ಕೋಲಾರ: ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಹಾಗೂ ಸಾಗಾಣಿಕೆಗೆ ಕಡಿಮೆ ವೆಚ್ಚದಲ್ಲಿ ಸಾರಿಗೆ ವ್ಯವಸ್ಥೆ ಮಾಡುವ ಮೂಲಕ ರೈತರಿಗೆ ಅನುಕೂಲವಾಗುವಂತೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ತೋಟಗಾರಿಕೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ತಿಳಿಸಿದರು.
ಕೋಲಾರದ ಶ್ರೀನಿವಾಸಪುರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಕೊಡುಗೆ ನೀಡಿದೆ. ಸಂಸದರಾದ ಎಸ್.ಮುನಿಸ್ವಾಮಿ pic.twitter.com/R8D4va72R1
— Munirathna (@MunirathnaMLA) August 26, 2021
Advertisement
ಇಂದು ಶ್ರೀನಿವಾಸಪುರ ನಗರದ ಪುರಸಭಾ ಕಾರ್ಯಾಲಯ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡಿದ ಅವರು, ಕೋಲಾರ ಬೆಂಗಳೂರಿಗೆ ಸಮೀಪದ ಜಿಲ್ಲೆಯಾಗಿರುವುದರಿಂದ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಪಡಿಸಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಹೆಚ್ಚಿನ ಕೊಡುಗೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.
Advertisement
Advertisement
ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾವಂತರು ಇದ್ದಾರೆ. ವಿದ್ಯಾಭ್ಯಾಸಕ್ಕೆ ಜಿಲ್ಲೆಯಲ್ಲಿ ಹೆಚ್ಚಿನ ಮಹತ್ವವಿದೆ. ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಇಬ್ಬರು ವಿದ್ಯಾರ್ಥಿನಿಯರಾದ ಪೂರ್ವಿ.ಕೆ ಬೈರೇಶ್ವರ ವಿದ್ಯಾನಿಕೇತನ ಶಾಲೆ ಮತ್ತು ವರ್ಷಿಣಿ. ಸೆಂಟ್ ತೇರಿಸಾ ಶಾಲೆ ರಾಬರ್ಟ್‍ಸನ್ ಪೇಟೆ ಅವರಿಗೆ ಸಚಿವರು ಲ್ಯಾಬ್ ಟ್ಯಾಪ್‍ಗಳನ್ನು ನೀಡಿದರು. ಇದನ್ನೂ ಓದಿ: ಗೃಹ ಸಚಿವರ ಮೇಲೆ ರೇಪ್ ಮಾಡಿರುವವರನ್ನು 376 ಸೆಕ್ಷನ್ ಕೇಸ್ ಹಾಕಿ ಬಂಧಿಸಲಿ: ಡಿ.ಕೆ ಶಿವಕುಮಾರ್
Advertisement
#Kolar #Srinivaspur @bjp_muniswamy #KRRameshKumar #MunicipalityBuilding #BJP @BSBommai @CMofKarnataka pic.twitter.com/ogzKY7cmyU
— Munirathna (@MunirathnaMLA) August 26, 2021
ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆಯನ್ನು ಎದುರಿಸಲು ಆಸ್ಪತ್ರೆಗಳಿಗೆ ವೈದ್ಯಕೀಯ ಸಲಕರಣೆಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಮೂಲಕ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಮ್ಲಜನಕದ ಕೊರತೆಯನ್ನು ನೀಗಿಸಲು ನಗರ ಪ್ರದೇಶದಲ್ಲಿ ಹೆಚ್ಚಿನ ಮರಗಳನ್ನು ಬೆಳಸಬೇಕು. ಕನಿಷ್ಠ ಮನೆಗೆ 2 ಮರ ಬೆಳಸಬೇಕು. ರಸ್ತೆ, ಚರಂಡಿಗಳನ್ನು ನಿರ್ಮಾಣವಾಗಬೇಕು ಎಂದು ಅವರು ಹೇಳಿದರು.
ಶ್ರೀನಿವಾಸಪುರ ತಾಲೂಕು ಮಾವಿನ ಹಣ್ಣಿಗೆ ವಿಶ್ವ ಪ್ರಸಿದ್ಧಿಯಾಗಿದೆ. ರೈತರಿಗೆ ಅನುಕೂಲವಾಗಲಿ ಎಂದು ಸರ್ಕಾರ 10 ಸಾವಿರ ಎಫ್.ಇ.ಓ ಸ್ಥಾಪಿಸುವ ಉದ್ದೇಶ ಹೊಂದಿದೆ. ರೈತರು ಬೆಳೆದ ಟೊಮೊಟೊ ಮತ್ತು ಮಾವಿನ ಹಣ್ಣುಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಅರಗ ಜ್ಞಾನೇಂದ್ರ
ಕೋಲಾರದ ಶ್ರೀನಿವಾಸಪುರ ಪುರಸಭೆಯ ನೂತನ ಕಾರ್ಯಾಲಯವನ್ನು ಇಂದು ಉದ್ಘಾಟಿಸಿದೆ. ಸಂಸದರಾದ ಎಸ್.ಮುನಿಸ್ವಾಮಿ, ಶಾಸಕ ಕೆ.ಆರ್.ರಮೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. pic.twitter.com/PXE38Vuqq8
— Munirathna (@MunirathnaMLA) August 26, 2021
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಆರ್.ರಮೇಶ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮುಂದಾಲೋಚನೆಯಿಂದ ನಗರದಲ್ಲಿ ಆಸ್ಪತ್ರೆ. ಶಾಲೆ, ಕಾಲೇಜು, ಬಸ್ ನಿಲ್ದಾಣ, ಮಾರುಕಟ್ಟೆ, ಒಳಚರಂಡಿ ವ್ಯವಸ್ಥೆ, ಕಟ್ಟಡಗಳು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಕ್ರೀಡಾಂಗಣದಲ್ಲಿ ಈಜುಕೊಳ, ಅಥ್ಲೆಟಿಕ್ ಹಾಗೂ ವಿವಿಧ ಕ್ರೀಡೆಗೆ ಅನುಕೂಲವಾಗುವಂತೆ ನಿರ್ಮಿಸಲಾಗುತ್ತಿದೆ ಎಂದರು.
ಮಾಂಸದ ಮಾರುಕಟ್ಟೆ ವಿದೇಶದ ಮಾದರಿಯಲ್ಲಿ ಏರ್ ಕಂಡೀಷನ್ ಮಾರುಕಟ್ಟೆ ನಿರ್ಮಿಸಲಾಗುತ್ತದೆ. ದೇವಸ್ಥಾನ, ಸ್ಮಶಾನ, ಪ್ರಾರ್ಥನಾ ಮಂದಿರಗಳು ಹಾಗೂ ಬಡವರಿಗೆ ಮನೆಗಳನ್ನು ನಿರ್ಮಿಸಲಾಗಿದೆ. ಇಂದಿರಾ ನಗರದ ಲೇಔಟ್‍ನಲ್ಲಿ ಒಂದು ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಮಾತನ್ನು ವಾಪಸ್ ಪಡೆಯುತ್ತೇನೆ – ಕ್ಷಮೆಯಾಚಿಸಿದ ಗೃಹ ಸಚಿವ
#Kolar #Srinivaspur @bjp_muniswamy #KRRameshKumar #MunicipalityBuilding #BJP @BSBommai @CMofKarnataka pic.twitter.com/in3tcAfqNI
— Munirathna (@MunirathnaMLA) August 26, 2021
ನಗರ ಪ್ರದೇಶದಲ್ಲಿ ಉನ್ನತ ಮಟ್ಟದ ರಸ್ತೆಗಳನ್ನು ನಿರ್ಮಿಸಲು ಅನುದಾನ ನೀಡುವಂತೆ ಸಚಿವರಲ್ಲಿ ಶಾಸಕರು ಮನವಿ ಮಾಡಿದರು. ಪೌರಕಾರ್ಮಿಕರಿಗೆ ಹಾಗೂ ನಿವೃತ್ತಿ ಹೊಂದಿದ ಪೌರಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ತಿಳಿಸಿದರು.