ಬೆಳಗಾವಿ: ಪಕ್ಷಕ್ಕೆ ಡ್ಯಾಮೇಜ್ ಆಗುವುದನ್ನು ತಡೆಯಲು ಹಿಂದೂ ಧರ್ಮದ ಹೇಳಿಕೆಯನ್ನು ವಾಪಸ್ ಪಡೆದಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ನಾನು ಹೇಳಿದ ಮಾತನ್ನು ವಾಪಸ್ ಪಡೆಯಲು ಒತ್ತಡ ಇತ್ತು. ಬೇರೆ ಬೇರೆ ಕಾರಣದಿಂದ ಒತ್ತಡ ಇತ್ತು. ನನ್ನ ಹೇಳಿಕೆಯನ್ನು ವಾಪಸ್ ಪಡೆದಿರುವೆ. ನಿನ್ನೆ ಎಲ್ಲ ನಾಯಕರೊಂದಿಗೆ ಚರ್ಚೆ ನಡೆಸಿ ವಾಪಸ್ ಪಡೆದಿದ್ದೇನೆ ಎಂದರು. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ: ಕಾಂಗ್ರೆಸ್, ಬಿಜೆಪಿ ಪೈಪೋಟಿ – ಆಪ್ ಅಸ್ತಿತ್ವಕ್ಕಾಗಿ ಹೋರಾಟ
ನೈಜ ಸುದ್ದಿ ಬಿಟ್ಟು ಬೇರೆ ಬೇರೆ ಆಯಾಮದಲ್ಲಿ ಚರ್ಚೆ ಆರಂಭ ಆಗಿದೆ. ವೈಯಕ್ತಿಕವಾಗಿ ಪಕ್ಷಕ್ಕೆ ಡ್ಯಾಮೇಜ್ ಆಯಿತು. ಬೇರೆ ನಾಯಕರು ಸಮರ್ಥನೆ ಮಾಡುವ ಪ್ರಶ್ನೆ ಇಲ್ಲ. ಅದು ಖಾಸಗಿ ಕಾರ್ಯಕ್ರಮ, ಪಕ್ಷದ ಕಾರ್ಯಕ್ರಮ ಅಲ್ಲ ಎಲ್ಲರೂ ಬೆಂಬಲಿಸುವ ನಿರೀಕ್ಷೆ ಇರಲಿಲ್ಲ. ಆದರೂ ಕೆಲವರು ಮಾತನಾಡಿದ್ದಾರೆ ಎಂದರು.
ಇದು ಇಷ್ಟಕ್ಕೆ ನಿಂತಿಲ್ಲ ಸ್ವಪಕ್ಷ, ವಿರೋಧ ಪಕ್ಷ ಹಾಗೂ ಮಾಧ್ಯಮಗಳ ಮುಂದೆ ಕೆಲ ಸಂಗತಿ ಹೇಳುತ್ತೇವೆ. ನನಗೆ ಪಕ್ಷ ದೊಡ್ಡದು ಹೀಗಾಗಿ ಪಕ್ಷದ ಡ್ಯಾಮೇಜ್ ಆಗಬಾರದೆಂದು ಆ ಪದ ವಾಪಸ್ ಪಡೆದಿರುವೆ ನನ್ನ ಮೇಲಿನ ಆರೋಪದ ಬಗ್ಗೆ ಎಲ್ಲರಿಗೂ ತಿಳಿಸುವ ಕೆಲಸ ಮಾಡುತ್ತೇವೆ. ಮುಖ್ಯಮಂತ್ರಿಗಳು ನನ್ನ ಪತ್ರದ ತನಿಖೆ ಮಾಡಬೇಕು ಎಂದು ಜಾರಕಿಹೊಳಿ ಆಗ್ರಹಿಸಿದರು.
ನನ್ನ ಮೇಲೆ ಯಾರ ಒತ್ತಡವು ಇಲ್ಲ. ಜಿಲ್ಲೆಯ ನಾಯಕರ ಜೊತೆಗೆ ಚರ್ಚೆ ಮಾಡಿ ಹೇಳಿಕೆ ವಾಪಸ್ ಪಡೆದಿರುವೆ. ಪ್ರತಿ ಗಂಟೆ ಲೆಕ್ಕದಲ್ಲಿ ಡ್ಯಾಮೇಜ್ ಆರಂಭ ಆಯ್ತು. ಹೀಗಾಗಿ ನಿನ್ನೆಯೇ ಸಿಎಂಗೆ ಪತ್ರ ಬರೆದಿರುವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.