ್ಲೋ, ‘ಟೋಬಿ’ (Toby) ಸಿನಿಮಾದಲ್ಲಿ ನಟಿಸಿದ ಮೇಲೆ ಚೈತ್ರಾ ಆಚಾರ್‌ಗೆ ಬೇಡಿಕೆ ಜಾಸ್ತಿಯಾಗಿದೆ. ರಕ್ಷಿತ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿ ಅದ್ಭುತವಾಗಿ ನಟಿಸಿದರು.
2019ರಲ್ಲಿ ‘ಮಹಿರಾ’ (Mahira) ಸಿನಿಮಾದ ಮೂಲಕ ಚೈತ್ರಾ ಆಚಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದಾದ ಬಳಿಕ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದರು.