ಶಿವಮೊಗ್ಗ: ಇಂದು ವಿಶ್ವ ಸಂತೋಷದ ದಿನ. ಪ್ರಪಂಚಕ್ಕೆ ಸಂತೋಷ ಕೊಡಬೇಕಿದ್ರೆ ಅದು ಭಾರತೀಯ ಸಂಸ್ಕೃತಿಯಿಂದ ಮಾತ್ರ ಸಾಧ್ಯ. ಭಾರತೀಯ ವಿಧಾನವೇ ಎಲ್ಲರನ್ನು ಜೋಡಿಸುವುದು, ಎಲ್ಲರನ್ನು ಒಂದುಗೂಡಿಸುವುದು ಆಗಿದೆ ಎಂದು ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ ತಿಳಿಸಿದರು.
Advertisement
ಶಿವಮೊಗ್ಗದಲ್ಲಿ ಆರ್ಟ್ ಆಫ್ ಲಿವಿಂಗ್‍ನ 40ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಜ್ಞಾನಕ್ಷೇತ್ರ ಕಟ್ಟಡ ಉದ್ಘಾಟನೆ ಹಾಗೂ ವಿಶ್ವಶಾಂತಿ, ಆರೋಗ್ಯ ಮತ್ತು ಲೋಕ ಕಲ್ಯಾಣಾರ್ಥವಾಗಿ ರುದ್ರಪೂಜೆ ಮತ್ತು ಸತ್ಸಂಗ ಕಾರ್ಯಕ್ರಮ ನಡೆಯಿತು. ನಗರದ ನವುಲೆಯ ನವನಗರ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಜ್ಞಾನಕ್ಷೇತ್ರ ಕಟ್ಟಡವನ್ನು ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ಡಾ.ಕೆ.ಸಿ.ನಾರಾಯಣಗೌಡ ಉದ್ಘಾಟಿಸಿದರು. ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ ನೇತೃತ್ವದಲ್ಲಿ ರುದ್ರಪೂಜೆ ಹಾಗೂ ಸತ್ಸಂಗ ನಡೆಯಿತು. ಇದನ್ನೂ ಓದಿ: ಸೋಮವಾರ ನಸುಕಿನ ಜಾವ ಬೆಂಗಳೂರಿಗೆ ತಲುಪಲಿದೆ ನವೀನ್ ಶೇಖರಪ್ಪ ಮೃತದೇಹ
Advertisement
ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಶಂಕರ್ ಗುರೂಜಿ, ಮನುಷ್ಯ ಜೀವನ ಸಿಕ್ಕಿರುವುದು ಸುಮ್ಮನೆ ಉಂಡು, ತಿಂದು, ಮಲಗಿ, ಸಾಯೋದಕ್ಕಲ್ಲ. ನಗು ನಗುತಾ ಬಾಳುವುದು ಮನುಷ್ಯನ ಧರ್ಮ. ಕರ್ನಾಟಕದ ಜನರು ಸೌಮ್ಯ ಸ್ವಭಾವದವರು. ಇಂದು ಈ ಸೌಮ್ಯತನ ಇಡಿ ಪ್ರಪಂಚಕ್ಕೆ ಬೇಕಾಗಿದೆ. ನಮ್ಮಲ್ಲಿ ಸ್ವೀಕಾರ ಮನೋಭಾವ, ಸಹೃದಯತೆ ಇದೆಯಲ್ಲಾ ಅದು ಸಭ್ಯ ಸಂಸ್ಕೃತಿಗೆ, ಸಭ್ಯ ಸಮಾಜಕ್ಕೆ ಅವಶ್ಯಕತೆಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಫ್ರೀ ಲಿಂಕ್ ಬಗ್ಗೆ ಇರಲಿ ಎಚ್ಚರ – ಮಂಗಳೂರಿನಲ್ಲೂ ಸೈಬರ್ ವಂಚನೆ ಬೆಳಕಿಗೆ
Advertisement
Advertisement
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಯು.ಟಿ.ಖಾದರ್, ಶಾಸಕ ಬಿ.ಕೆ.ಸಂಗಮೇಶ್, ಎಂಎಲ್‍ಸಿ ಡಿ.ಎಸ್.ಅರುಣ್, ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.